ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಭಾವೂಸಾಹೇಬ ಮಹಾರಾಜರನರು 20 ದಾಟಿಬಾ ಅವರು ಸರಲ ಸ್ವಭಾವದವರಿದ್ದರು. ಇವರ ತಮ್ಮಂದಿರೇ ( ಮರೆಯಲ್ಲಿ ಮೆರೆಯುವ ಹಿರಿಗುರುಗಳನ್ನು ಧರೆಯಲ್ಲಿ ಮೆರೆಸಲು ಮುಂದಾದ ' ಶ್ರೀ ಭಾವೂಸಾಹೇಬ ಮಹಾರಾಜರವರ.. ಮೊದಮೊದಲು ಭಾವೂಸಾಹೇಬರವರು ತಮ್ಮ ಅಣ್ಣಂದಿರ ನಿರ್ಗುಣ ಉಪಾಸನೆಯನ್ನು ನಂಬುತ್ತಿರಲಿಲ್ಲ. ಅವರು ಸಗುಣೋಪಾಸಕರಿದ್ದು ಉಮದಿಯ ಶ್ರೀಹನುಮಂತ ದೇವರನ್ನು ಪ್ರತಿನಿತ್ಯ ತಪ್ಪದೆ ಪೂಜಿಸುತ್ತಿದ್ದರು. ಶ್ರೀ ಸಾಧುಬುವಾ ಅವರು ಆ ಹನುಮಂತ ದೇವರ ಗುಡಿಯಲ್ಲಿಯ ಓವರಿ ಯಲ್ಲಿರುವಾಗ ಭಾವೂರಾಯರನ್ನು ಅವರ ಸಗುಣೋಪಾಸನೆಗಾಗಿ ಆಭಿನಂದಿಸು ತಿದ್ದರು. “ ಭಾವೂರಾಯಾ | ಎಂಥ ಪುಣ್ಯವಂತನಯ್ಯಾ ನೀನು ! ಎಂಥ ಶ್ರೇಷ್ಠ ಭಕ್ತಿಯಯ್ಯಾ ನಿನ್ನದು ! ” ಎಂದು ಹೊಗಳಿ, ಸಾಧುಬುವಾ ಅವರು ಭಾವುರಾಯರನ್ನು ವಂದಿಸುತ್ತಲು ಇದ್ದರು. ಇದರ ಮೂಲಕ ಭಾವುರಾಯರ ಮನಸ್ಸು ಅವರೆಡೆಗೆ ಸಹಜವಾಗಿಯೆ ಸೆಳೆಯಲಾಯಿತು. ಮತ್ತು ಬಿದ್ದು ಗೆಲ್ಲಬೇಕು. ಎಂಬ ವಚನದಂತೆ, ಅವರು ಭಾವೂಸಾಹೇಬರ ಮನಸ್ಸನ್ನು ನಿಜವಾದ ಪರಮಾರ್ಥದೆಡೆಗೆ ತಿರುಗಿಸಿ, ಅವರನ್ನು ಶ್ರೀ ನಿಂಬರಗಿ ಮಹಾ ರಾಜರೆಡೆಗೆ ಒಯ್ದರು. ಶ್ರೀ ಮಹಾರಾಜರವರು ಸಾಧುಬುವಾ ಅವರ ಮುಖಾಂತರವಾಗಿಯೇ ಅವರನ್ನು ಅನುಗ್ರಹಿಸಿದರು. ಇದನ್ನು ಕುರಿತು ಮುಂದೆ ಭಾವೂಸಾಹೇಬರವರು “ ಸಾಧುಬುವಾ ಅವರು ನನ್ನ ಪಾದಗಳಿಗೆರಗಿ ನನ್ನನ್ನು ನಿಜವಾದ ಪರಮಾರ್ಥ ಮಾರ್ಗಕ್ಕೆ ಹಚ್ಚಿದರು ” ಎಂದು ಕೃತಜ್ಞ ತೆಯ ಕಂಬನಿಗಳನ್ನು ಸುರಿಸುತ್ತ ಹೇಳುತ್ತಿದ್ದರು. ( ಅನುಗ್ರಹವನ್ನು ಪಡೆದ ಮೇಲೆ ಭಾವುಸಾಹೇಬರವರು ಉಮದಿ ಯಲ್ಲಿಯೇ ನಿಂತು ಕಡುತರವಾದ ಸಾಧನವನ್ನು ಮಾಡಿದರು. ಪ್ರಪಂಚ. ಪರಮಾರ್ಥಗಳೆರಡನ್ನೂ ಚೆನ್ನಾಗಿ ಸಾಗಿಸಿದರು. ಆದರೆ ಪರಮಾರ್ಥವೇ ನಿಜವಾದ ಸ್ವಾರ್ಥವೆಂದು ಬಗೆದು ಪ್ರಪಂಚದಲ್ಲಿ ಪರಮಾರ್ಥ ಪ್ರೀತಿಯನ್ನು ಅಳಿಯಗೊಡಲಿಲ್ಲ. ಅದನ್ನು ಬೆಳೆಸುತ್ತಲೆ ಇದ್ದರು, ಸಾಧನವು ಬೆಳೆದಂತೆ, ಅನುಭವವು ಬೆಳೆಯಿತು, ವಿವೇಕ ವೈರಾಗ್ಯಗಳೂ ಬೆಳೆದವು. ಅದರ ಮೂಲಕ ಅವರಿಗೆ ಕೊಡಲಾದ ಜತ್ತ ಸಂಸ್ಥಾನದಲ್ಲಿಯ ಮಾಮಲೇದಾರರ ಅಧಿಕಾರ