ಪುಟ:ಶ್ರೀ ಕೃಷ್ಣ ಲೀಲೆ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ವಿದ್ಯೆಯನ್ನ ಭ್ಯಸಿಸಿ, ಅಸಾಧ್ಯವಾದ ಮತ್ತು ಅದ್ಭುತವಾದ ಅನೇಕ ಕಾರ್ಯಗಳನ್ನು ಬಹು ಸುಲಭವಾಗಿ ಸಾಧಿಸುತ್ತಿದಾರೆ. ಇದು ಯೋಗಿಗಳಿಗೂ, ಭೋಗಿಗಳಿಗೂ ಅತ್ಯವಶ್ಯಕವಾಗಿ ಬೇಕಾದ ಗ್ರಂಥವು. ಇದರ ಸಹಾಯದಿಂದ ರೋಗಗಳನ್ನು ಬಹುಬೇಗ ವಾಸಿಮಾಡಬಹುದು. ಪೀಡೆ, ಪಿಶಾಚ ಮುಂತಾದ ದುಷ್ಟ ಗ್ರಹ ಸಂಬಂಧವಾದ ಮನೋ ವಿಕಾರ ವ್ಯಾಧಿಗಳನ್ನು ಒಂದು ಮುಹೂರ್ತ ಕಾಲದೊಳಗೆ ಪರಿಹರಿಸ ಬಹುದು. ಸಂಸಾರ ತಾಪತ್ರಯದಲ್ಲಿ ಸಿಲುಕಿ ಬಗೆಬಗೆಯಾಗಿ ಬಳ ಲುತ್ತಾ ಚಂಚಲವಾಗಿರುವ ಮನಸ್ಸನ್ನು ನಿಗ್ರಹಿಸಿ ಒಂದು ಮಾರ್ಗ ದಲ್ಲಿ ಜಿತಪಡಿಸಬಹುದು. ' ಹಾವು, ಚೇಳು, ಹುಲಿ, ನಾಯಿ, ನರಿ ಮುಂತಾದ ವಿಷಜಂತುಗಳಿಂದುಂಟಾಗುವ ವಿಷರೋಗಗಳನ್ನು ಬಹು ಸುಲಭವಾಗಿ ನಿವಾರಿಸಬಹುದು. ಬಹು ಕೂಪಸ್ವಭಾವವುಳ್ಳವರನ್ನೂ, ಕ್ಷಾತ್ರಗುಣವುಳ್ಳವರನ್ನೂ, ಗಯ್ಯಾಳಿತನವುಳ್ಳವರನ್ನೂ,ಹುಲಿಮುಂತಾದ ಕ್ರೂರ ಜಂತುಗಳನ್ನೂ ಒಂದೇ ನಿಮಿಷದಲ್ಲಿ ಸ್ವಾಧೀನ ಪಡಿಸಿಕೊಳ್ಳ ಬಹುದು. ಈ ವಿದ್ಯೆಯನ್ನಭ್ಯಾಸ ಮಾಡುವುದರಿಂದ ಇತರರ ವ್ಯಾಧಿದುಃಖ ಗಳನ್ನು ಪರಿಹರಿಸುವುದಕ್ಕೂ, ತಮ್ಮ ಮನೋದುಃಖಗಳನ್ನೂ, ವ್ಯಾಧಿ ಗಳನ್ನೂ ಪರಿಹರಿಸಿಕೊಳ್ಳುವುದಕ್ಕೂ ಅನುಕೂಲವಾದ, ಮನೋವಶೀ ಕರಣ ರಹಸ್ಯಗಳೆಲ್ಲವೂ ಸುಲಭವಾಗಿ ಸ್ವಾಧೀನವಾಗುತ್ತವೆ. ಇದು ವೈದ್ಯರಿಗೂ, ಜ್ಯೋತಿಷ್ಯರಿಗೂ, ಉಪಾಧ್ಯಾಯರಿಗೂ, ಉಪನ್ಯಾಸಕ ರಿಗೂ, ವಕೀಲರಿಗೂ, ಸಮಸ್ತರಿಗೂಬೇಕಾದ ಕೈಗನ್ನಡಿಯಾಗಿರುತ್ತದೆ. ಕಾಂತಲೋಹವು ಸೂಜಿಯನ್ನಾಕರ್ಷಿಸುವಂದದಿ ಈ ವಿದ್ಯಾಬಲವುಳ ವರು ಎಂತಹ ಕಠಿಣ ಕಾರ್ಯಗಳನ್ನಾದರೂ ಅವಲೀಲೆಯಾಗಿ ಸಾಧಿಸ ಬಲ್ಲರು. ದೇವತಾವಶ್ಯ, ರಾಜವಶ್ಯ, ಜನವಶಾದಿ (ಸಾತ್ವಿಕ ಮಾರ್ಗದ) ಸಮಸ್ತ ವಶೀಕರಣೋಪಾಯಗಳೂ ವಿವರಿಸಲ್ಪಟ್ಟಿದೆ! ವಿಳಾಸ:- ಬೆಲೆ 2 0 0 ಕಾ. ಶಿವರಾಮದಾಸ್, ಪಬ್ಲಿ ವರ, ಆನಂದಚಂದ್ರಿಕಾ ಡಿಪೋ, ಬೆಂಗಳೂರು ಸಿಟಿ