ಪುಟ:ಶ್ರೀ ಕೃಷ್ಣ ಲೀಲೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪ಕೃಷ್ಣಲೀಲೆ

    [ದೇವಕಿಯ ಪರಿತಾಪವನ್ನು ಕೇಳುತ ಹೊರಗೆ ನಿಂತಿದ್ದ ಉಗ್ರ
ಸೇನನ ಪತ್ನಿಯಾದ ಮಹಾರಾಣಿಯು ಒಳಹೊಕ್ಕು ಮಗಳನ್ನು
ಸಮಾಧಾನಪಡಿಸುವಳು.]

ಮಹಾರಾಣಿ:-ಮಗಳೇ ! ಭಗವಂತನು ನಿನಗೆ ಮಂಗಳವನ್ನುಂಟುಮಾಡಲಿ!

ದೇವಕಿ :-(ತಾಯಿಗೆ ನಮಸ್ಕರಿಸಿ) ಆಮ್ಮಾ ! ನೀವೆಲ್ಲರೂ ಕುಶಲದಿಂದಿರುವಿರಾ ?

ಮಹಾರಾಣಿ:-ದೇವಕೀ ! ನಮ್ಮ ಕುಕಲವು ಹಾಗಿರಲಿ, ಸದ್ಯ ನಿನ್ನ ಸಂಕಟವನ್ನು
ನೋಡಿ ಸೈರಿಸಲಾರದೆ ನನ್ನ ಹೃದಯವು ಬಿರಿದುಹೋಗುತ್ತಿದೆ. ನಾನೇನು ಮಾಡಬಲ್ಲೆನು ? ದುಪ್ಪಪುತ್ರನನ್ನು ಪಡೆದ ಹತಭಾಗ್ಯಳಾದ ನಾನು ಈ ಕ್ರೂರಕರ್ಮಗಳನ್ನೆಲ್ಲಾ ಕಣ್ಣಿಂದ ನೋಡಬೇಕಾಯಿತು. ನಮ್ಮನ್ನು ಕಾಪಾಡತಕ್ಕವರಾರು ?

ದೇವಕಿ:-ಅಮ್ಮಾ ನಮ್ಮ ಕಷ್ಟವನ್ನು ಪರಿಹರಿಸತಕ್ಕ ಶಕ್ಕರು ಮನುಷ್ಯರಲ್ಲಿ
ಯಾರೂ ಇಲ್ಲವು. ಸರ್ವಶಕ್ತನಾದ ಭಗವಂತನೇ ಇದನ್ನು ಪರಿಹರಸಬೇಕು. ಜನನೀ!
ನೀನು ಅಕಾಲದಲ್ಲಿ ಬಂದಿರುವೆ. ಕಂಸನ ಪಕ್ಷದವರಾದ ನಿಶಾಚರರು ಪಹರೆ ಬರುವ ಹೊತ್ತಾಯಿತು. ನೀನಿನ್ನು ತೆರಳು.

    [ಮಹಾರಾಣಿಯು ಮಗಳನ್ನು ಮುದ್ದಿಸಿ, ಕಣ್ಣೀರಿಡುತ್ತ ತೆರಳುವಳು.]
                  ** ** **
              ದ್ವಿತೀಯಾಂಕಂ ಸಂಪೂರ್ಣ೦.
                  ** ** **
                  ಪರಾತ್ಪರಾಯನಮಃ !