ಪುಟ:ಶ್ರೀ ಕೃಷ್ಣ ಲೀಲೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೮ಕೃಷ್ಣಲೀಲೆ.

  ದೇವತೆಗಳು ಗಗನ ಮಂಡಲದಿಂದ, ಶ್ರೀ ಕೃಷ್ಣನ ಮೇಲೆ ಪೂಮಳೆ
ಗರೆಯುವರು. ಕಾಳೀಯನ ಪತ್ನಿಯರು ಶ್ರೀ ಕೃಷ್ಣಮೂರ್ತಿಯ
ಪಾದ ಪದ್ಮಗಳನ್ನು ಪುಷ್ಪಗಳಿಂದ ಪೂಜಿಸುತ್ತ ಪ್ರಾರ್ಥಿಸುವರು.

ಕಾಳಿಂಗನ ಪತ್ನಿಯರು :-
ಉ|| ವರ ಬೃಂದಾವನ ವಾಸ ಲೀಲ ಮುನಿಗೋ ಬೃಂದಾವನಾಮೋದ ಶ್ರೀ|
     ಕರ ರಾಧಾ ಮಣಿಲೋಲ ಸರ್ವ ಸುಗುಣಾನಂದಾಲ ವಾಲಾ ಸದಾ||
     ಮುರಳೀಗಾನ ವಿಲೋಲ ಗೋಪ ರಮಣೀ ಸೌಭಾಗ್ಯ ಚಂದ್ರೋದಯಾ|
     ಪರಮಾನಂದ ಮುಕುಂದ ಕೃಷ್ಣ ಹರಿ ಗೋವಿಂದಾ ನಮಸ್ತೇ ನಮಃ ||

ಎಲೈ ಸರ್ವಶಕ್ತನಾದ ಭಗವಂತನೇ ! “ಸವೋಹಂ ಸರ್ವ ಭೂ
ತೇಷು, ನಮದ್ವೇಷ್ಯೋಸ್ತಿನ ಪ್ರಿಯಃ|| ಎಂಬ ನಿನ್ನ ಶಾಸನದಂತೆ
ನಿನಗೆ ವಿರೋಧಿಯೂ ಇಲ್ಲ. ಇಷ್ಟನೂ ಇಲ್ಲ. ಆದಾಗ್ಯೂ ಯಾವಾಗ
ಅಧರ್ಮವು ಹೆಚ್ಚಿ ಧರ್ಮ ವು ಕಳೆಗುಂದುವುದೋ ಆಗ ನೀನು ಮರ್ತ್ಯ ಲೋ
ಕದಲ್ಲಾವರಿಸಿ, ಅಧರ್ಮ ಪ್ರವರ್ತಕರಾದ ದುರ್ಮಾರ್ಗರನ್ನು ಶಿಕ್ಷಿಸಿ, ಧರ್ಮಾತ್ಮ
ರಾದ ಸಾಧು ಜನರನ್ನು ಕಾಪಾಡುತ್ತಿರುವೆ. ನಿನ್ನ ಆಗ್ರಹ ಅನುಗ್ರ
ಹಗಳೆರಡೂ ಲೋಕ ರಕ್ಷಣಾರ್ಥವಾಗಿಯೇ ಹೊರತು, ಪ್ರತ್ಯೇಕವಾಗಿ
ನಿನಗೆ ಯಾರಲ್ಲಿಯೂ ದ್ವೇಷವಿಲ್ಲವು. ಎಲೈ ವಾಸುದೇವನೇ! ನಿನ್ನ
ಪಾದ ಧೂಳಿಯು ಯಾರ ತಲೆಯ ಮೇಲೆ ಬೀಳುವುದೋ ಅಂಥವರು ಇಂದ್ರ
ಪದವಿಯನ್ನು ತೃಣ ಪ್ರಾಯವಾಗಿ ಭಾವಿಸುವರು. ಇವನು ಶತ್ರುವು, ಇವ
ನು ಮಿತ್ರನು ಎಂಬ ಮಾತ್ಸರ್ಯವಿಲ್ಲದೆ, ಲೋಕ ರಕ್ಷಣಾರ್ಥವಾದ ದುಷ್ಟ
ಶಿಕ್ಷಣಗ ಶಿಷ್ಟ ರಕ್ಷಣಗಳೇ ನಿನ್ನ ಮುಖ್ಯೋದ್ದೇಶವಾಗಿರುವುದರಿಂದ
ನೀನು ಯಾವುದರಲ್ಲಿಯೂ ಸಂಬಂಧವಿಲ್ಲದೆ ನಿರ್ಲಿಪ್ತನಾಗಿರುವೆ.

ಶ್ಲೋ|| ಆತ್ಮಜ್ಞಾನಮಿದ೦ ಜ್ಞಾನಂ| ಜ್ಞಾತ್ವಾಪಂಚಸ್ವವಸ್ಥಿತಂ|
       ಯಂ ಜ್ಞಾನೇನಾಧಿಗಚ್ಚಂತಿ | ತಸ್ಮೈಜ್ಞಾನಾತ್ಮನೇ ನಮಃ||

   ಭೂತಜಾಲದಲ್ಲಿ ನೆಲೆಗೊಂಡಿರುವ ಜ್ಞಾನ ಸ್ವರೂಪನಾದ ಯಾವ
ಭಗವಂತನನ್ನು ಜ್ಞಾನವಂತರಾದವರು, ಜ್ಞಾನಬಲದಿಂದ ತಿಳಿದು
ಧನ್ಯರಾಗುವರೋ ಅಂತಹ ಜ್ಞಾನಾತ್ಮನಾದ ನಿನಗೆ ನಮಸ್ಕಾರಗಳು !