ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪ದ್ವಿತೀಯಾಂಕಂ.

ಕ್ಷ ಪರಪಕ್ಷಾದಿ ಭೇದ ಭಾವ ವಿರಹಿತ೦, ದುಷ್ಟ ಶಿಕ್ಷಣ ರಕ್ಷಣಾದಿ ಸರ್ವಸಮಾನ ಧರ್ಮಭಾವಸಹಿತ೦, ವಿಶಾಲನಿಸ್ತುಲ ದಯಾಗುಣೋಪೇತಂ,ಅನಘ- ಆನಂತ - ಅವ್ಯಯ- ಅಪ್ರಮೇಯ-ಅವಿಕಾರ,ಆದಿ ಮಧ್ಯಾಂತರಹಿತ, ಅನುಪಮಾ ತೇಜೋಮಯಾಕಾರಂ , ಭವವೀಯಾತೀತಂ, ಕರುಣಾಸಮುದ್ರಂ, ಮಹಾನುಭಾವಂ, ಪರಮಪುರುಷ೦, ಸುರನಾಯಕ ಕಾರ್ಯಷ್ಟದಿಕ್ಪಾಲ ಮುಕುಟಮಣಿಗಣ ನೀರಾಜಿತ ಪಾದಾರವಿಂದಂ, ಸದಾನಂದ ಚಂದ್ರಿಕಾ ಮಂದಿರಂ,ಜಗದಾನಂದನ೦ದ ಕರಂ, ಭಕ್ತ ತ್ರಾಣ ಪರಾಯಣಂ, ಲಕ್ಷ್ಮೀರಮಣ೦, ಭಗವಾನ್ ಶ್ರೀಮನ್ನಾರಾಯಣಂ, ಭಜೇಹಂ! ಭಜೇಹಂ !! ಭಜೇಹಂ !!!

[ಇಂತು : ನಾರಾಯಣನಾಮ ಸಂಕೀರ್ತನೆ ಮಾಡುತ್ತ ಬಂದ ನಾರದರನ್ನು ಅಂತಃಪುರದ ಮುಂಭಾಗದಲ್ಲಿ ಕಂಸನು ಸಂಧಿಸುವನು.]

ಕಂಸ:- (ತನ್ನಲ್ಲಿ) ಎಲ್ಲಿಯೋ ವೀಣಾಗಾನವಾಗುವಂತೆ ಕೇಳಿ ಸುತ್ತದೆ. ಇಷ್ಟು ಗಮವಾಗಿ ವೀಣೆಯನ್ನು ನುಡಿಸುವುದಕ್ಕೆ ಸಾಮಾ ನ್ಯರಿಗೆ ಸಾಧ್ಯವಲ್ಲ. ಯಾರೋ ಅಸಾಧಾರಣ ಪಂಡಿತರೇ ಹೀಗೆ ನುಡಿ ಸುತ್ತಿರಬಹುದು. ಒಳ್ಳೆಯದು. ಆಗಲಿ, ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ವಿಚಾರಿಸುವೆನು. [ಎಂದು ಒಂದೆರಡು ಹೆಜ್ಜೆಗಳಿಡುವರಲ್ಲಿಯೇ ನಾರದರು ಕಾಣಿಸಿಕೊಳ್ಳು(ವ)ರು.]

ಕಂಸ:-ಓಹೋ ! ಸರಿ ! ಸರಿ ! ವೈಣಿಕ ಶಿಖಾಮಣಿಯಾದ ಈತನ ಗಾನವಾದುದರಿಂದಲೇ ಅಷ್ಟು ರಮ್ಯವಾಗಿದ್ದಿತು | ನಾರದರೇ ! ನಮಸ್ಕರಿಸುವೆನು.

ನಾರದ:-ಎಲೈ ಅಸಹಾಯ ಶೂರನೇ ! ಅಷ್ಟೈಶ್ವರ್ಯ ಸಂಪನ್ನ ನಾಗು !

ಕಂಸ:-(ಬಹಳ ಸಂತೋಷದಿಂದ ನಗುತ್ತ) ನಾರದರೇ | ವಿಶೇಷ ವರ್ತಮಾನಗಳೇನಾದರೂ ವುಂಟೋ ?

ನಾರದ:-ಕಂಸ ರಾಜೇಂದ್ರಾ ! ಈ ದಿವಸವೇನು ಬಹಳ ಸಂತೋಷವಾಗಿರುವಂತೆ ಕಾಣುತ್ತದೆ ?

ಕಂಸ:-ನಾರದರೇ | ತಾವೇಕೆ ಹೀಗೆ ಕೇಳುವಿರಿ ?

ನಾರದ':-ಹೇಗೆ ಕೇಳಿದೆನು ?