ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಷ್ಯವರರು ಚಂಡಿಯು ಗುರುಗಳ ಕಂಡಂತೆ ಕಾಡಲು ಗೌಡತಿಯನ್ನು ತೌಡುಗೋಳಿಸುತಿಹ | ಪುಂಡ - ಪಂಢರಿನಾಥ' ಗುರುವಿನ ವರಶಿಷ್ಯ. ಮಂಡಲವಲಿ ಸ್ಥಾನಗಳಿಸಿರುವ ಗುರುವಿನ ಕಡೆಹುಟ್ಟ ಕಿರಿಮಗನಾದರೂ ವರಶಿಷ್ಯ ತಾನಾಗಿ ಬೆಳೆದಿಹನು | 1100 11 ಹರಿ ! ವಿಠಲಾ ! ಶಿವಾ ! ಗುರುವೆ ! ಜಯ ! ಎನ್ನುತ ಚರಿಪ : ನರಸಪ್ಪ' ನದೇಂ ಧನ್ಯನು || ೧೧ || ಇಂತು ಮನೋಹರ ಸಂತರ ಮಹಿಮೆಯ ಸಂತಸದಿಂದಲಿ ಪಾಡುವದು | ಸಂತರ ಪಾವನ ಜೀವನದಲಿ ನಿಂದು ಅಂತರಂಗ ಶುಚಿ ಮಾಡುವಮ || 09 || - a - ಶ್ರೀ ಭಾವೂಸಾಹೇಬ ಮಹಾರಾಜರವರು (0) ಶ್ರೀ ಸಾಧುಮಹಾರಾಜರವರು ಸುಮಾರು ಹನ್ನೆರಡು ವರುಷ ಉಮದಿ ಯಲ್ಲಿದ್ದರೆಂಬುದನ್ನು ಹಿಂದೆ ಹೇಳಲಾಗಿದೆಯಷ್ಟೇ! ಅಲ್ಲಿ ದೇಶಪಾಂಡೆಯವರ ದೊಡ್ಡ ಮನೆತನವಿರುವದು. ಅದರಲ್ಲಿ ನಾನಾಸಾಹೇಬ ಹಾಗೂ ದಾಜೀಬಾ ಎಂಬ ಬಂಧುಗಳು ಶ್ರೀ ನಿಂಬರಗಿ ಮಹಾರಾಜರವರಿಂದ ಅನುಗ್ರಹ ಪಡೆ ದಿದ್ದರು. ಅವರ ಗುರುನಿಷ್ಠೆಯು ಅಪ್ರತಿಮವಾದುದಿತ್ತು. ನಾನಾಸಾಹೇಬ ರವರು ಗಂಭೀರ ಸ್ವಭಾವದವರೂ ದೂರದೃಷ್ಟಿಯುಳ್ಳವರೂ ಇದ್ದರು. ಹಾಗು