ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫ ದ್ವಿತೀಯಾಂಕ೦.
ಕಂಸ:-(ಒಯ್ಯಾರದಿಂದ) "ಈಬದಿವಸವೇನು ಬಹಳ ಸಂತೋ
ಷವಾಗಿರುವಂತೆ ಕಾಣುತ್ತಿದೆ” ಎಂದು ಕೇಳಿದಿರಲ್ಲಾ.

ನಾರದ:- ಹಾಗೆ ಕೇಳಿದುದು ತಪ್ಪಿತವೆ ?

ಕಂಸ:-ನಾರದರೇ ! ನಾನು ಈ ದಿವಸ ಸಂತೋಷವಾಗಿಯೂ
ಮತ್ತೊಂದು ದಿವಸ ವ್ಯಸನವಾಗಿಯೂ ಇರುವುದುಂಟೇನು ? ಹಿಂದೆ
ಯೆಂದಾದರೂ ನಾನು ದುಃಖಿಯಾಗಿದ್ದುದನ್ನು ತಾವು ನೋಡಿರುವಿರಾ
ಅಥವಾ ಕೇಳಿರುವಿರಾ? ಸ್ವಲ್ಪ ಯೋಚಿಸಿ ನೋಡಿರಿ!

ನಾರದ:-(ಸ್ವಲ್ಪ ಯೋಚಿಸಿ) ಪ್ರಾಯಶಃ ನೀನು ದುಃಖಪಟ್ಟು
ದನ್ನು ನಾನು ನೋಡಿದಂತೆ ನನ್ನ ನೆನಪಿನಲ್ಲಿರುವಂತೆ ಕಾಣಲಿಲ್ಲ!

ಕಂಸ:-ನಾರದರೇ ! ಪುನಃ "ನೋಡಿದಂತೆ, ಇರುವಂತೆ” ಎಂದು
ಅರ್ಧಾಂಗೀಕಾರದ ಮಾತುಗಳನ್ನೇ ಹೇಳುತ್ತಿರುವಿರಲ್ಲಾ!

ನಾರದ:-ಮತ್ತೇನು ಹೇಳಬೇಕು.

ಕಂಸ:-ಅಂತೆಗಿಂತೆಗಳನ್ನೊ೦ದು ಕಡೆ ಕಟ್ಟಿಡಿ!

ನಾರದ-ಆಯಿತು!

ಕಂಸ-ಕಂಸ ಭೂಪಾಲನು ದುಃಖಿಯಲ್ಲ! ನಿತ್ಯ ಸುಖಿ ಎಂದು
ಘಂಟಾಘೋಷವಾಗಿ ಹೇಳಿರಿ.

ನಾರದ:-ಆಗಬಹುದು ! “ಕಂಸ ಭೂಪಾಲನು” ಇಂದಿನ ವರಿವಿ
ಗೂ ದುಃಖಿಯಲ್ಲ ! ಈವರಿವಿಗೂ ನಿತ್ಯವೂ ಸುಖಿಯು!

ಕಂಸ:-(ಸ್ವಲ್ಪ ಕೋಪದಿಂದ) ನಾರದರೇ ! ತಮ್ಮ ಮಾತು
ಗಳು ಬಹಳ ವ್ಯಂಗ್ಯವಾಗಿ ಕಾಣುತ್ತವೆ !

ನಾರದ:-ಅದು ಹೇಗೆ? ನೀನು ಹೇಳಿಕೊಟ್ಟುದನ್ನು ನಾನು
ಹೇಳಿದೆನಷ್ಟೆ!

ಕಂಸ:-ನಾನು ಹೀಗೆ ಹೇಳಿಕೊಡಲಿಲ್ಲ !

ನಾರದ:-ಮತ್ತೆ ಹೇಗೆ?

ಕಂಸ:ಕಂಸ ಭೂಪಾಲನು ದುಃಖಿಯಲ್ಲ! ನಿತ್ಯಸುಖಿ ! ಎಂದು
ನಿಸ್ಸಂಶಯವಾದ ಒಂದೇ ಮಾತಿನಲ್ಲಿ ಹೇಳಿರೆಂದು ನಾನು ಹೇಳಿದೆನಷ್ಟೆ.