ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ವನ್ನೂ ಅವರು ಧಿಕ್ಕರಿಸಿದರು-ನಿರಾಕರಿಸಿದರು. ಅದರ ಮೂಲಕವೆ ಅವರು ಜನ ನಿಂದೆಯನ್ನು ಧೈರ್ಯದಿಂದ ಎದುರಿಸಿದರು, ಸ್ವಜನರ ತಾಪವನ್ನು ಅಲ್ಲಗಳೆ ದರು. ಬ್ರಹ್ಮನನ್ನು ಅರಿತವನೇ ಬ್ರಾಹ್ಮಣನೆಂಬುದನ್ನು ಅರಿಯದೆ ಆತ್ಮಜ್ಞಾನ ಪಾರಂಗತರಾದ ತಮ್ಮ ಗುರುಗಳನ್ನು ಅಬ್ರಾಹ್ಮಣನೆಂದು ಹಳಿವವರ ಅಜ್ಞಾನ ವನ್ನು ಕಂಡು ಕನಿಕರಪಟ್ಟರು. ಅನವರತ ಸಾಧನದಿಂದ ಅವರಲ್ಲಿ ಅಲೌಕಿಕ ಸಾಮರ್ಥ್ಯವು ಬೆಳೆಯಹತ್ತಿತು. ಒಮ್ಮೆ ಸದ್ಗುರುಗಳ ಸನ್ನಿಧಿಯಲ್ಲಿ ಸಾಧನಕ್ಕೆ ಕುಳಿತಿರುವಾಗ ಒಂದು ಗುಂಗಾಡು ತೊಡೆಗೆ ಕಚ್ಚಿ ರಕ್ತವು ಸುರಿದರೂ ಅವರು ಆಸನದಿಂದ ಎಳ್ಳಷ್ಟೂ ಕದಲಲಿಲ್ಲ. ಅಡವಿಯಲ್ಲಿ ಸಾಧನವನ್ನು ಮಾಡುವಾಗ ಹಾವು ಚೇಳುಗಳು ಹತ್ತಿರ ಸುಳಿದರೂ, ಮೈಮೇಲೆ ಏರಿದರೂ, ಅವರಿಗೆ ಅಂಜಿಕೆಯಂಬುದು ಗೊತ್ತಿರಲಿಲ್ಲ. ಮಳೆ-ಗಾಳಿ, ಚಳಿ ಬಿಸಿಲು ಅವರನ್ನು ಸಾಧನದಿಂದ ಚಲಿಸುತ್ತಿರಲಿಲ್ಲ. ಭಕ್ತಿಯು ಭರದಿಂದ ಬೆಳೆಯ ಬೇಕೆಂದು ಅವರು ನಿದ್ರೆಯನ್ನು ಗೆದ್ದು ಹದಿನೆಂಟು ವರುಷ ನಿಂತು ಸಾಧನ ಮಾಡಿದರು. ಮತ್ತು ತಮ್ಮ ಹಾಗೂ ಅನ್ಯರ ಜೀವನವನ್ನು ಸಾವನ ಗೋಳಿಸಿದರು. ಶ್ರೀ ಭಾವೂಸಾಹೇಬರವರ ಗುರುಭಕ್ತಿಯು ನಿಸ್ಸಿಮನಾದುದು. ಪ್ರಸಂಗ ಬಂದಾಗ ಸದ್ಗುರುಗಳ ಪಾದರಕ್ಷೆಗಳನ್ನು ಎತ್ತುವ ಕೆಲಸವನ್ನು ಸಹ ಅವರು ಒಳ್ಳೆಯ ಪ್ರೀತಿಯಿಂದ ಮಾಡುತ್ತಿದ್ದರು. ಅವರಿಗೆ ಸದ್ಗು ರುಗಳ ಸೇವೆಯೂ, ಕೃಪೆಯ ವಯಸ್ಸಿನ ನಾಲ್ವತ್ತೆರಡು ವರುಷ ಲಭಿಸಿತು. ಸದ್ಗುರುಗಳ ಕೃಪೆಯಿಂದ ಅವರಿಗೆ ಪರಮಾರ್ಥದಲ್ಲಿಯ ಅತ್ಯುಚ್ಚ ಪದವಿಯು ದೊರೆಯಿತು. ಶ್ರೀ ನಿಂಬರಗಿ ಮಹಾರಾಜರವರು ದೇಹವನ್ನಿಡುವ ಸಮಯ ದಲ್ಲಿ ಅವರಿಗೆ ಪರಮಾರ್ಥವನ್ನು ಬೆಳೆಸಲು ಆಜ್ಞಾಪಿಸಿದರು. ಸದ್ಗುರುಗಳ ನಿರ್ಯಾಣದಿಂದ ಅತ್ಯಂತ ವಿಹ್ವಲರಾಗಿ ಭಾವುಸಾಹೇಬರು ದ್ವಿಗುಣಿತ ಜೋರಿನಿಂದ ಸಾಧನವನ್ನು ಮಾಡಿದರು. ಮತ್ತು ಅದೈತ ಬೋಧವನ್ನು ಪಡೆದರು, ತರುವಾಯ ಭಕ್ತಿಯನ್ನು ಬೆಳೆಸಲು, ಅವರು ಕರ್ನಾಟಕದಲ್ಲಿ ಅಲ್ಲಲ್ಲಿ ಸಂಚರಿಸಿದರು ಅನೇಕರನ್ನು ಅನುಗ್ರಹಿಸಿದರು, ಉದ್ಧರಿಸಿದರು. ಕಿರಿಯರಿರಲಿ