ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧ ದ್ವಿತೀಯಾಂಕಂ-ಪಂಚಮರಂಗಂ.
               ಪ್ರದೇಶ:-ಶ್ರೀವೈಕುಂಠ.





Insert picture here >>





[ಶ್ರೀಮಹಾ ವಿಷ್ಣುವು, ಯೋಗಮಾಯೆಗೆ ಕಾರ್ಯಕ್ರಮಗಳನ್ನು
                    ಆಜ್ಞಾಪಿಸುವನು.]


ವಿಷ್ಣು:-ಎಲೌ ಪರಾಶಕ್ತಿಯೇ! ಕಂಸಾದಿ ದುಷ್ಟ ರಾಕ್ಷಸ
ರನ್ನು ಸಂಹರಿಸಿ, ಭೂಭಾರವನ್ನು ಪರಿಹರಿಸಬೇಕಾದ ಮಹತ್ಕಾರ್ಯವು
ನಡೆಯಬೇಕಾಗಿದೆ. ಈ ಸಂದರ್ಭದಲ್ಲಿ ನೀನು ಮಾಡಬೇಕಾದ ಕಾರ್ಯ
ಗಳು ಕೆಲವಿರುವುವು!

ಯೋಗಮಾಯೆ:-ಉ|| ಅಕ್ಷಯ ಧರ್ಮಮೂರ್ತಿ ಕುಜನಾವಳಿ ಶಿಕ್ಷಣ ದರ್ಮ ಸಂ
              ರಕ್ಷ ಸುಭಿಕ್ಷದಾಯಕ ಸುಲಕ್ಷ್ಮಣ ಲಕ್ಷಿತ ಸದ್ವಿಚ ಣಾ | ಸುಕ್ಷ
              ಣ ವಿಶ್ವ ವಿಶ್ವ ಮಯಸೂರಿ ಜನೋದ್ದರ ಸತ್ಕಟಾ ಕೃಪಾ | ಪ
              ಕ್ಷಯ ದಕ್ಷ ದೇವ ಬುಧಪಕ್ಷ ಸುರಕ್ಷಕ ಭಕ್ತಪಾಲಕಾ ||

       ಪರಂಧಾಮನೇ! ಅಧರ್ಮವನ್ನು ನಿರ್ಮೂಲ ಮಾಡುವುದಕ್ಕೂ,
ಧರ್ಮವನ್ನುದ್ದರಿಸುವುದಕ್ಕೂ ಕರ್ತನಾದ ನೀನು ಸಂಕಲ್ಪಿಸಿದೆಯಾದರೆ,