ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨ಕೃಷ್ಣಲೀಲೆ

ಕಾವಲುಗಾರ:– ಅಖಂಡ ರಾಜ್ಯಲಕ್ಷ್ಮೀ ಧುರಂಧರ! ವೀರವಿ
ಕ್ರಮ! ಶತ್ರುಜನ ಗರ್ಭ ನಿರ್ಭೇದನ ! ಜಯ ಜಯ ಕಂಸ ರಾಜೇಂದ್ರಾ!
ಪರಾಕು !! ಪರಾಕು!!!

ಕಂಸ:-ಚಾರನೇ-ಸಮಾಚಾರವೇನು?
ಚಾರ:-ದೇವಕಮ್ಮನವರು ಪ್ರಸವಿಸಿರುವರು.
ಕಂಸ:-(ಬಹಳ ಗಾಬರಿಯಿಂದ)

           ರಾಗ -- ಸುರಟಿ -- ಏಕತಾಳ.

  ಬರುವೆ ಬರುವೆ ಬರುವೆ, ದುರುಳಶಿಶು| ವನು ಪಿಡಿದೆಸೆವೆನು ಗಗನತಲಕೆ
  ಭಲ ||ಪ|| ಪರಿಪರಿ ವಿಧದೊಳು ಮನಕೆ ಖತಿಯ ಕೊಡು| ತಿರುವ ಪಸುಳೆ
  ಯನು ಬಿಡದೆ ಕಡಿವೆನಹ ||ಬರುವೆ|| ಅ.ಪ||

  ಆಹಾ| ಯಾವ ಸಂಶಯದಿಂದ ನಾನು ಇಷ್ಟು ದಿವಸಗಳಿಂದಲೂ
ಕಷ್ಟ ಪಡುತ್ತಿದ್ದೆನೋ, ಆ ದೌರ್ಭಾಗ್ಯ ಶಿಶುವನ್ನು ಪಿಡಿದು ಹಿಂಡಿ ಗಗನ
ಮಾರ್ಗಕ್ಕೆ ಹಾರಿಸುವೆನು. ಅತ್ಯಲ್ಪ ಜೀವಿಯಾದ ಶಿಶುವಂದರೇನು ?
ಅದು ನನ್ನನ್ನು ಕೊಲ್ಲುವುದೆಂದರೇನು? (ಎಂದು ಮೇಲಕ್ಕೆ ನೋಡಿ) ಎಲೌ
ಗಗನವಾಣಿಯೇ! ನೀನು ಯಾವ ಶಿಶುವಿನಿಂದ ನನಗೆ ಪ್ರಾಣಭೀತಿಯುಂ
ಟಾಗುವುದೆಂದು ಹೇಳಿದೆಯೋ ಆ ದೌರ್ಭಾಗ್ಯ ಶಿಶುವನ್ನು ಈಗಲೇ ಪಿಡಿದು
ಅಂಬರಕ್ಕೆ ಹಾರಿಸುವೆನು. ಆ ಶಿಶುವೇ ನನ್ನನ್ನು ಕೊಲ್ಲುವುದೋ, ಅಥವಾ
ಆ ಶಿಶುವನ್ನೇ ನಾನು ಕೊಲ್ಲುವೆನೋ, ಈಗ ನೀನೇ ನೋಡುವೆ! ಇದು ಬರಿ
ಯಮಾತಲ್ಲ. ಜಗದೇಕ ಶೂರನಾದ ಕಂಸ ಭೂಪಾಲನು ಕೋಪಿಸಿದನಾ
ದರೇ ಹದಿನಾಲ್ಕು ಲೋಕಗಳೂ ಅಲ್ಲಕಲ್ಲೋಲವಾಗುವಲ್ಲಿ, ಯಃಕಶ್ಚಿತ್
ಶಿಕುವೇನು ಮಾಡಬಲ್ಲದು? ಆಗಲಿ! ಅದನ್ನೂ ನೋಡಿಯೇ ಬಿಡುವೆನು.
      (ಎಂದು ತೀವ್ರ ಕೋಪೋದ್ದೀಪಿತನಾಗಿ, ತತ್ತರ ಪಡುತ್ತ, ತಕ್ಷ
ಣವೇ ಅಲ್ಲಿಂದ ಹೊರಟು ಕಾರಾಗೃಹಕ್ಕೆ ಪೋಗಿ ದೇವಕಿಯ ಮಡಲಿ
ನಲ್ಲಿದ್ದ ವಸುಳೆಯನ್ನು ಬಲಾತ್ಕಾರವಾಗಿ ಸೆಳೆದು ತನ್ನ ಕೈಯ್ಯಲ್ಲಿ ಪಿಡಿದು
ಥಳಥಳಿಸುವ ಕತ್ತಿಯನ್ನು ಒರೆಯಿಂದೀಚೆಗೆಳೆದು ಝಳಪಿಸುತ್ತ,
ಶಿಶುವನ್ನು ಕಡಿಯಲಾರಂಭಿಸುವನು.

ದೇವಕಿ:-(ಭಯ ಕಂಪಿತಳಾಗಿ ಕಂಸನನ್ನು ತಡೆದು ಪ್ರಾರ್ಥಿಸುವಳು.)