ಪುಟ:ಶ್ರೀ ಕೃಷ್ಣ ಲೀಲೆ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨ಕೃಷ್ಣಲೀಲೆ

ತಪ-ಮುಂತಾದ ಕ್ರಿಯಾಕಲಾಪಗಳನ್ನೆಲ್ಲಾ ದೇವತೆಗಳ ಪ್ರೀತಿಗಾಗಿ
ಯೇ ಮಾಡುತ್ತಿರುವರು. ಪುಣ್ಯಕ್ಷೇತ್ರಗಳಲ್ಲಿಯೂ, ಪುಣ್ಯತೀರ್ಥಗಳ
ಲ್ಲಿಯೂ ವಾಸ ಮಾಡತಕ್ಕವರೂ, ಪಾತಿವ್ರತ್ಯದಿಂದ ಕೊಬ್ಬಿದ ಸ್ತ್ರೀಯ
ರೂ, ಜ್ಞಾನದಿಂದ ಕೊಬ್ಬಿನ ಬ್ರಹವೇತ್ತರೆಂಬ ಜೋಗಿಗಳೂ, ಸರ್ವ
ದಾ ದೇವತಾ ಪಕ್ಷಪಾತಿಗಳಾಗಿರುವರು ಗೋವುಗಳಲ್ಲಿ ದೇವತೆಗಳು
ವಾಸಮಾಡುವರೆಂಬ ನಂಬಿಕೆಯಿಂದ ಜನರೆಲ್ಲರೂ ಗೋಕ್ಷೀರವನ್ನೂ,
ಗೋಘೃತವನ್ನೂ ದೇವತೆಗಳಿಗೆ ನೈವೇದ್ಯವಾಗಿ ಸಮರ್ಪಿಸುವರು.
ಇದನ್ನೆಲ್ಲಾ ಯೋಚಿಸಿ ನೋಡಿದರೆ ದೇವತೆಗಳ ಅಭಿವೃದ್ಧಿಗೆ, ಗೋವು
ಗಳು-ಋಷಿಮುನಿಗಳು, ಪತಿವ್ರತಾ ಸ್ತ್ರೀಯರು-ಸಾಧುಗಳು ಮುಂ
ತಾದವರು ಪ್ರಬಲಕಾರಣರಾಗಿರುವರು. ಆದುದರಿಂದ ನಾವುಗಳೆಲ್ಲರೂ
ಏಕಾಭಿಪ್ರಾಯವುಳ್ಳವರಾಗಿ, ಆಹೋರಾತ್ರಿಗಳಲ್ಲಿಯೂ ಎಡಬಿಡದೆ
ಪ್ರಯತ್ನಿಸುತ್ತ ದೇವತೆಗಳನ್ನೂ, ದೇವತಾಪಕ್ಷಪಾತಿಗಳಾದ ಪ್ರತಿಯೊ
ಬ್ಬರನ್ನೂ ಹುಡುಕಿ ಹುಡುಕಿ ಧ್ವಂಸಮಾಡಬೇಕು. ಆಗ ನಾವು ನಿರ್ಭಿ
ತರಾಗಿ ನಮ್ಮ ಪ್ರತಾಪವನ್ನು ಸಲ್ಲಿಸಬಹುದು.

ಕಂಸ:- (ದೊಡ್ಡ ಧ್ವನಿಯಿಂದ) ಭಳಿರೇ ಅಘಾಸುರ ! ಚನ್ನಾಗಿ
ವ್ಯಕ್ತ ಪಡಸಿದೆ. ನೀನು ಹೇಳಿದ ಪ್ರತಿಯೊಂದಕ್ಷರವೂ ದಿಟವಾದುದು|

ಅಸುರರೆಲ್ಲರೂ:- (ಒಂದೇ ಧ್ವನಿಯಿಂದ, ಎಲೈ ಪ್ರಭುವೇ!
ಕಂಸ ಮಹೀಪಾಲಾ! ಕೊಡು! ಅಪ್ಪಣೆಯನ್ನು ಕೊಡು ! ಈ ಕ್ಷಣದ
ಲ್ಲಿಯೇ ನಮ್ಮ ವೈರಿಗಳಾದ ದೇವತೆಗಳನ್ನು ಧ್ವಂಸ ಮಾಡುವೆವು.

ಕಂಸ:-ದೇವತೆಗಳನ್ನು ಧ್ವಂಸ ಮಾಡುವುದೊಂದೇ ಅಲ್ಲ.

ಅಸುರರು:-ಮತ್ತೇನು ಮಾಡಬೇಕೋ ಅಪ್ಪಣೆಯಾಗಲಿ!

ಕಂಸ:-ಶ್ಲೋ||ಯತಸ್ಸಾಧ್ವೀತತೋ ಲಕ್ಷ್ಮೀ ಯತೋ ಲಕ್ಷ್ಮೀಸ್ತತೋ ಹರಿಃ
            ಯತೋ ವಿಷ್ಣುಸ್ತತೋ ಧರ್ಮಃ | ಯತೋ ಧರ್ಮಸ್ತತೋ ಜಯಃ||

     ಎಲ್ಲಿ ಪತಿವ್ರತಾ ಸ್ತ್ರೀಯರಿರುವರೋ ಅಲ್ಲಿ ಲಕ್ಷ್ಮಿ ವಾಸ ಮಾ
ಡುವಳು, ಎಲ್ಲಿ ಲಕ್ಷ್ಮಿ ವಾಸಮಾಡುವಳೊ ಅಲ್ಲಿ ವಿಷ್ಣುವು ಪ್ರಸನ್ನ
ನಾಗಿರುವನು. ಎಲ್ಲಿ ವಿಷ್ಣುವು ಪ್ರಸನ್ನನಾಗಿರುವನೋ ಅಲ್ಲಿ ಧರ್ಮವು