ಪುಟ:ಶ್ರೀ ಕೃಷ್ಣ ಲೀಲೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೧ತೃತೀಯಾಂಕಂ.

     ಒಬ್ಬಸೇವಕ-ಬೇಗಬೇಗ ನಡಿಯಿರೋ!
     ಮತ್ತೊಬ್ಬ ಸೇವಕ:- ಕಂಸನನ್ನು ನೋಡಿ ಗಾಬರಿಯಿಂದ
ಮತ್ತೊಬ್ಬನನ್ನು ಕುರಿತು ಎಲಾ ! ಸ್ವಲ್ಪ, ಥಾ, ಥಾ, ಥಾ, ತಾ ತಾ
ತಾ ಳೊ? (ಎಂದು ಕಳವಳಿಸುವನು.)

     ಮತ್ತೊಬ್ಬ:-(ಮತ್ತಷ್ಟು ಗಾಬರಿಯಿಂದ) ಏ, ಏ, ಏ, ಏನದು?
ಎಂದು ಮೇಲಕ್ಕೆ ಹಾರಿ ನೆಲಕ್ಕೆ ಬೀಳುವನು.
   ವಿವೇಕವುಳ ಮತ್ತೊಬ್ಬ:-ಈ ಮೂರ್ಖರೇಕೆ ಹೀಗೆ ಗಾಬರಿ
ಪಡುತ್ತಿರುವರು ? ( ಸ್ವಲ್ಪ ಯೋಚಿಸಿ ಸುತ್ತಲೂ ಪರಿಕಿಸಿ ಕಂ
ಸನನ್ನು ನೋಡಿ) ಸರಿ ಸರಿ! ಇದಕ್ಕಾಗಿಯೇ ಇವರಿಷ್ಟು ಗಾಬರಿ ಪಡುವರು.
ಕಂಸ ರಾಜೇಂದ್ರನು ಕನಸು ಕಂಡು ಕಳವಳಿಸುತ್ತಿರುವಂತೆ ಕಾಣುತ್ತದೆ.
ಆಗಲಿ! ನಾನು ಸ್ವಲ್ಪಹೊತ್ತು ಇಲ್ಲಿಯೇ ಕಾದಿದ್ದು ಈತನ ಕಳವಳವು
ತೀರಿದ ನಂತರ ದೇವಕಮ್ಮನ ವಿಷಯವನ್ನು ವಿಜ್ಞಾಪಿಸುವೆನು.
       (ಎಂದು ಸ್ವಲ್ಪ ಮರೆಯಾಗಿ ನಿಲ್ಲುವನು.)

    ಕಂಸನು, ಸ್ವಲ್ಪ ಹೊತ್ತಿನ ಮೇಲೆ ಕಳವಳವು ನೀಗಲು ಆಕಳಿ
ಸುತ್ತ ಎಚ್ಚತ್ತು ಸುತ್ತು ಮುತ್ತಲೂ ನೋಡಿ ಅಶ್ಚರ್ಯಚಕಿತನಾಗು
ವನು.

ಕಂಸ:-- ಆಹ! ಇದೇನಾಶ್ವರ್ಯವು ? ಅಂತಃಪುರದಲ್ಲಿ ಹಂಸತೂ
ಲಿಕಾತಲ್ಪದ ಮೇಲೆ ಮಲಗಿ ನಿದ್ರಿಸುತ್ತಿದ್ದ ನಾನು ಇಲ್ಲಿಗೆ ಬರಲು ಕಾರಣ
ವೇನು ? ನನ್ನನ್ನು ಇಲ್ಲಿಗೆ ತಂದವರು ಯಾರು ? ಇದೆಂತಹ ಮಟು
ಮಾಯವು? (ಎಂದು ಸ್ವಲ್ಪ ಯೋಚಿಸಿ) ಪಿಶಾಚಗಳಂತೆ ಅತ್ಯಂತ ವಿಕಾ
ರಸ್ವರೂಪಿಗಳಾದ ನಾಲ್ಕಾರು ಮಂದಿಯು ನನ್ನನ್ನು ಅಟ್ಟಿಕೊಂಡು
ಬಂದರಲ್ಲಾ! ಅವರು ಯಾರಾಗಿರಬಹುದು? ಅವರೀಗ ಎಲ್ಲಿಗೆ ಹೋದರು?
ಎಂದು ಪುನಃ ಯೋಚಿಸಿ) ಓಹೋ ! ತಿಳಿಯಿತು. ತಿಳಿಯಿತು. ಇದೆ
ಲ್ಲವೂ ಕನಸಿನ ಕಳವಳವು. ಇಂತಹ ಕೆಟ್ಟ ಕನಸುಂಟಾಗಲು ಕಾರ
ಣವೇನು?
      (ಎಂದು ವಿತರ್ಕಿಸುತ್ತ ಇಲ್ಲಿಂದಲ್ಲಿಗೆ ಸುಳಿದಾಡುತಿರಲು ಕಾವ
ಲುಗಾರನು ಕಾಣಿಸಿಕೊಳ್ಳುವನು.)