ಪುಟ:ಶ್ರೀ ಕೃಷ್ಣ ಲೀಲೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭ದ್ವಿತೀಯಾಂಕಂ.

ಮಹಾ ಪ್ರತಾಪಶಾಲಿಗಳಿಗೆ, ಎಂದಿಗೂ ಪರಿಹಾರವಾಗದ ಮಹಾ ದುಃಖ
ಗಳುಂಟಾಗುತ್ತವೆ.

ಕಂಸ:-ನನಗೆಂಥಾ ದುಃಖವುಂಟಾಗುತ್ತದೆ ?
ನಾರದ:-ಚೀ ಚೀ! ನಿನಗೆ ದುಃಖವೇಕೆ ಬರಬೇಕು? ಇಂತಹ
ಮಾತುಗಳನ್ನು ನಿನ್ನಂಥವರಾಡಬಾರದು.

ಕಂಸ:-ಹಾಗಲ್ಲ-ನಾರದರೇ ! ಸುಮ್ಮನೆ ಪ್ರಸ್ತಾಪವಶದಲ್ಲಿ ಹೇಳಿ
ದೆನಷ್ಟೆ ! ನಿಜವಲ್ಲದಿದ್ದರೂ ಮಾತಿಗಾಗಿಟ್ಟುಕೊಳ್ಳೋಣ ! ಒಂದು
ವೇಳೆ ನನಗೆ ಬರಬೇಕಾದರೆ, ಅದು ಎಂತಹ ದುಃಖವಾಗಿರಬಹುದು?

ನಾರದ:-ಕಂಸನೇ ! ನಿನಿಗೆ ತಿಳಿದಮಟ್ಟಿಗೆ ಹೇಳು! ಲೋಕ
ಪದ್ದತಿಯಲ್ಲಿ ಜನರು ಯಾವುದನ್ನು ಘೋರದುಃಖವೆನ್ನುವರು?

ಕಂಸ:-ವಿಯೋಗದುಃಖವನ್ನು!
ನಾರದ-ಅಂದರೇ ?
ಕಂಸ-ಮರಣದುಃಖವನ್ನು !
ನಾರದ-ಮತ್ತೇನು ನಿನಗೆ ತಿಳಿದೇಯಿರುವುದಲ್ಲಾ!

ಕಂಸ:-(ಗಾಬರಿಯಿಂದ) ಏನೇನು ? ನನಗೆ ಮರಣವೆ? (ಎಂದು
ಸ್ವಲ್ಪ ಹೊತ್ತು ತಲೆ ಬಾಗಿ ಯೋಚಿಸುತ್ತಿದ್ದು, ಪುನಃ ಧೈರವನ್ನು
ತಾಳಿ) ಹಾಯ್ ! ಹಾಯ್ ! ನಾರದರೆ ! ಎಷ್ಟು ನಿರುತ್ಸಾಹಕರವಾದ
ಮಾತನ್ನು ಹೇಳಿದಿರಿ? ನಾನೆಂದರೇನು? ಸಾಯುವುದೆಂದರೇನು? ಅಷ್ಟ
ದಿಕ್ಪಾಲಕರೆಲ್ಲರನ್ನೂ ಒಂದೇ ಹಿಡಿಯಾಗಿ ಹಿಡಿದು ಗಗನಮಂಡಲಕ್ಕೆ ಹಾ
ರಿಸಿ, ನೆಲಕ್ಕೆ ಒಗೆದು ನುಗ್ಗು ನುಗ್ಗು ಮಾಡತಕ್ಕ ವೀರಾಧಿವೀರನಾದ
ಕಂಸ ಭೂಪಾಲನೆಂದರೇನು ? ಸಾಯುವುದೆಂದರೇನು ? ಸಾವು ! ಗೀ
ವು ! ಅದು ಹೇಗಿರುತ್ತದೆ? ನಾರದರೇ ! ಸಾವೆಂಬ ಮಾತಿಗೆ ಅರ್ಥವೇನು?
ಸಾಯುವುದು ಹೇಗೆ ? ಸ್ವಲ್ಪ ಹೇಳಿರಿ-ನೋಡೋಣ !

ನಾರದ:-ಕಂಸಾ ! ಸಾವು ನಾನಾಬಗೆಯಾಗಿರುತ್ತದೆ !
ಕಂಸ:- ಏನೇನು ಬಗೆ? ಈಗ ಲೋಕದಲ್ಲನೇಕರು ಸಾಯು
ವರಲ್ಲಾ ! ಒಬ್ಬೊಬ್ಬರೂಂದೊಂದು ವಿಧವಾಗಿ ಸಾಯುವರೋ?