೧೨೦ ಕೃಷ್ಣಲೀಲೆ.
ಅಂತಹ ನಿನ್ನ ಶ್ರೀಪಾದ ಪದ್ಮಗಳು ನಮ್ಮ ಪತಿಯಾದ ಈ ಕಾಳೀಯನ
ಹೆಡೆಗಳಮೇಲೆ ಯಾವ ನಿಮಿಷದಲ್ಲಿ ಆನಂದ ನರ್ತನಮಾಡಿದುವೋ ಆ
ನಿಮಿಷದಲ್ಲಿಯೇ ನಮ್ಮ ಗತಿಯು ಪುನೀತನಾದನು, ಭಯಂಕರವಾದ
ಈ ಸರ್ವಜನ್ಮವುನೀಗಿ ಸುಖಪಡುವ ಯೋಗವು ಕೈಗೂಡಿತು. ನಿನ್ನ
ಅನುಗ್ರಹದಿಂದ ನಾನಿನ್ನು ನನ್ನ ಪತಿಯೊಂದಿಗೆ ಚಿರಕಾಲ ಸುಖವಾಗಿ
ಬಾಳುವೆವು. ಸರ್ವಶರಣ್ಯನೇ! ನಿನ್ನ ಶಾಸನವನ್ನು ಮೀರಿ ನಡೆಯ
ತಕ್ಕವರಾರು? ಅಖಂಡ ಬ್ರಹ್ಮಾಂಡಗಳೆಲ್ಲವೂ ನಿನ್ನ ಶಾಸನಕ್ಕೊಳವಟ್ಟರುವುವು.
ಶ್ರುತಿ|| ನತತ್ರ ಸೂರ್ಯೋಭಾತಿ ನಚ೦ದ್ರತಾರಕಂ ನೇಮಾ ವಿದು ತೋಭಾನ್ತಿ
ಕುತೋಯಮಗ್ನಿ: | ತಮೇವಭಾನ್ತ ನುನುಭಾತ ಶ್ರಿ ಸರ್ವ೦ತಸ್ಯ ಭಾಸಾಸರ್ವಮಿದಂ ವಿಭಾತಿ ||
ಎಂಬ ಶ್ರುತಿವಚನಗಳು ಯಾರ ಮಹಾಮಹಿಮೆಯನ್ನು ಸಾರು
ತ್ತಿರುವುವೋ ಅಂತಹ ಸ್ವಯಂಪ್ರಕಾಶಮೂರ್ತಿ ನಿನ್ನ ಶಾಸನ
ದಿಂದಲೇ ಸೂರಚಂದಾಗಿಗಳೆಲ್ಲವೂ ಪ್ರಕಾಶಿಸುತ್ತಿರುವುವು. ಎಲೆ
ಸ್ವಾಮಿಯೇ ! ಜಗನ್ಮಂಗಳಾಕಾರನಾದ ನಿನ್ನ ಸಂದರ್ಶನವು ಯಾರಿಗೆ
ಲಭಿಸುತ್ತದೆಯೋ ಅಂಥವರಿಗೆ ತಾಪತ್ರಯ ಸಂಬಂಧವಾದ ಕಾರ್ಪ ಣ್ಯಗಳೆಲ್ಲವೂ ತೊಲಗಿಹೋಗುತ್ತವೆ. ಜಗನ್ನಾಥಾ ! ನಿನ್ನ ಚರಣ ತಾಡನದಿಂದ ದುರ್ಬಲನಾಗಿರುವ ಈ ಕಾಳೀಯನಿಗೆ ನೂತನ ಜವ ಸತ್ನಗಳನ್ನು ನುಗ್ರಹಿಸಿ ನಮಗೆ ಪತಿಭಿಕ್ಷವನ್ನು ಕೊಡು !
(ಎಂದು ಪ್ರಾರ್ಥಿಸುತ್ತ ನಾಗಪತ್ನಿಯರು ಶ್ರೀ ಕೃಷ್ಟಮೂರ್ತಿಯ ಶರಣು ಹೋಗುವರು.)
ಕಾಳೀಯ:- ಸರ್ವಾತ್ಮನಾದ ಭಗವಂತನೇ | ಶರಣಾಗತನಾದ ನನ್ನ ದೋಷಗಳನ್ನು ಕ್ಷಮಿಸಿ ಕಾಪಾಡು !
ಶ್ರೀ ಕೃಷ್ಣ:- ಎಲೌ ನಾಗಪತ್ನಿ ಯರೇ ! ನಿನ್ನ ಭಕ್ತಿಗೆ ಮೆಚ್ಚಿ ದೆನು. ನಿಮಗೆ ದೀರ್ಘ ಸುಮಂಗಲೀತ್ವವನ್ನು ಅನುಗ್ರಹಿಸಿರುವನು. ನಿಮ್ಮ ಪತಿಯೊಂದಿಗೆ ಸಕಲ ಸಂತೋಷಗಳನ್ನೂ ನಿರಭ್ಯಂತರವಾಗಿ ನಡೆಯುತ ಚಿರಕಾಲ ಸುಖವಾಗಿ ಬಾಳಿರಿ, ಎಲೆ ಕಾಳೀಯನೇ ! ಈ