ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

          ಶ್ರೀರಸ್ತು
      'ಶ್ರೀ ಕೃಷ್ಣ ಲೀಲೆ

         ತೃತೀಯಾಂಕಂ.

          ಪ್ರಥಮರಂಗಂ,

ಪ್ರದೇಶ:-ಸೆರೆಮನೆಯ ಮುಂಭಾಗದ ಪಾಕಶಾಲೆ,

Insert picture here

ಲಲಿತೆ :-ಅಗೋ ! ವಿಶ್ವ ಪುರುಷನು ತನ್ನ
ಪ್ರೇಯಸಿಯಾದ ಪ್ರಾಗ್ದಿಶಾಂಗನೆಯ ಬೈತಲೆಗಲಂ
ಕರಿಸಿದ ನವರತ್ನ ಪದಕದಂತೆ ಸೂರ್ಯ ಬಿಂಬವು
ಅರುಣ ಕಾಂತಿಯಿಂದ ಈಗೀಗಲೆ | ಉದಯವಾ
ಗುತ್ತಿರುವುದು. ಪ್ರಪಂಚದಲ್ಲಿ ಜನರೆಲ್ಲರೂ ಹಗ
ಲು ವೇಳೆಯಲ್ಲಿ ಕಾರ್ಯಭಾರಗಳನ್ನು ನಡೆಸಿ,ರಾತ್ರಿ
ಕಾಲದಲ್ಲಿ ನಿದ್ರಿಸುವುದು ಸಹಜವಾಗಿದೆ. ನಮ್ಮ
ಮಹಾರಾಜನಾದ ಕಂಸನಾದರೋ ರಾತ್ರಿಯಲ್ಲಿ
ತನ್ನ ವ್ಯವಹಾರಗಳನ್ನು ನಡಿಸುತ್ತ, ಹಗಲು ವೇಳೆ
ಯಲ್ಲಿ ನಿದ್ರಿಸುವನು. ಇದೊಂದು ವಿಲಕ್ಷಣ
ವ್ಯಾಪಾರವೇ ಸರಿ! ಇದೊಂದೇಯೆಂದು ಹೇಳಲೇಕೆ?
ಅವನು ಮಾಡುವ ಕಾರ್ಯಗಳೆಲ್ಲವೂ ವಿಲಕ್ಷಣವಾ
ದುವುಗಳಾಗಿಯೇ ಇರುವುವು! ಪರಂತು ಕಂಸನು