೪೧ತೃತೀಯಾಂಕಂ
ದೇವಮುನಿಗಳೆಲ್ಲರೂ:-ಪುಣ್ಯಾತ್ಮರೇ! ನಿಮಗೆ ಮಂಗಳವಾಗಲಿ.
[ಬ್ರಹ್ಮಾದಿಗಳೆಲ್ಲರೂ ನಿಷ್ಕ್ರಮಿಸುವರು.]
ದೇವಕೀ ವಸುದೇವರು ತಮ್ಮ ಹಾಸುಗೆಯ ಬಳಿಗೆ ಬಂದ ತಕ್ಷ
ಣವೇ ಅಗಾಧವಾದ ಶಬ್ದವುಂಟಾಗುವುದು. ಶಬ್ದದೊಂದಿಗೆ ಕೋಟಿ
ಸೂರ್ಯಪ್ರಕಾಶವಾದ ದಿವ್ಯ ತೇಜಸ್ಸುಂಟಾಗುವುದು, ಕೂಡಲೇ ಶ್ರೀಮ
ನ್ನಾರಾಯಣನು ದೇವಕೀ ವಸುದೇವರಿಗೆ ಪ್ರತ್ಯಕ್ಷವಾಗಿ ಸಂದರ್ಶನ
ಕೊಡುವನು.
Insert picture
ದೇವತೆಗಳು ಪೂಮಳೆ ಕರೆಯುವರು.
(ವಸುದೇವನು ಭಗವಂತನನ್ನು ನೋಡಿದಕೂಡಲೇ, ನಮ್ರಭಾ
ವದಿಂದಲೂ, ಭಕ್ತಿ ವಿಶ್ವಾಸಗಳಿಂದಲೂ, ಅಂಜಲೀಬದ್ದನಾಗಿ ಸ್ತೋತ್ರ ಮಾಡುವನು.)
ವಸುದೇವ:- ಮೋಹನ ಅಥವಾ ಧನ್ಯಾಸಿ-ಆಟ.
ಸ್ವಾಗತವು ಶ್ರೀ ರಮಾ ರಮಣ ನಿನಗೆ ||ಪ||
ಯೋಗೀಂದ್ರ ಚಿತ್ತ ಸಂಚಾರ ನಿನಗೆ ||ಸ್ವಾಗತ||ಅ-ಪ||
ಧೀರನಿಗೆ ಸಜ್ಜನಾಧಾರನಿಗೆ ಪರಮಗಂಭೀರನಿಗೆ ನಿತ್ಯಶೃ೦ಗಾರ ನಿನಗೆ|
ಶೂರನಿಗೆ ಸುಗ ಣ ವಿಸ್ತಾರನಿಗೆ ವರ ನಿರ್ವಿಕಾರನಿಗೆ ದುಃಖ ಸಂಹಾರ ನಿನಗೆ||
||ಸ್ವಾಗತ||
ಪುಟ:ಶ್ರೀ ಕೃಷ್ಣ ಲೀಲೆ.djvu/೫೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ