ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀರಸ್ತು
ಶ್ರೀ ಕೃಷ್ಣ ಲೀಲೆ

'ಚತುರ್ಥಾಂಕಂ.
ಪ್ರಥಮ ರಂಗಂ.

ಪ್ರದೇಶ:- ನಂದಗೋಕುಲ.

ಇಂದುಶೇಖೆ, ಚಾರುಮತಿ, ಕಳಾವತಿ, ನಂದಿನಿ, ವಸಂತಮಾಲತಿ,
ಭಾನುವತಿ ಮುಂತಾದ ಗೋಪಸುಂದರಿಯರು ಯುಶೋದಾ
ದೇವಿಗೆ ಪುತ್ರೋತ್ಸವಾದುದಕ್ಕಾಗಿ ತಮ್ಮ ಸಂತೋಷವನ್ನು
ತಿಳಿಸಲೆಳಸಿ ನಂದಗವೆನ ಮನೆಗೆ ಬರುವರು.

ಗೋಪ ಸುಂದರಿಯರು:-
             ರಾಗ - ದೇಶಿ ತೋಡಿ - ಮಿಶ್ರತಾಳ.
ಗೋಪ ಲತಾಂಗಿಯರೆ ಬೇಗ ಬನ್ನಿ! ಬೇಗಬನ್ನಿ || ಪ ||
ನಂದ ಸುಂದರಿಯ ಕಂದನನು ನೋಡುವ ನೋಡಿ ಬರುವ ಗೋಪ||ಅ-||ಪ||
ಅಂದ ಚಂದದಿಂದ ಬಹು ಸುಂದರದಿ ಜನಿಸಿಹನೆಂದು ಪೇಳುವರು ಕಂದನನ್ನು| ಇಂದುಮುಖನನು ನಾವಿಂದು ನೋಡಿ ಬರುವ। ಮಂದ ಗಮನೆಯರೇ ಬನ್ನಿ
ಬನ್ನಿ ಬೇಗ||ಗೋಪ||
ಇಂದುಲೇಖೆ: - ಸಖೀ ಚಾರುಮತೀ | ನಮ್ಮ ಮಹಾರಾಣಿಯಾ
ದ ಯಶೋದಾದೇವಿಗೆ ಪುತ್ರನವಾಗಿರುವುದಂತೆ. ಆ ಬಾಲಕನು
ಜಗನ್ಮೋಹನಾಕಾರನಾಗಿರುವನಂತೆ, ನೀನಾಬಾಲಕನನ್ನು ನೋಡಿ
ರುವೆಯಾ?
ಚಾರುಮತಿ:-ಇಲ್ಲವಮ್ಮಾ! ನಾನಿನ್ನೂ ನೋಡಲಿಲ್ಲ.
ಇಂದುಲೇಖೆ:-ನಂದಿನೀ ! ನೀನು ನೋಡಿರುವೆಯಾ ?
ನಂದಿನಿ:-ನಾನು ಯಶೋದಾದೇವಿಯ ಮನೆಗೆ ಹೋಗಿದ್ದರಲ್ಲವೇ.
 ಮಗುವನ್ನು ನೋಡುವುದಕ್ಕೆ ನಾನಾಕೆಯನ್ನು ನೋಡಿ ಬಹಳ
ದಿವಸಗಳಾದುವು.