ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾote ೧೩೧ ಖುಷಿಪತ್ನಿಯರು ಆಶ್ರಮವನ್ನು ಕುರಿತೂ, ಶ್ರೀಕೃಷಾದಿಗಳು ಗೋಕುಲವನ್ನು ಕುರಿತೂ ತರಳುವರು. ಸಂಚಮಾಂಕಂ:ತೃತೀಯರಂಗಂ. ಪ್ರದೇಶ:- ಯಮುನಾತೀರ. ಗೋಪಿಯರೆಲ್ಲರೂ ಪರಿಶುದ್ಧ ಮನಸ್ಯರಾಗಿ ಗೌರೀವ್ರತವನ್ನಾ ಚರಿಸುವರು.

  • *

ಇ . 1 (Y ಟಿ - ಚಾರುಮತಿ:-ಗೆಳತಿಯರೇ ! ಪವಿತ್ರವಾದ ಯಮುನಾ ಜಲ ದಲ್ಲಿ ನಾವೆಲ್ಲರೂ ಮಂಗಳಸ್ನಾನವನ್ನಾಚರಿಸಿ ಏಕಚಿತ್ರ ಮನೋಭಾವ ದಿಂದ, ಕಾತ್ಯಾಯನೀ ದೇವಿಯನ್ನಾರಾಧಿಸುವೆವಾದರೆ ನಮ್ಮ ಸಂಕಲ್ಪ ವು ಸಫಲವಾಗುವುದು, ನಂದಿನಿ:-ಇದೀಗ ನಿಜನಾದ ಮಾತು, ಸರ್ವಮಂಗಳೆಯಾದ ಪಾರ್ವತಿ ದೇವಿಯು, ತನ್ನ ಅಚಂಚಲವಾದ ಭಕ್ತಿಯಿಂದ ಧ್ಯಾನಿಸಿ ಯಲ್ಲವೇ ಚಂದ್ರಶೇಖರನ ಅರ್ಧಾಂಗವನ್ನ ಲಂಕರಿಸಿದಳು ! ಆ ದೇವಿ ಯನ್ನುದ್ದೇಶಿಸಿ ನಾವು ದೃಢಭಕ್ತಿಯಿಂದ ವ್ರತವನ್ನಾಚರಿಸುವುದರಿಂದ ನಮ್ಮೆಲ್ಲರಿಗೂ ಶ್ರೇಯಸ್ಸುಂಟಾಗುವುದು. ಜಗನ್ಮಾತೆಯಾದ ಶರ್ವಾಣಿ ಯ ಕೃಪಾಕಟಾಕ್ಷದಿಂದ ನನ್ನ ಕಾರವು ಕೈಗೂಡುವುದು. (ಎಂದು ನಿಶ್ಚಯಿಸಿ ಗೋಪಿಯರೆಲ್ಲರೂ ಯಮುನಾ ಜಲದಲ್ಲಿ ಸನವಾಡಿ ದೃಢವಾದ ಭಕ್ತಿಯಿಂದ ಗೌರೀಪೂಜೆಗಾರಂಭಿಸುವರು.]