ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚತುರ್ಥಾಂಕಂ.
೧೨

ವಾದ ಹಸಿನಿನಿಂದ ಪೀಡಿಸಲ್ಪಡುತ್ತಿರುವ ಪ್ರಾಣಿಗಳು ಮನೆಬಾಗಲಿಗೆ
ಬಂದಾಗ ಮನೆ ಯಜಮಾನರಾದವರು ತನ್ನ ಶಕ್ತ್ಯಾನುಸಾರವಾಗಿ ಸತ್ಕರಿಸಿ ಕಳುಹಿಸಬೇಕು. ಹಾಗಲ್ಲದೆ ಅತಿಥಿಗಳನ್ನು ನಿರಾಕರಿಸಿ ಕಳುಹಿಸಬಾರದು. ಅನ್ನಾರ್ಥೀಹಳಾಗಿ ಮನೆಗೆ ಬಂದ ಅತಿಥಿಗಳನ್ನು ಯಾವ ಮನೆಯವರು ಇಲ್ಲವೆಂದು ನಿರಾ?ರಿಸುವರೋ ಆ ಮನೆಯ ಯಜ ಮಾನರು ಗೌರವಾದಿ ನರಕಭಾಜನರಾಗುವರು. ಅತಿಥಿಗಳನ್ನು ಬಿಟ್ಟು, ಯಾರು ತಾವೊಬ್ಬರೇ ಭುಂಜಿಸುವಲೆ ಅಂಥವರು ಭುಂಜಿಸತಕ್ಕ ಅನ್ನನು ಗೋಮಾಂಸಕ್ಕೆ ಸಮಾನವೆಂತಲೂ, ಆಪೋಶನವು ಸುರಾ ನಾನಕ್ಕೆ ಸಮಾನವೆಂತಲೂ, ಧರಶಾಸ್ತ್ರಗಳು ಸಾರುತ್ತಿರುವುವು. ಆದುದರಿಂದ ನಮ್ಮನ್ನು ತಡೆಯಬೇಡಿರಿ, ಈ ಪದಾರ್ಥಗಳನ್ನು ಶ್ರೀ ಕೃತ್ಯಾದಿಗಳಿಗೆ ಸಮರ್ಪಿಸಿ ಬೇಗನೆ ಬರುವೆವು. ಸುಮಂತ:-( ಕೋಪದಿಂದ) ಏನು ? ದೇವರ ನೈವೇದ್ಯಕ್ಕಿಂತ ಲೂ ಮೊದಲೇ ಅವರಿಗೆ ಹಾಕಬೇಕ ? ಸುಶೀಲೆ:-ಹಾ ! ಎಂತಹಮಾತನ್ನಾ ಡಿದಿರಿ, ಮಂತ್ರಮರಿ ಯೂ, ಧರರಕ್ಷಕನೂ, ಯಜ್ಞಪುರುಷನೂ, ವಿಶ್ವನಾಥನೂ ಆದ ಶ್ರೀಕೃಷ್ಣ ಮರಿಯು ಪ್ರತ್ಯಕ್ಷವಾಗಿ ಬಂದಿರುವಲ್ಲಿ ಆತನನ್ನು ಪೂಜಿ ಸುವುದೇ ನಿಜವಾದ ದೇವರ ಪೂಜೆಯು, ಯಾರ ಅನುಗ್ರಹಕ್ಕಾಗಿ ಮಂತ್ರ ತಂತ್ರ ಪಠನವಾಠನಾದಿಗಳೆಲ್ಲವೂ ನಿರ್ವಟ್ಟಿರುವುವೋ ಅಂತಹ ಪ್ರಭು ಈ ಪ್ರಸನ್ನನಾಗಿರುವಲ್ಲಿ ಆತನಿಗಲ್ಲದೆ ಮತ್ತಾರಿಗೆ ನೈವೇದ್ಯ ಮಾಡುವಿರಿ? ನಿಮ್ಮ ಭಾಂತಿಯು ವರಿತಾನಕರವಾಗಿದೆ. ಎಂದು ಹೇಳುತ್ತ ಸುಶೀಲೆಯ, ಅರುಣೆಯೂ ಅನ್ನೊದಕರ ಳೊಂದಿಗೆ ತೆರಳುವರು.] ಪ್ರದೇಶ:- ಆಶ್ರಮದ ಮುಂಭಾಗ, fಸುಶೀಲೆಯ, ಆಗುಣೆಯಡಿ ಪ್ರವೇಶಿಸಿ ಶ್ರೀಕೃಷ್ಣಮೂರ್ತಿ ಗೆ ನಮಸ್ಕರಿಸಿ ತಾವು ತಂದಿದ್ದ ಪದಾರ್ಥಗಳನ್ನು ಸಮರ್ಪಿಸುವರು.] ಶ್ರೀಕೃ:-ಸಾಧೀಮಣಿಯರೆ | ನಿಮ್ಮೆಲ್ಲರಿಗೂ ಕುಶಲವೆ ? ನಿಮ್ಮ ಗೃಹಕಾರಗಳು ಸಂತೋಷಕರವಾಗಿ ನಡೆಯುವುದೆ ? ನಿಮ್ಮ