ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಭಾವೂಸಾಹೇಬ ಮಹಾರಾಜರವರು 22 ಹಿರಿಯರಿರಲಿ, ಬಡವರಿರಲಿ, ಬಲ್ಲಿದರಿರಲಿ, ಅವರವರ ಭಾವವನ್ನು ಕಂಡು ಭಾವೂರಾಯರು ಅವರ ಮನೆಗೆ ಹೋಗುತ್ತಿದ್ದರು ಪರಮಾರ್ಥದಲ್ಲಿ ಮೇಲು- ಕೀಳುತನವನ್ನು, ವಿದ್ಯಾ, ಧನ, ವರ್ಣ-ವ್ಯತ್ಯಾಸಗಳನ್ನು ಅವರು ಲೆಕ್ಕಿಸು ತಿರಲಿಲ್ಲ. ಅವರವರ ಭಾವದಂತೆ ಅವರವರ ಕೂಡ ನಡೆದುಕೊಳ್ಳುತ್ತಿದ್ದರು. ನಿಂದಕರನ್ನು ವಂದಿಸುತ್ತಿದ್ದರು, ವಿವಾದಕ್ಕೆ ಎಡೆಗೊಡುತ್ತಿರಲಿಲ್ಲ. ಅನನ್ಯರಿಗೆ ಅನುಭವ-ಜ್ಞಾನವನ್ನು ಅರಸುತ್ತಿದ್ದರು. ಯಾರ ಮೇಲೆಯೂ ತಮ್ಮ ಭಾರವನ್ನು ಬೀಳಗೊಡುತ್ತಿರಲಿಲ್ಲ. ಶಿಷ್ಯರಿಗೆ ಏನನ್ನೂ ಬೇಡುತ್ತಿರಲಿಲ್ಲ. ಬಾಹ್ಯ ಆಡಂಬರಕ್ಕೆ ಅವರಲ್ಲಿ ಆಸ್ಪದವಿರಲಿಲ್ಲ. ಭಗವಂತನ ನಾಮ ಔಷಧ ದಿಂದ ಅವರು ಅನೇಕರ ಬಾಧೆಯನ್ನೂ, ವ್ಯಾಧಿಯನ್ನೂ, ಸಂಕಟಗಳನ್ನೂ ನಿವಾರಿಸುತ್ತಿದ್ದರು. ಅವರ ತ್ರಿಕಾಲ ಸಾಧನವೂ ಪುರಾಣ, ಭಜನವೂ ಎಂದೂ ತಪ್ಪುತ್ತಿದ್ದಿಲ್ಲ. ಮೇಲಿಂದ ಮೇಲೆ ಅವರು ಅನುಭಾವ ಆನಂದದಲ್ಲಿ ಮುಳುಗುತ್ತಿದ್ದರು. ಅವರೆಡೆಗೆ ಬಂದವರಲ್ಲಿ ಬರಿ ಪುರಾಣ ಭಜನಗಳನ್ನಷ್ಟೆ ಕೇಳುತ್ತಿದ್ದವ ರಿಗೆ ನಾಮಧಾರಕರ ಸಾಧಕಸ್ಥಿತಿಯೂ ಅವರಿಗೆ ದೊರೆವ ಆತ್ಮಾನುಭವವೂ ಆತ್ಮಾನಂದವೂ ತಿಳಿಯುತ್ತಿರಲಿಲ್ಲ. ಯಾಕಂದರೆ ಕೇವಲ ಶಬ್ದ ಜ್ಞಾನದಲ್ಲಿ ನಿರತರಾದವರಿಗೆ ನಿಃಶಬ್ದ - ಜ್ಞಾನದ ಅಂದಚಂದಗಳು ತಿಳಿಯುವದೆಂತು ? ಶ್ರೀ ಭಾವೂಸಾಹೇಬ ಮಹಾರಾಜರವರು ಪುಣ್ಯಮಾರ್ಗದಿಂದ ನಡೆಯುತ್ತಿದ್ದ ಮೂಲಕ, ಅವರು ಪ್ರತ್ಯಕ್ಷ ಮಾಡದಿದ್ದರೂ, ಅನೇಕ ಚಮತ್ಕಾರಗಳು ತಾವಾಗಿಯೇ ಆಗುತ್ತಿದ್ದವು. ಆತ್ಮಜ್ಞಾನಕ್ಕೆ ಸಿದ್ಧಿಯ ಮೈಲಿಗೆ ಇರಬಾರದು. ಆದುದರಿಂದ ಅವರು ಸಿದ್ಧಿಯನ್ನೆಂದೂ ಮಾಡುತ್ತಿರಲಿಲ್ಲ. ಆದರೂ ಭಗವಂತನು ಭಕ್ತರ ಇಚ್ಛಿತವನ್ನು ತಾನಾಗಿಯೆ ಪೂರೈಸುತ್ತಿದ್ದನು. ಸಾಧ್ಯವು ಕೈಗೂಡಿದರೂ ಭಾವೂಸಾಹೇಬರು ಶಿಷ್ಯರಿಗೆ ಉತ್ಸಾಹ ಬರಬೇಕೆಂದು ಸಾಧನವನ್ನು ಬಿಡಲಿಲ್ಲ. ಈ ರೀತಿ ಸದ್ಗುರುಗಳ ಆಜ್ಞೆಯ ಮೇರೆಗೆ ಅವರು ಪರಮಾರ್ಥ- ಪ್ರಸಾರವನ್ನು ಕೊನೆಯವರೆಗೆ ಎಡೆಬಿಡದೆ ನಡಿಸಿ, ಸನ್ ೧೯೧೪ ರಲ್ಲಿ ಮಹಾಸಮಾಧಿಯನ್ನು ಪಡೆದರು. 5