ಪುಟ:ಶ್ರೀ ಕೃಷ್ಣ ಲೀಲೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಕೃಷ್ಣ ಲೀಲೆ ಪರಬ್ರಹವರ್ತಿಯಾದ ತನ್ನ ಅದ್ರಾಕೃತ ದಿವ್ಯಸಂದರ್ಶನವನ್ನು ಮಾಡಬೇಕೆಂದಪೇಕ್ಷಿಸಿದ ಗೋಪಿಯರ ವಸ್ತ್ರಗಳೆಂಬ ಅಜ್ಞಾನಾವ ರಣಗಳನ್ನು ಅಪಹರಿಸಿ, ಅವರಿಗೆ ತನ್ನ ಅಮಾನುಷವಾದ ಪರಂಜ್ಯೋತಿ ಸುರೂಪಸಂದರ್ಶನವನ್ನು ಅನುಗ್ರಹಿಸಿ ತನ್ಮೂಲಕವಾಗಿ ಶ್ರೀರಾಮಾ ವತಾರದಲ್ಲಿ ತಾನು ಮಾಡಿದ್ದ ವಾಗ್ದಾನವನ್ನು ಸಫಲಗೊಳಿಸಿದನು, ಒಮ್ಮೆ ಅವರು ತಮ್ಮ ಪೂರ್ವಸತಿಯುಂಟಾಗಿರುವರು. ಮತ್ತೊಮ್ಮೆ ಭಗವನ್ನಾಯೆಗೆ ಸಿಲುಕಿ ಅದನ್ನು ಮರೆತು ಪರಿತಪಿಸುವರು. ಇಂತು ಬ್ರಹ್ಮರ್ಷಿಗಳಾದ ಗೋಪಿಯರ ಸ್ಥಿತಿಯೇ ಇರೀತಿಯಾಗಿರುವಲ್ಲಿ ಕೇವಲ ಆಹಾರನಿದ್ರಾದಿ ತುಚ್ಛಭೋಗಗಳಲ್ಲಿ ಮಗ್ನರಾಗಿರುವ ನರವರು ಗಳಿಗೆ ವೈವಶೀಲೆಗಳು ಅರ್ಥವಾಗಬಲ್ಲವೆ | ಪಾಂಡುರೋಗಿಯ ಕಣ್ಣ ಆಗ ಪ್ರಪಂಚವೆಲ್ಲವೂ ಹಳದಿಯಾಗಿ ಕಾಣುವಂತೆ, ಕೇವಲ ಲೌಕಿಕ ಕ್ಷರ ಮತ್ರರಿಗೂ, ಧನಾಧಿಕಾರ ಮದಾಂಧರಾದ ಡಾಂಬಿಕರಿಗೂ, ಭ ಗವದ್ಗೀಲಾಸಗಳು ವಿಲಕ್ಷಣವಾಗಿ ಕಾಣುವುದರಲ್ಲಿ ಆಶ್ರವೇನು? ನಿದರ್ಶ ನಕ್ಕ ಕಂಸನೊಬ್ಬನೇ ಸಾಕಾಗಿರುವನು. ಈ ದುರಭಿಮಾನಿಯು ಐಕ್ಷ ರದಲ್ಲಿಯೂ, ಅಧಿಕಾರದಲ್ಲಿಯೂ, ಪ್ರತಾಪದಲ್ಲಿಯೂ, ತಾನೇ ಅಗ್ರ ಗಣ್ಯನೆಂತಲೂ, ತನಗೆ ಸಮಾನವಾದ ತಿಳಿವಳಿಕ ಯುಂಟಾದವರು, ಮತ್ತಾರೂ ಇಲ್ಲವೆಂತಲೂ ಕೊಬ್ಬಿರುವನು. ತನ್ನ ವಿನಾಶಕಾಲವನ್ನ ರಿಯದೆ, ಋಷಿಮುನಿಗಳನ4, ಬಚ್ಚವೇತ್ತರಾದ ಸಾಧುಜನರನ್ನೂ ಸಾಧೀಮಣಿಯರನ ಬಗೆಬಗೆಯ ಸುತ್ತಲೂ, ದ್ವೇಷಿಸು ತಲೂ ಉನ್ಮತ್ತನಾಗಿರುವನು. ತನ್ನ ತಂದೆಯನ್ನೆ ಸೆರೆಯಲ್ಲಿ ಬಂಧಿ ಸಿರುವನು. ಮೂರ್ಖನಾದ ಕಂಸನಿಗೆ ಲೇವಾದರೂ ವಿವೇಕವಿಲ್ಲ ವಲ್ಲಾ ! ಪ್ರಪಂಚದಲ್ಲಿ ಯಾವ ಮನುಷ್ಯನೇ ಆಗಲಿ, ತನ್ನ ಹಿರಿಯರ ನ್ನು ಅವಿವೇಕಿಗಳೆಂದು 'ತಾನು ಅಲ್ಲಗಳೆಯುವುದಾದರೆ ತನ್ನ ಮಕ್ಕಳು ಮೊಮ್ಮಕ್ಕಳು ಮುಂತಾದವರು ತನ್ನನ್ನು ವಜ್ರಕುಂಠನೆಂದು ದೂಷಿಸ ಲೇ ದೂಷಿಸುತ್ತಾರೆಂಬ ಪರಿಜ್ಞಾನವಿಲ್ಲದೆ ತನಗೆ ಎದುರಿಲ್ಲವೆಂದು ಗರ್ವಿಸಿ ಹಿರಿಯರಾದ ಋಷಿಮುನಿಗಳನ್ನು ದೂಷಿಸುತ್ತ ಹಾರಿಬೀಳು ತಿರುವನು. ಆಗಲಾಗಲಿ! ಇವನ ವಿನಾಶಕಾಲವೂ ಹಿತ್ರದಲ್ಲಿಯೇ ಎದಿರುನೋಡುತ್ತಿರುವುದಲ್ಲವೆ! * ವಿನಾಶಕಾಲೇ ವಿಪರೀತಬು” ಈ