ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೯ಚತುರ್ಥಾಂಕಂ,

  "ಯೇಮೋಹ ಯತಿ ಭೂತಾನಿ|| ಸ್ನೇಹ ಪಾಶಾನು ಬಂಧನೈಃ|
   ಸರ್ವಸ್ಯ ರಕ್ಷಣಾರ್ಥಾಯ| ತಸ್ಮೈ ಮೋಹಾತ್ಮನೇ ನಮಃ”||

  ಯಾವಾತನು ಸೃಷ್ಟಿಯನ್ನು ಪಾಲಿಸುವುದಕ್ಕಾಗಿ ಸ್ನೇಹವೆಂಬ
ಪಾಶಗಳಿಂದ ಸಮಸ್ತ ಭೂತಗಳನ್ನೂ ಬಂಧಿಸಿ ಮೋಹಗೊಳಿಸುತ್ತಿರು
ವನೋ ಅಂತಹ ಜಗನ್ಮೋಹಕ ಸ್ವರೂಪನಾದ ನಿನಗೆ ನಮಸ್ಕಾರಗಳು!

    "ಚೈತನ್ಯಂ ಸರ್ವತೋ ನಿತ್ಯಂ| ಸರ್ವಪಾಣಿ ಹೃದಿಸ್ಥಿತಂ।
     ಸರ್ವಾತೀತ ತರ೦ ಸೂ__| ತಸ್ಮೈಕ್ಷಾತ್ಮನೇ ನಮಃ ”

    ಯಾವಾತನು ಶಾಂತ ಸ್ವರೂಪವುಳ್ಳವನಾಗಿ ಸಕಲ ಪ್ರಾಣಿಗಳ
ಹೃದಯ ಮಧ್ಯದಲ್ಲಿ ಬಹು ಸೂಕ್ಷ್ಮ ಭಾವದಿಂದ ಚೈತನ್ಯ ಸ್ವರೂಪನಾಗಿ
ಪ್ರಕಾಶಿಸುತ್ತಿರುವನೋ ಅಂತಹ ಸೂಕ್ಷ್ಮ ಸ್ವರೂಪನಾದ ನಿನಗೆ ನಮ
ಸ್ಕಾರಗಳು!

   ಪಂಚ ಭೂತಾತ್ಮ ಭೂತಾಯ| ಭೂತಾದಿ ನಿಧನಾಯಚ|
   ಅಕ್ರೋಧ ದ್ರೋಹ ಮೋಹಾಯ| ತಸ್ಮೈ ಶಾಂತಾತ್ಮನೇ ನಮಃ"

ಯಾವ ಮಹಾ ಮಹಿಮನು ಪಂಚ ಭೂತಗಳಿಗೂ ಆತ್ಮಭೂತನಾಗಿ
ಕ್ರೋಧ,ದ್ರೋಹ, ಮೋಹ, ಶೂನ್ಯನಾಗಿ ಮೆರೆಯುವನೋ ಅಂತಹ
ಶಾಂತಾತ್ಮನಾದ ನಿನಗೆ ನಮಸ್ಕಾರಗಳು!

    "ಯಸ್ಮಿನ್ ಸರ್ವಂಯತಸ್ಸರ್ವಂಯಃ ಸರ್ವತಶ್ಚಯಃ|
     ಯಶ್ಚ ಸರ್ವಮಯೋ ದೇವಃ ತಸ್ಮೈ ಸರ್ವಾತ್ಮನೇ ನಮಃ||

    ಯಾವಾತನಲ್ಲಿ ಚರಾಚರಾತ್ಮಕವಾದ ಪ್ರಪಂಚವಿರುವುದೋ,
ಯಾವಾತನಿಂದ ಸರ್ವಪ್ರಪಂಚವೂ ಬಹಿರಂಗವಾಗಿ ಬೆಳಗುವುದೋ,
ಯಾವಾತನು ಸಮಸ್ತ ಸ್ವರೂಪನಾಗಿರುವನೋ, ಯಾವಾತನು ಎಲ್ಲೆಲ್ಲಿ
ಯೂ ವ್ಯಾಪಿಸಿರುವನೋ, ಅಂತಹ ಸರ್ವಾತ್ಮನಾದ ನಿನಗೆ ನಮಸ್ಕಾರ
ಗಳು !

    ಪರಂಧಾಮನೇ ! ಸನಕಾದಿ ಮಹಾಮುನಿಗಳು ಯಾವುದನ್ನು
ತಮ್ಮ ಮಾನಸ ಕಮಲಾಸನಗಳಲ್ಲಿ ನೆಲೆಗೊಳಿಸಿ ಪೂಜಿಸುವರೋ