ಪುಟ:ಶ್ರೀ ಕೃಷ್ಣ ಲೀಲೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣಲೀಲೆ ಆರುಣೆ:-ಅಗ್ರಜಳೇ ವಿಶೇಷವೇನು ? ಸುಶೀಲೆ:-ಅಡಿಗೆ ಸಿದ್ದವಾಗಿರುವಷ್ಟೇ ಸಾಕು. ಈಗ ಏನೇನಾಗಿ ರುವುದೋ ಅವುಗಳನ್ನೆಲ್ಲಾ ತಟ್ಟೆಗಳಲ್ಲಿಡು. ಶ್ರೀಕೃಷ್ಣಮರಿಯು ಬಂದಿರುವನಂತ ನಮ್ಮ ಭಾಗ್ಯವೇ ಭಾಗ್ಯವು, ರಾಮಕೃಷ್ಣರಿಗೆ ಅನ್ನೋದಕಗಳನ್ನು ಕೊಟ್ಟು ಕೃತಾದ್ಧರಾಗುವ, ಅರುಣೆ:-ಇಗ ! ನಿಮಿಷದಲ್ಲಿ ಸಿದ್ಧಪಡಿಸಿ ತರುವೆನು. [ಸುಶೀಲೆಯೂ, ಆರುಣೆಯ ಅನ್ನೋದಕಗಳನ್ನು ತೆಗೆದು ಕೊಂಡು ಗೋಪಾಲಕರೊಂದಿಗೆ ಹೊರಡುವರು.] ಸುಮಂತಯಾರದು ? ಸುಶೀಲೆ:- ಏಕೆ ? ಸುಮಂತ:-ಎಲ್ಲಿಗೆ ಹೋಗುವಿರಿ ? ಸುಶೀಲೆ:-ಅತಿಥಿ ಸತ್ಕಾರಕ್ಕೆ ! ಸುಮಂತ:-ಯಾರದು, ಅತಿಥಿಗಳು ! ಸುಶೀಲೆ:ನಾಥಾ ! ಯಾರಾದರೇನು ? ಶ್ಲೋಆದೌರೂಪವಿನಾಶಿನೀಕೃಶಕರೀ ಶಾಂತಾಂಕುರಚ್ಛೇದಿನೀ | ಪುತ್ರಭ್ರಾತೃ ಕಳತ್ರ ಭೇದನಕರೀಗರ್ವಾ೦ಕುರಚ್ಛೇದಿನೀ | ಧೈಯ್ಯಂನಂದಕರೀತರ್ಪಯ ಕರೀಧರಸ್ಯನಿಟ್ಟೂಲಿನೀ | ಸಾಮಾ೦ಸಂಪ್ರತಿಸರ್ವರೋಗಜನನೀಪ್ರಾಣಾ ಪಹಂಕುಧಾ || ಪ್ರಾಣಿಗಳನ್ನು ಪೀಡಿಸುವುದರಲ್ಲಿ ಹಸಿವು ತೀವ್ರವಾದ ಶಕ್ತಿಯುಂಟಾದುದು, ಶರೀರವನ್ನು ದುರ್ಬಲಪಡಿಸುವುದು, ಸ್ನಾನ ಪಾನಗಳಿಗವಕಾಶಕೊಡದೆ ಆತುರಗೊಳಿಸುವುದು, ಶಾಂತವನ್ನು ಭೇಧಿಸಿ ಕೂಪವನ್ನು ಂಟುಮಾಡುವುದು, ಬಂಧುಮಿತ್ರರೆಂಬ ದಾಕ್ಷಿಣ್ಯವನ್ನು ಹೋಗಲಾಡಿಸುವುದು, ಗರ್ವವನ್ನು ಮುರಿಯುವುದು, ಧೈರವನ್ನು ಕುಂದಿಸುವುದು, ತನವನ್ನು ಬಿಚ್ಚಿ ಪಡಿಸುವುದು, ಧರವನ್ನು ನಿರ್ಮೂಲ ಮಾಡುವುದು, ಸಮಸ್ತ ರೋಗಗಳಿಗೂ ಮೂಲಕಾರಣವಾಗುವುದು, ಕಡೆಗೆ ಮರಣವನ್ನು ಸಹಾ ಉಂಟುಮಾಡುವುದು, ಇಂತು ಅನಿವಾರ