ಪುಟ:ಶ್ರೀ ಕೃಷ್ಣ ಲೀಲೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩ತೃತೀಯಾ೦ಕ೦

ಅನಂತ ಕ್ರಿಯಾಕಲಾಪಗಳನ್ನೂ ಉಂಟಾಗಿ, ಜಗತ್ಕಾರಣನಾಗಿ, ಸರ್ವೈ,
ಶ್ವರ ಸಂಪನ್ನನಾಗಿ ಸರ್ವಮಂಗಳ ಪ್ರದಾಯಕನಾಗಿ, ಸರ್ವತೋಭದ್ರ
ನಾಗಿ ವಿರಾಜಿಸುತ್ತಿರುವ ಭಗವಂತನೇ! ನಿನಗನಂತ ಕೋಟಿ ನಮಸ್ಕಾ
ರಗಳನ್ನು ಸಮರ್ಪಿಸುತ್ತಿರುವೆನು. ಕರುಣಾ ಸಮುದ್ರನೆ! ದುರಾತ್ಮ
ನಾದ ಕಂಸನಿಂದ ಬಂಧಿಸಲ್ಪಟ್ಟು, ಬಗೆಬಗೆಯಾಗಿ ಬಳಲುತ್ತಿರುವ
ನಮಗೆ ನಿನ್ನ ದಿವ್ಯ ಮಂಗಳ ಸ್ವರೂಪ ಸಂದರ್ಶನವು ಲಭಿಸುವುದೆಂದರೆ,
ಅದು ನಮ್ಮ ಭಾಗ್ಯೋದಯವೇ ಸರಿ. ಭಕ್ತವತ್ಸಲನೆ! ಯಾರು
ನಿನ್ನ ಪಾದಾರವಿಂದಗಳಲ್ಲಿ ಅಚಂಚಲವಾದ ಭಕ್ತಿಯನ್ನಿಟ್ಟು, ಅನನ್ಯ
ಶರಣ್ಯರಾಗಿರುವರೋ ಅಂತಹ ಪರಮ ಸಾಧುಗಳ ಕ್ಷೇಮಲಾಭಗ
ಳನ್ನು ನೀನೇ ವಹಿಸಿಕೊಂಡು ಕಾಪಾಡುವೆ. ಇಂದಿರಾರಮಣ!
ಇಭ ರಾಜಗಮನ | ಸುಂದರಾಕಾರ! ಮಂದರೋದ್ದಾರ! ಅನಾಥ ರಕ್ಷಕ
ಆಪದ್ಭಾಂಧವ! ಆನಂದ ನಿಲಯ! ಜಗದೇಕ ಸಾರ್ವಭೌಮ! ಸರ್ವಾಂತ
ರ್ಯಾಮಿಯಾದ ನೀನು ಎಲ್ಲೆಲ್ಲಿಯೂ ವ್ಯಾಪಿಸಿರುವೆ. ನೀನಿಲ್ಲದ ಸ್ಥಳ
ವಾವುದು? ಸರ್ವತ್ರ ತುಂಬಿರುವೆ. ಅತ್ಯಂತ ಹೇಯವಾಗಿ ಭಾವಿಸು
ತ್ತಿದ್ದ ಕಾರಾಗೃಹದಲ್ಲಿಯೇ ನಿನ್ನ ಸಂದರ್ಶನವು ನಮಗೆ ಲಭಿಸಿತಾದು
ದರಿಂದ ಇದನ್ನು ಸೆರೆಮನೆಯೆಂದು ಯಾರು ಹೇಳಬಲ್ಲರು? ಈ ಸೆರೆ
ಮನೆಗುಂಟಾದ ಮಹಾಭಾಗ್ಯವು ಯಾವ ಅರಮನೆಗೂ ಉಂಟಾಗಲಿಲ್ಲ
ಸಚ್ಚಿದಾನಂದಮೂರ್ತಿಯೆ! ನನಗೆ ನಿನ್ನ ಚರಣಕಮಲಗಳಲ್ಲಿ ಸ್ಥಿರ
ವಾದ ಭಕ್ತಿಯೂ, ನಿನ್ನ ಭಕ್ತರೊಂದಿಗೆ ಬಾಂಧವ್ಯವೂ, ಅಪಾರ
ಭೂತದಯೆಯೂ ಉಬಾಗಿರುವಂತೆ ಅನುಗ್ರಹಿಸು, ದೀನ ದಯಾ
ಕರನೆ! ನಿನ್ನ ಚರಣಕಮಲಗಳಿಗೆ ವಂದಿಸುವೆನು.
       [ಎಂದು ದೇವಕಿಯು ನಮಸ್ಕರಿಸುವಳು.]

ವಿಷ್ಣುವು:- ಅಮ್ಮಾ ದೇವಕಿಯೆ! ನಿಮ್ಮ ಭಕ್ತಿಗೆ ನಾನು
ಮೆಚ್ಚಿದೆನು. ದಂಪತಿಗಳಾದ ನೀವಿಬ್ಬರೂ ಧನ್ಯಾತ್ಮರು. ನಿಮ್ಮ
ಪೂರ್ವ ವೃತ್ತಾಂತವನ್ನು ಹೇಳುವೆನು ಕಳಿರಿ. ಮುನ್ನು ಸ್ವಾಯಂ
ಭುವ ಮನ್ವಂತರದಲ್ಲಿ ನೀನು ಪ್ರಶ್ನಿ ಯೆಂಬ ಮಹಾಪತಿವ್ರತೆಯು.
ಈತನು ಸುತಪ ನೆಂಬ ಪ್ರಜೇಶ್ವರನು. ನೀವಿಬ್ಬರೂ ಪ್ರಜಾಸೃಷ್ಟಿ
ಗಾಗಿ ಬ್ರಹ್ಮನಿಂದ ನಿಯಮಿಸಲ್ಪಟ್ಟು, ಜಿತೇಂದ್ರಿಯರಾಗಿ ನನ್ನನ್ನು