ಪುಟ:ಶ್ರೀ ಕೃಷ್ಣ ಲೀಲೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩ದ್ವಿತೀಯಾಂಕಂ.

ಕ್ಷೇತ್ರದಲ್ಲಿ ಕುಮುದೆಯೆಂತಲೂ, ಅಮರಕಕ್ಷೇತ್ರದಲ್ಲಿ ಚಂಡಿಕೆಯೆಂ
ತಲೂ, ಹಸ್ತಿನಾವತಿಯಲ್ಲಿ ಕೃಷ್ಣೆಯೆಂತಲೂ, ಶ್ರೀಶೈಲದಲ್ಲಿ ಮಾಧವಿಯೆಂ
ತಲೂ, ಕನ್ಯಾಕುಬ್ಬದಲ್ಲಿ ಕನ್ಯಕೆಯೆಂತಲೂ, ಮಾಯಾವತಿಯಲ್ಲಿ ಮಹಾ
ಮಾಯೆಯೆಂತಲೂ, ಸುಪಾರ್ಶ್ವಕ್ಷೇತ್ರದಲ್ಲಿ ನಾರಾಯಣಿಯೆಂತಲೂ,
ರುದ್ರಕೋಟೆಯಲ್ಲಿ ಈಶಾನೆಯೆಂತಲೂ, ಬ್ರಹ್ಮಕ್ಷೇತ್ರದಲ್ಲಿ ಶಾರದೆಯಂ
ತಲೂ, ಸಿದ್ದವನದಲ್ಲಿ ಅಂಬಿಕೆಯೆಂತಲೂ, ಸರ್ವತ್ರ ದುರ್ಗೆಯೆಂತಲೂ,
ನಿನ್ನ ನಾಮರೂಪಗಳನ್ನು ಹೊಗಳುತ್ತ ಪೂಜಿಸುವರು!

ಯೋಗಮಾಯೆ:-ಪರಮಾತ್ಮನೇ ! ನಿನ್ನಿಷ್ಟದಂತಾಗಲಿ ! ನಾನಿ
ನ್ನು ತೆರಳುವೆನು !

ವಿಷ್ಣು:-ಕಲ್ಯಾಣೀ! ನಿನಗೆ ಮಂಗಳವಾಗಲಿ !

         [ನಿಷ್ಕ್ರಮಿಸುವಳು]

                  **** ****

         ಪ್ರದೇಶ-ಮಧುರಾಪುರದ ಸೆರೆಮನೆ.

ದೇವಕಿ:- ರಾಗ ಖರಹರಪ್ರಿಯ ಅಥವಾ ಹಿಂದೂಸ್ಥಾನಿ ಕಾಪಿ-ಏಕತಾಳ

      ಹಾ ವಿಧೀ ಸೈಸಲೆಂತು ಘೋರ ದುಃಖವ || ಪ ||
      ದುರಾತ್ಮನಾದ ಕಂಸನಿಂತು ಕಾಡಿಸುತಿರುವ || ಹಾ ವಿಧೀ ||ಅ-ಪ||
      ನೆರೆಪೆತ್ತ ಜನನಿ ಜನಕರನ್ನು ಕರಕರೆ ಪಡಿಪ, ದುರಿತಾತ್ಮ,
      ನವನು ದೈವದ್ರೋಹಿ ನೀಚನಾ ಹಹಾ || ಹಾವಿಧೀ||

ಸರ್ವಶಕ್ತನಾದ ಭಗವಂತನೆ ! ನಮಗೆ ಬಂಧುಮಿತ್ರರೆನಿಸುವ
ಜನರು ಅನೇಕರಿದ್ದಾಗ್ಯೂ, ನಮ್ಮ ಕಷ್ಟಸುಖಗಳನ್ನು ವಿಚಾರಿಸತಕ್ಕ
ವರು ಒಬ್ಬರಾದರೂ ಇಲ್ಲವೆ. ಕಂಸನ ದುರಾಗ್ರಹಕ್ಕೆ ಎಲ್ಲರೂ ಹೆದರು
ತ್ತಿರುವರು. ಪರಂತು ನನ್ನ ಜನನೀಜನಕರ ಮುಖವನ್ನಾದರೂ
ನೋಡೋಣವೆಂದರೆ ಅದೂ ಸಾಧ್ಯವಿಲ್ಲವಾಗಿದೆ! ದೌರ್ಭಾಗ್ಯಳಾದ ನನ
ಗಾಗಿ ಆರ್ಯಪುತ್ರನೂ ಕಷ್ಟಕ್ಕೆ ಗುರಿಯಾಗಿರುವನು. ಎಷ್ಟು ಚಿಂತಿಸಿ
ಫಲವೇನು? ಎಲೈ ದೀನಬಂಧುವೆ ! ನಮಗೆ ತಂದೆಯೂ ನೀನೆ !
ತಾಯಿಯೂ ನೀನೆ ಬಂಧುವೂ ನೀನೆ. ಗುರುವೂ ನೀನೆ. ದೈವವೂ
ನೀನೆ. ಗತಿಯೂ ನೀನೆ. ಸರ್ವವೂ ನೀನೆ. ನಿನ್ನ ವಿಲಾಸವಿದ್ದಂತಾಗಲಿ!