ಪುಟ:ಶ್ರೀ ಕೃಷ್ಣ ಲೀಲೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯ದ್ವಿತೀಯಾ೦ಕಂ

ಕಂಸ:-(ಗಾಬರಿಯಿಂದ) ಇಲ್ಲಿಯೇ ಕೇಳಿದಿರಾ ? ಯಾರ
ಬಾಯಿಂದ ಕೇಳಿದಿರಿ?

ನಾರದ:-ಕಂಸನ ಬಾಯಿಂದ!
ಕಂಸ:-(ಭಯದಿಂದ) ಏನೇನು? ನನ್ನ ಬಾಯಿಂದಲೇ ಕೇಳಿದಿರಾ?

ನಾರದ-(ನಸುನಗುತ) ಎಲೈ ಕಂಸನೇ ! ಏಕೆ ಮರೆಮಾಚು
ತಿರುವೆ? ನೀನು ಹೇಳದಿದ್ದರೆ ನನಗೆ ತಿಳಿಯಲಾರದೆಂದೆಣಿಸಿದೆಯಾ?
ಈ ವಿಚಾರವನ್ನೆಲ್ಲಾ ನಾನು ಚೆನ್ನಾಗಿ ಬಲ್ಲೆನು!

ಕಂಸ:- ನಾರದರೇ ! ಈ ವಿಚಾರವನ್ನೆಲ್ಲಾ ತಾವು ಬಲ್ಲಿರಾ?

ನಾರದ:-ಈ ವಿಚಾರವನ್ನೂ ಬಲ್ಲೆನು! ಇದಕ್ಕೆ ಮೂಲಕಾರ
ಣವಾದ ರಹಸ್ಯ ವಿಚಾರವನ್ನೂ ಬಲ್ಲೆನು!

ಕಂಸ:-(ಭಯ ವಿನಯಗಳಿಂದ ನಾರದರಿಗೆ ವಂದಿಸಿ ಪ್ರಾರ್ಥಿ
ಸುವನು.)

  ಕ೦|| ನಾರದ ಮುನಿವರ ಶತ್ರುವಿ, ಚಾರವದೇನೇನು ಪೇಳಿ ನಿರ್ವಂಚನೆಯಿಂ|
       ಕೂಳರನೆಲ್ಲರ ಪಿಡಿಯುತೆ, ಸೀಳುವೆನೀಕ್ಷಣದೊಳೆನ್ನ ಭುಜಬಲದಿಂದಂ ||

       ನಾರದರೆ! ನನ್ನ ವಿಚಾರವಾಗಿ ದುರಾಲೋಚನೆ ಮಾಡತಕ್ಕವರು
ಕೂಡಾ ಇರುವರೇನು ? ಅಂಥವರಾರು ? ದಯವಿಟ್ಟು ಅವರ ವಿಚಾರ
ವನ್ನು ತಿಳಿಸಿರಿ ! ಅಂತಹ ನೀಚರನ್ನು ಈಗಲೇ ಹಿಡಿದು ನನ್ನ ಕತ್ತಿಗೆ
ಬಲಿಕೊಡುವೆನು!

ನಾರದ:- ಕಂಸಾ! ಸ್ವಲ್ಪ ಸೈರಿಸು. ಏತಕ್ಕೆ ವೃಥಾ ಕಂಠಶೋಷ
ಮಾಡಿಕೊಳ್ಳುವೆ? ಕಾರ್ಯಕಾರಣಗಳ ರಹಸ್ಯವನ್ನರಿಯದೆ ವ್ಯರ್ಥ
ವಾಗಿ ಮಾತನಾಡುವುದರಿಂದೇನು ಪ್ರಯೋಜನ?

ಕಂಸ:-ನಾರದರೇ ! ಆ ರಹಸ್ಯವನ್ನು ತಿಳಿಸಿರಿ.

ನಾರದ:- ಕಂಸನೇ ! ಪೇಳುವೆನು ಕೇಳು. ಪರಿಹಾಸ್ಯವಾಗಿ
ಭಾವಿಸಬೇಡ! ನಿನ್ನ ತಂಗಿಯಾದ ದೇವಕಿಯೂ, ನಿನ್ನ ಭಾವನಾದ ವಸು
ದೇವನೂ, ಗೋಕುಲದಲ್ಲಿರುವ ನಂದಗೋಪನೂ, ಯಶೋದೆಯೂ,
ಗೋಪಾಲಕರೂ, ಗೋಪಕಾಮಿನಿಯರೂ, ಮತ್ತು ಸಮಸ್ತ ಯಾದ
ವರೂ ಸಾಮಾನ್ಯ ಮನುಷ್ಯರಲ್ಲ. ಅವರೆಲ್ಲರೂ ದೇವತೆಗಳೆಂದು ತಿಳಿ !