ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಕಂ ೧ ಗೋಪಾಲಕರು:-ನಾವು ಗೋಕುಲವಾಸಿಗಳು, ಗೋಕುಲ ದರಸನಾದ ನಂದಗೋಪನ ಹೆಸರನ್ನು ತಾವು ಕೇಳಿರಬಹುದು. ಸುಮಂತ:- ಪ್ರಕೃತವಿಚಾರವೇನು ? ಗೋಪಾಲಕರು:-ನಂದಗೋಪನ ಪುತ್ರರಾದ ರಾಮಕೃಷ್ಣರೂ ಮತ್ತೆ ಕೆಲವು ಮಂದಿ ರ್ಗೋಪಾಲಕರೂ ರ್ಬಳವಾಗಿ ಕಸಿದುಬಂದಿರುವವು. ದಯವಿಟ್ಟು ನಮಗೆ ಆಹಾರವನ್ನು ಕೊಡಬೇಕಾಗಿ ಪ್ರಾರ್ಥಿಸುವವು. ಸುಮಂತ:-ಇನ್ನೂ ವರ ಪೂಜೆಯಾಗಲಿಲ್ಲ. ದೇವರಿಗೆ ನೈವೇದ್ಯವಾದಹೊರತು ಯಾರಿಗೂ ಹಾಕುವುದಿಲ್ಲ, [ಗೋಪಾಲಕರು ಪಾಕಶಾಲೆಯ ಬಳಿಗೆ ಹೋಗಿ ಋಷಿಪತ್ನಿಯನ್ನು ಕೇಳುವರು. 1 ಗೋಪಾಲಕರು:-ಅಮ್ಮಾ ಭಾಗ್ಯವತಿಯರೇ ! ಸುಶೀಲೆ:-(ಹೊರಗೆ ಬಂದು) ನೀವು ಯಾರನ್ನಾ ? ಎಲ್ಲಿಂದ ಬಂದಿರಿ ? ಈ ನೆರಳಿನಲ್ಲಿ ಕೂಡಿರಿ, - ಗೋಪಾಲಕರು:-(ತಮ್ಮಳಿ) ಈ ಪರಮ ಪುಣ್ಯಾತಳಾಗಿ ಕಾಣುವಳು. ಈ ತಾಯಿಯು ನಮಗೆ ಅನ್ನಾಹಾರಗಳನ್ನು ಕೂಡ ಬಹುದೆಂದು ಕಾಣುವುದು. ತಾಯೇ ! ನನ್ನದು ಗೋಕುಲವು. ಸುಶೀಲೆ:-ಗೋಕುಲವೆ ? ಗೋಪಾಲಕರು:-ಅಹುದನ್ನು, ಸುಶೀಲೆ:- ಬಹಳ ಸಂತೋಷ ! ಗೋಪಾಲಕರು:-ನಂದಗೋಪನ ಕುಮಾರರಾದ ರಾಮಕೃಷ್ಣ ರೂ ಮತ್ತೆ ಕೆಲವು ಗೋವಸಿಲಕರೂ ಬಹಳವಾಗಿ ಹಸಿದು ಬಂದಿರು ವೆವು. ನನಗೆ ಅನ್ನೋದಕಗಳನ್ನು ಕೊಟ್ಟು ರಕ್ಷಿಸಬೇಕಮ್ಮ ! ಸುಶೀಲೆ:-ಏನು ? ಶ್ರೀಕೃಷ್ಣ ಮರಿಯು ಬಂದಿರುವನೆ ? ಗೋಪಾಲಕರು:-ಬಂದಿರುವನಮ್ಮ ! ಸುಶೀಲೆ:-ತಂಗೀ ಅರುಣೆ !