ಪುಟ:ಶ್ರೀ ಕೃಷ್ಣ ಲೀಲೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೧ತೃತೀಯಾಂಕ೦

  ಮಂತ್ರಿಗಳು:-ಪ್ರಭುವೇ ! ತಾವಿಷ್ಟು ದೀನಮುಖದಿಂದ
ಯೋಚಿಸುತ್ತಿರಲು ಕಾರಣವೇನು?

ಕಂಸ:- ಮಿತ್ರರೇ ! ನನ್ನ ದುಃಖವನ್ನು ಏನೆಂದು ಹೇಳಲಿ ?
ನನ್ನನ್ನು ಸಂಹರಿಸುವುದಕ್ಕಾಗಿ ವಿಷ್ಣುವು ಅವತರಿಸಿರುವನಂತೆ. ಅವನು
ಎಲ್ಲಿರುವನೆಂಬುದು ಪರಿಷ್ಕಾರವಾಗಿ ತಿಳಿಯಲಿಲ್ಲ ಅವನನ್ನು ಕಂಡು
ಹಿಡಿಯುವುದಕ್ಕೆ ಉಪಾಯವೇನು? ಈ ವ್ಯಸನವು ಈಗಲೂ ರಾತ್ರಿ
ಯೂ ನನ್ನನ್ನು ಪೀಡಿಸುತ್ತಿರುವದು. ಶತೃಶೇಷವಿರುವವರೆಗೂ
ಕಣ್ಣಿಗೆ ನಿದ್ರೆ ಹಿಡಿಯುವುದೆ? ಮಿತ್ರರೇ! ನೀವೇ ಯೋಚಿಸಿ ನೋಡಿರಿ.

ಅಘಾಸುರ:- ಎಲೈ ಕಂಸ ಭೂಪಾಲಾ! ಈ ಸ್ವಲ್ಪಕಾರ್ಯಕ್ಕಾಗಿ
ನೀನಿಷ್ಟು ಚಿಂತಿಸಬೇಕೆ? ನಮ್ಮ ಶತ್ರುಗಳಾದ ದೇವತೆಗಳಿಗೆ ವಿಷ್ಣುವು
ಸಹಾಯಕನಾಗಿರುವನು. ಆ ವಿಷ್ಣುವಿಗೆ ದೇವತೆಗಳಲ್ಲಿ ಬಹಳ ಪ್ರೀತಿ
ಯಿರುವುದು. ಅವನು ಯಾವಾಗಲೂ ದೇವತಾ ಪಕ್ಷಪಾತಿಯು. ಆದು
ದರಿಂದ ನಾವು ಸರ್ವಪ್ರಯತ್ನದಿಂದಲೂ, ವಿಷ್ಣುವಿಗೆ ದೇವತೆಗಳಲ್ಲಿ
ದ್ವೇಷವುಂಟಾಗುವಂತೆ ಮಾಡಬೇಕು.

ಬಕಾಸುರ:-ಎಲೈ ಕಂಸ ರಾಜೇಂದ್ರಾ ! ಆ ಕೂಳರಾದ ದೇವ
ತೆಗಳಿಗೆ ಸಹಾಯ ಮಾಡತಕ್ಕವನು ವಿಷ್ಣುವೊಬ್ಬನೇ ಅಲ್ಲ! ಮತ್ತೆ
ಬೇಕಾದಷ್ಟು ಮಂದಿ ಇರುವರು.

ಧೇನುಕಾಸುರ:-ಎಲೈ, ಬಕಾಸುರನೆ ! ಭಂಡರಾದ ಆ ದೇವತೆ
ಗಳ ಹೆಸರು ಕೇಳುತ್ತಲೇ ನನ್ನ ಶರೀರದಲ್ಲಿ ಕ್ರೋಧಾಗ್ನಿಯು ಪ್ರಜ್ವಲಿ
ಸುತ್ತಿರುವುದು. ಆ ದುರಾತ್ಮರಾದ ದೇವತೆಗಳಿಗೆ ವಿಷ್ಣುವಲ್ಲದೆ ಮ
ತ್ತಾರು ಸಹಾಯ ಮಾಡುತ್ತಿರುವರೋ? ಅವರ ಹೆಸರುಗಳನ್ನು ತಿಳಿಸು.
   ಅಂತಹ ದುರಾತ್ಮರನ್ನು ಈ ಕ್ಷಣದಲ್ಲಿಯೇ ಧ್ವಂಸಮಾಡುವೆನು

ಅಘಾಸುರ:- ಮಿತ್ರರೇ ನನ್ನ ಮಾತನ್ನು ಕೇಳಿರಿ! ಆ ನಮ್ಮ
ವೈರಿಗಳಾದ ದೇವತೆಗಳಿಗೆ ಸಹಾಯ ಮಾಡತಕ್ಕವನು ವಿಷ್ಣುವೆಂ
ಬುದನ್ನು ನೀವೆಲ್ಲರೂ ಬಲ್ಲಿರಷ್ಟೆ! ಗ್ರಾಮಗಳಲ್ಲಿಯೂ ಪಟ್ಟಣಗಳಲ್ಲಿ
ಯೂ, ಅರಣ್ಯಗಳಲ್ಲಿಯೂ ವಾಸಮಾಡತಕ್ಕ ಋಷಿ ಮುನಿಗಳೆಲ್ಲರೂ
ದೇವತಾ ಪಕ್ಷಪಾತಿಗಳಾಗಿಯೇ ಇರುವರು. ಯಜ್ಞ-ಯಾಗ-ಜಪ-