ಪುಟ:ಶ್ರೀ ಕೃಷ್ಣ ಲೀಲೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೭೩ತೃತೀಯಾಂಕಂ

ಮಾತ್ರವೇ ಅಧಿಕಾರಿಯೂ, ಅತ್ಯಲ್ಪವಾಗಿ ಕೊಡತಕ್ಕವನೂ ಆದ ಈ
ರಾಕ್ಷಸಾಧಮನನ್ನು ಹೊಗಳಿ ನಾನೇಕೆ ನರಕ ಭಾಜನನಾಗಬೇಕು?
ಛೀ ಛೀ! ನನ್ನ ಬುದ್ದಿಗೆ ಧಿಕ್ಕಾರವಿರಲಿ ! ಇಷ್ಟು ಪರ್ಯಂತರ ನಾನು
ಮೂರ್ಖನಾಗಿದ್ದುದೇ ಸಾಕು| ಇನ್ನು ನರಾಧಮರನ್ನು ಸೇವಿಸುವು
ದಿಲ್ಲ, ನಾರಾಯಣನನ್ನು ಸೇವಿಸಿ ಮುಕ್ತನಾಗುವೆನು!

            ರಾಗ - ಶಂಕರಾಭರಣ - ಆದಿ.

  ಸದಾನಂದಮಯ ಪದಾರವಿಂದವ| ಸದಾ ಭಜಿಸುವೆನು ದೇವನಿನ್ನುದಾರ ಚ
ರಿತವ ಮುದಾ೦ತರ೦ಗದಿ | ಸದಾ ಭಜಿಪೆ ನಾರಾಯಣಾ || ಪ ||
  ಸುರೇಂದ್ರ ತೋಷಣ ಕರೀಂದ್ರ ಪೋಪಣ ಮುನೀಂದ್ರ ಮಾನಸ ಭೂಷಣಾ | ನರೇಂದ್ರ ನಿಸ್ತುಲ ಮೃಗೇಂದ್ರರೂಪ ಸುವಿರಾಜಮಾನ ಬುಧಾವನಾ| ಸದಾ ||
  ಭವಾಬ್ಧಿ ತಾರಣ ಪ್ರಶಾಂತ ಕಾರಣ ಖಗೇಂದ್ರವಾಹನ ಪಾವನಾ ! ವಿವೇಕ ತೋ ರಣ ವಿಕಾಸ ಪೂರಣ ವಿನೀತ ಶಿವರಾಮಾವನಾ || ಸದಾ ||
      [ಎಂದು ಹಾಡುತ್ತ ತೆರಳುವನು.]
ಅಘಾಸುರ:-ಎಲೈ | ಏಕೆ ಹೊರಡುವೆ? ಬಹುಮಾನವು ಬೇಡವೇನು?
ವಿದ್ವಾಂಸ:-ಮಹಾಶಯರೇ ! ಬೇಕಾದಾಗ ಬರುವೆನು.
         (ಎಂದು ನಿಷ್ಕ್ರಮಿಸುವನು.)
ಕಂಸ:-ಒಳ್ಳೆಯದಾಯಿತು. ಎಲೈ ಶೂರ ಶಿಖಾಮಣಿಗಳಿರಾ |
ನೀವೆಲ್ಲರೂ ನಿಮ್ಮ ನಿಮ್ಮ ಕಾರ್ಯಗಳನ್ನು ಎಚ್ಚರದಿಂದ ನೆರವೇರಿಸಿರಿ
ನಾನು ಸಮಯೋಚಿತವಾಗಿ ಬಂದು ನಿಮ್ಮನ್ನು ಕಾಣುವೆನು.
ಎಲ್ಲರೂ:-ಅಪ್ಪಣೆಯಂತಾಗಲಿ.
ಕಂಸ- ನಾನಿನ್ನು ತೆರಳುವೆನು.
ಅಸುರರೆಲ್ಲರೂ:-ನಮಸ್ತೇ ನಮಃ.
          [ಎಲ್ಲರೂ ನಿಷ್ಕ್ರಮಿಸುವರು.]

      ************************
      ತೃತೀಯಾಂಕಂ ಸಂಪೂರ್ಣಂ
     *************************

       ಆಶ್ರಿತ ಪಾರಿಜಾತಾಯ ನಮಃ.