ಪುಟ:ಶ್ರೀ ಕೃಷ್ಣ ಲೀಲೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೪೫ತೃತೀಯಾ೦ಕ೦

      [ಎಂದು ವಸುದೇವನಿಗೆ ಕಾರ್ಯಕ್ರಮವನ್ನು ಸೂಚಿಸುತ್ತ
ಭಗವಂತನು ಜಗನ್ಮೋಹನಕರವಾದ ಶಿಶುರೂಪವನ್ನು ಧರಿಸುವನು.
ವಿಷ್ಣುರೂಪವು ಅದೃಶ್ಯವಾಗುವುದು. ದೇವಕಿಯು ಮಗುವನ್ನೆತ್ತಿ
ಕೊಂಡು ಮುದ್ದಾಡುವಳು.]

ದೇವಕಿ:- ರಾಗ-ಆನಂದಭೈರವಿ- ಅಟ.

ಬಾಲ ಯದುಕುಲ ಪುಣ್ಯ ಮೂಲಾ, ವಿನುತಘನಲೀಲ ಶುಭಮಂಗಳ|
ವಿಶಾಲಾ||ಪ||
ನೀಲ ನೀರದ ವರ್ಣಲೋಲಾ, ಸುಜನ ಪರಿಪಾಲ ವರಸುಂದರ ಕಪೋಲಾ||
ಬಾಲ||ಅ-ಪ||
ದೇವ ಮುನಿಹಿತ ಸಾರ್ವಭೌಮಾ, ಪರಮಗುಣ ಸೀಮ ಗೋವಿಂದ ಜಿತಕಾಮಾ! ಶ್ರೀರಮಣ ವೈಕುಂಠ ಧಾಮಾ, ಸತ್ವಗುಣ ಸೋಮ ಶಿವರಾಮನುತ ನಾಮಾ||
ಬಾಲ||
[ಎಂದು ಮಗುವನ್ನು ಮುದ್ದಾಡುವಳು.]

ವಸುದೇವ:ಪ್ರಿಯೆ! ಜಗದಾನಂದಕರವಾದ ನಗುಮುಖ
ದಿಂದ ವಿರಾಜಿಸುತ್ತಿರುವ ಈ ಮುದ್ದು ಬಾಲನನ್ನು ನಿಮಿಷಮಾತ್ರ
ವಾದರೂ ಮುದ್ದಾಡುವ ಭಾಗ್ಯವು ಲಭಿಸಿತಲ್ಲವೆ! ಯೋಗನಿಷ್ಠಾಗರಿ
ಷ್ಠರಾದ ಮುನಿಪುಂಗವರಿಗೆ ಸಹಾ ಇಂತಹ ಭಾಗ್ಯವು ಲಭಿಸಲಾರದು.
        [ಎಂದು ಬಣ್ಣಿಸುತ್ತ ದೇವಕಿಯ ಕೈಯಲ್ಲಿರುವ ಮಗುವನ್ನು
ತನ್ನ ಕೈಗೆ ತೆಗೆದುಕೊಂಡು ಮುದ್ದಾಡುವನು.]

ದೇವಕಿ:-ಪ್ರಾಣೇಶ್ವರಾ! ಅನೇಕ ಜನ್ಮಗಳ ಪೂಜಾಫಲವೇ
ಈ ಶಿಶುರೂಪವಾಗಿ ಮೂರ್ತೀಭವಿಸಿರುವುದು. ಪ್ರಿಯಾ! ಇತ್ತ
ನೋಡಿರೀ ಬಾಲಕನ ಕಪೋಲಗಳೆಷ್ಟು ಮನೋಹರವಾಗಿ ಶೋಭಿಸು
ತ್ತಿರುವುವು! ಹಾ ನನ್ನ ಮುದ್ದು ಕಂದ! ಆನಂದ! ಮುಕುಂದ !
    
      [ಎಂದು ದೇವಕಿಯು ಬಾರಿಬಾರಿಗೂ ಶಿಕುವನ್ನು ಮುದ್ದಾಡು
ವಳು.]

ವಸುದೇವ-ದೇವೀ! ಮರತೆವು, ಮರತೆವು, ಮಗುವ
ನ್ನಿಲ್ಲಿತಾ! ಹೊರಡುವೆನು!