೪೨ಕೃಷ್ಣಲೀಲೆ
ಚಂದ್ರನಿಗೆ ದಿವ್ಯಗುಣ ಸಾಂದ್ರನಿಗೆ ಸರ್ವನಿಸ್ತ೦ದ್ರನಿಗೆ ಧರ್ಮಸ೦ಕ್ರಂದ ನನಿಗೆ |
ಬೃಂದಾರಕಾವಳೀವಂದ್ಯನಿಗೆ ಸತತ ಸ್ವಚ್ಚಂದನಿಗೆ ನಿರ್ಮಲಾನಂದ ನಿನಗೆ ಸ್ವಾಗತ!! ಶೀಲನಿಗೆ ಭಕ್ತಜನ ಲೋಲನಿಗೆ ಸದ್ಯ ಪರಿಪಾಲನಿಗನಂತ ಜಗಮೂಲ ನಿನಗೆ
ಕಾಲಾನುಕೂಲ ಶುಭಲೀಲಾ ವಿನೋದಗುಣ ಜಾಲನಿಗೆ ಶಿವರಾಮಪಾಲ ನಿನಗೆ || ಸ್ವಾಗತ ||
ಪರಮಾತ್ಮನೆ ! ಅನಂತಕೋಟಿ ಬ್ರಹ್ಮಾಂಡಗಳಿಗೆ ಒಡೆಯನಾ ಗಿಯೂ, ಸರ್ವಸಾಕ್ಷಿಯಾಗಿ ಸಮಸ್ತವನ್ನೂ ನೋಡತಕ್ಕವನಾಗಿಯೂ, ಜ್ಞಾನಾನಂದ ಸ್ವರೂಪನಾಗಿಯೂ, ಸರ್ವತಂತ್ರ) ಸ್ವತಂತ್ರನಾಗಿಯೂ, ಸರ್ವಾಧಿಕಾರಿಯಾಗಿಯೂ,ಸರ್ವಾಂತರ್ಯಾಮಿಯಾಗಿಯೂ, ಸರ್ವಜ್ಞತ್ವ ಸರ್ವಶಕ್ತಿತ್ವಾದಿ ಷಡ್ಗುಣೇಶ್ವರ್ಯ ಸಂಪನ್ನನಾಗಿಯೂ, ವಾತ್ಸಲ್ಯ, ಅಭಯಪ್ರದಾನ, ಅರಿವರಿಹಾರಾದಿ ಕಲ್ಯಾಣಗುಣ ಪರಿಪೂರ್ಣನಾಗಿಯೂ,ಕರುಣಾಸಮುದ್ರನಾಗಿಯೂ, ವಾಚಾಮಗೋಚರನಾಗಿಯೂ, ಜ್ಞಾನನೇತ್ರಗೋಚರನಾಗಿಯೂ ಇರುವ ನೀನು, ಪಾಮರರಾದ ನಮ್ಮನ್ನು ಕಟಾಕ್ಷಿಸಲೆಳಸಿ ನಿನ್ನಿ ಅಪ್ರಾಕೃತ ದಿವ್ಯ ಮಂಗಳಸ್ಪರೂಪ ಸಂದರ್ಶನವನ್ನು ನಮಗನುಗ್ರಹಿಸಿರುವುದನ್ನು ನೋಡಿದರೆ, ನಿನ್ನ ಅವ್ಯಾಜ ಕಾರುಣ್ಯವು ಚೆನ್ನಾಗಿ ವ್ಯಕ್ತವಾಗುತ್ತದೆ. "ಪ್ರಕೃತಿಂ ಸಮಧಿಷ್ಠ ಯ ಸಂಭವಾಮ್ಯಾತ್ಮ ಮಾಯಯಾ” ಎಂಬ ನಿನ್ನ ಸನಾತನ ಧರಸೂ ಇದಂತ, ನಿನಗಧೀನವಾದ ಮಾಯೆಯನ್ನವಲಂಬಿಸಿ ಇಚ್ಚಾ ಮಾತ್ರ ವಾದ ದಿವ್ಯಶರೀರ ಪರಿಗ್ರಹವನ್ನು ಮಾಡುತ್ತಿರುವ ನಿನ್ನ ದಿವ್ಯ ಮಹಿಮೆಯನ್ನು ಬಣ್ಣಿಸಲು ನಾನೆಷ್ಟರವನು ? ಪರಬ್ರಹ್ಮಸ್ವರೂಪನೆ ! ಪರಮ ತಪೋಧನರಾದ ಯೋಗಿಗಳ ಜ್ಞಾನಚಕ್ಷುಗಳಿಗೆ ಪಾತ್ರವಾದ ಈ ನಿನ್ನ ತೇಜೋಮಯಾಕಾರವು ಕೇವಲ ದುಃಖ ಭಾಜನರಾದ ನಮಗೆ ಲಭಿಸಿದುದರಿಂದ ನಾವು ಧನ್ಯರಾದೆವು. ಶರಣಾಗತರಾದ ನಾವು ನಿನ್ನವರಾಗಿರುವೆವು. ನಮ್ಮನ್ನು ಆಜ್ಞಾಪಿಸತಕ್ಕ ಪ್ರಭುವು ನೀನಾಗಿರುವೆ. ಪರಂಧಾಮನೆ! ನಿನ್ನ ಚಿತ್ತವೇ ನಮ್ಮಭಾಗ್ಯವು ! (ಎಂದು ವಸುದೇವನು ನಮಸ್ಕರಿಸುವನು.)
ದೇವಕಿ:-ಭಕ್ತ ತ್ರಾಪರಾಯಣನಾದ ಶ್ರೀಮನ್ನಾರಾಯಣನೆ ! ಲಕ್ಷ್ಮೀವಲ್ಲಭನೆ! ಲಾವಣ್ಯಮೂರ್ತಿಯೆ ! ಅನಂತನಾಮರೂಪಗಳನ್ನೂ