ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ಪ್ರಸ್ತಾವನೆ ( 3 ) ಯಾವ ಮಹಾಪುರುಷನ ಯೋಗ್ಯತೆಯೇ ಆಗಲಿ, ಅದು ಅವನ ಬಳಿ ಬಹಳ ದಿನ ಸಂತತವಾಗಿ ನಿಲ್ಲದೆ ತಿಳಿಯುವದಿಲ್ಲ. ಅದೇ ಮೇರೆಗೆ ಶ್ರೀ ಭಾವೂಸಾಹೇಬ ಮಹಾರಾಜರವರ ಯೋಗ್ಯತೆಯು ಕೆಲಮಟ್ಟಿಗಾದರೂ ತಿಳಿಯಬೇಕಾದರೆ ಅವರ ಬಳಿ ಬಹುದಿನ ನಿಂತು, ಅವರ ಪ್ರತಿಯೊಂದು ಕ್ರಿಯೆಯನ್ನು ಅವಲೋಕಿಸಲು ಬೇಕು. ಅವರ ಪೂರ್ಣ ಯೋಗ್ಯತೆಯನ್ನು ಆರಿಯಲು ಅವರಂತೆಯೆ ಆಗಲು ಬೇಕು. ತುಕಾರಾಮರು ಅನ್ನುವ ಮೇರೆಗೆ ಇಂಥವರ ( ಮಹಿಮೆಯನ್ನರಿಯಲು ನಾವು ಮಹಿಮರಾಗಲು ಬೇಕು' ಅದು ಶಕ್ಯವಿಲ್ಲದ್ದರಿಂದ ಸಹವಾಸದಿಂದ ದೊರೆತ ಅದರ ಅಲ್ಪ ಪರಿಚಯದಿಂದಲೆ ನಾವು ಸಮಾಧಾನವನ್ನು ಪಡೆಯಬೇಕು. ಈ ರೀತಿ ನಿಕಟ ಸಹವಾಸದಲ್ಲಿ ನಿಂತು ಸೂಕ್ಷ್ಮರೀತಿಯಿಂದ ಅವರ ನಡತೆಯನ್ನು ಪರೀಕ್ಷಿಸಿದವರಿಗೆ, ಅವರ ನಿಸ್ಪೃಹತೆ, ಅವರ ತಾರುಣ್ಯ, ಅವರ ನಿಯಮಿತತನ, ಅವರ ದೃಢವಾದ ಮನೋನಿಗ್ರಹ, ಹಿರಿಕಿರಿಯರಲ್ಲಿಯ ಸಮತೆ, ಶಿಷ್ಯರಲ್ಲಿ ಅಪಾರವಾದ ಪ್ರೀತಿ, ಗುರುಗಳ ಹಾಗೂ ಆತ್ಮಜ್ಞಾನದ ಮೇಲಿನ ನಿಃಸೀಮವಾದ ಭಕ್ತಿ, ಅಲೌಕ ವಾದ ಶಾಂತಿ, ಹಾಗೂ ಉಪಾಧಿಯಿಂದ ಅಲಿಪ್ತರಾಗಿರುವ ಕೌಶಲ, ಇತ್ಯಾದಿ ಅನೇಕ ಗುಣಗಳು ಕಂಡುಬರದಿರವು. ಇಷ್ಟೇಕೆ ! ಶ್ರೀ ದಾಸಬೋಧದಲ್ಲಿಯ ನಿಃಸ್ಪೃಹ ನಡತೆ (೧೧-೧೦)-ನಿಃಸ್ಪೃಹ ಲಕ್ಷಣ ( ೧೪- ೧)-ನಿಸ್ಪೃಹ ವ್ಯಾಪ ಲಕ್ಷಣ (೧೫-೨ ) ಈ ಸಮಾಸಗಳಲ್ಲಿ ಬಣ್ಣಿಸಲಾದ ಪ್ರತಿಯೊಂದು ಗುಣವನ್ನು ಅವರು ತಮ್ಮ ಆಚರಣೆಯಲ್ಲಿ ಇಳಿಸಿದ್ದರೆನ್ನಲು ಅಡ್ಡಿಯಿಲ್ಲ. ಸಾಧುಗಳ ಗುಣಕರ್ಮಗಳ ಬಗೆಗೆ ಜನಸಾಮಾನ್ಯರ ಕಲ್ಪನೆಗಳು ವಿಚಿತ್ರವಾದವುಗಳಿವೆ ಪ್ರತ್ಯಯದ ಬ್ರಹ್ಮಜ್ಞಾನವನ್ನು ಯಾರೂ ಲಕ್ಷಿಸುವ ದಿಲ್ಲ. ಬಗೆಬಗೆಯ ಚಮತ್ಕಾರಗಳನ್ನು ಮಾಡುವವನು, ಅಸಂಬದ್ಧ ಮಾತಾಡುವವನು ಸಾಧು ; ವಾರ್ಧಕ್ಯದಲ್ಲಿಯೂ ತೇಜಃಪುಂಜವಾದ ದೇಹ ವುಳ್ಳವನು, ವಿಪುಲ ಶಿಷ್ಯ ಸಮೂಹವುಳ್ಳವನು ಸಾಧು ; ವಿದ್ವಾಂಸರೂ, ಶ್ರೀಮಂತರೂ ಆದ ಶಿಷ್ಯರುಳ್ಳವನು ಅಥವಾ ಉಪನಿಷತ್ತುಗಳನ್ನೂ, ಭಾಷ್ಯ ಗಳನ್ನೂ ಚೆನ್ನಾಗಿ ವಿವರಿಸಬಲ್ಲವನೇ ಸಾಧು; ಈ ಬಗೆಯ ಕಲ್ಪನೆಗಳ