ಪುಟ:ಶ್ರೀ ಕೃಷ್ಣ ಲೀಲೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೨೬ ಕೃಷ್ಣಲೀಲೆ.
ನಾರದ:-ಸರಿಸರಿ ! ಹಾಗೆಯೇ ಹೇಳುತ್ತೇನೆ. "ಕಂಸನು,
ಈವರಿವಿಗೂ ದುಃಖಿಯಲ್ಲ.”

ಕಂಸ-ಅಂದರೆ ಇನ್ನು ಮೇಲೆ ದುಃಖಿಯೆಂದರ್ಥವೋ?

ನಾರದ:- ಅದು ಹೇಗೋ ! ನಾನೇನು ಬಲ್ಲೆನು ?

ಕಂಸ:-(ಕೋಪದಿಂದ) ನಾರದರೇ ! ನನ್ನ ಹೆಸರು ಕೇಳಿದ
ಮಾತ್ರಕ್ಕೆ ಇಂದ್ರಾದಿ ಬೃಂದಾರಕರೆಲ್ಲರೂ ಗಡಗಡನೆ ನಡುಗುವರೆಂ
ಬಲ್ಲಿ ನನಗೆ ದುಃಖವೆಲ್ಲಿಂದ ಬಂದೀತು? ಒಳ್ಳೆಯದು. ಹಾಗೂ ಆಗಲಿ!
ನನಗೆ ದುಃಖ ಉಂಟಾಗುವುದೆಂದೇ ಇಟ್ಟುಕೊಳ್ಳೋಣ ! ನನಗೆ ಬರತ
ಕ್ಕ ದುಃಖವು ಎಂತಹದಾಗಿರಬಹುದು? (ಸ್ವಲ್ಪಹೊತ್ತು ಯೋಚಿಸಿ)
ಆಗಲಿ ! ಈ ಪ್ರಶ್ನೆಯನ್ನು ನಾರದರಿಂದಲೇ ಪರಿಷ್ಕಾರಪಡಿಸುತ್ತೇನೆ !
( ಪ್ರಕಾಶವಾಗಿ ) ನಾರದರೇ ! ದುಃಖವೆಂದರೆ ಎಂತಹದು? ಅದು
ಹೇಗಿರುತ್ತದೆ ?

ನಾರದ:-ದುಃಖಗಳು ನಾನಾ ಬಗೆಯಾಗಿರುತ್ತವೆ !

ಕಂಸ:-ಸ್ವಲ್ಪ ವಿವರಿಸಿ ಹೇಳಿರಿ, ಕೇಳೋಣ !

ನಾರದ:-ದುಃಖಗಳಲ್ಲಿ, ಕೆಲವು ಎಂದಿಗೂ ಕೊನೆಗಾಣದ ಮಹಾ
ದುಃಖಗಳು ; ಕೆಲವು ಕ್ಷಿಪ್ರದಲ್ಲಿಯೇ ಪರಿಹಾರವಾಗತಕ್ಕ ಸಾಮಾನ್ಯ
ದುಃಖಗಳು ; ಇಂತು ಅನೇಕ ವಿಧವಾಗಿರುತ್ತವೆ.

ಕಂಸ:-ದುಃಖವೆಂಬುದು ಒಂದೇ ವಿಧವಾಗಿರಬೇಕು. ಹಾಗಿ
ಲ್ಲದೆ, ಅನೇಕ ವಿಧವಾಗಿರುವುದಕ್ಕೇನು ಕಾರಣವು ?

ನಾರದ:-ಲೋಕದಲ್ಲಿ ಮಹಾಮಹಾಶೂರರೂ, ಪ್ರತಾಪಶಾಲಿ
ಗಳೂ, ಸಾಮಾನ್ಯ ಜನರೂ, ಎಂಬದಾಗಿ ಅನೇಕ ವಿಧವಾದ ಜನಗಳಿರು
ವುದರಿಂದ ದುಃಖಗಳೂ ಅನೇಕ ವಿಧವಾಗಿರುವುವು.

ಕಂಸ:-ಹಾಗಾದರೆ ಯಾವ ಯಾವ ವಿಧವಾದ ದುಃಖಗಳು
ಯಾರಾರಿಗುಂಟಾಗುತ್ತವೆ?

ನಾರದ:-ಸಾಮಾನ್ಯ ಜನರಿಗೆ, ಕ್ಷಿಪ್ರವಾಗಿ ಪರಿಹಾರವಾಗತಕ್ಕ
ಸಾಮಾನ್ಯ ದುಃಖಗಳುಂಟಾಗುತ್ತವೆ. ತಮಗೆ ಸಮಾನರಿಲ್ಲವೆಂಬ