ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಭಾವೂಸಾಹೇಬ ಮಹಾರಾಜರವರು " 22 " ಹೇರಳತೆಯಿಂದ ಜನಸಾಮಾನ್ಯರ ತಲೆಯು ತುಂಬಿದೆ. ಆತ್ಮಜ್ಞಾನವು ಅಳಿದ ಮೂಲಕ ಎಲ್ಲೆಲ್ಲಿಯೂ ಅಜ್ಞಾನದ ಕತ್ತಲೆಯ ಕವಿದಿರುವದು. ಈ ಕತ್ತಲೆ ಯನ್ನು ಕಳೆಯುವ ದಿವ್ಯ ಕೆಲಸವನ್ನು ಶ್ರೀ ಭಾವೂಸಾಹೇಬ ಮಹಾರಾಜ ರವರು ಮಾಡಿರುವರು. “ ಶಬ್ದ ಜ್ಞಾನದಿಂದ ಮರುಳಾಗ ಬೇಡಿರಯ್ಯ ಎಂದವರು ಆಗಾಗ ಎಚ್ಚರ ಕೊಡುತ್ತಿದ್ದರು. “ ಅಯ್ಯಾ ! ನಾನೊಬ್ಬ ಕುರುಬ, ನಾನು ವ್ಯಾಕರಣ. ಕೋಶಗಳನ್ನು ಪಠಿಸಿಲ್ಲ. ನನ್ನ ಸ್ವಾಮಿಯು ಮಾತ್ರ ತನ್ನ ಕರುಣದಿಂದ ಒಡಗೂಡಿ, ನನ್ನ ಹೃದಯದಲ್ಲಿ ನೆಲೆಸಿರುವ ಎಂಬುದು ಅವರ ನಿತ್ಯದ ಹೇಳಿಕೆ. ಶ್ರೀಮಹಾರಾಜರವರಿಗೆ ಸಂಸ್ಕೃತ ಬರುವದಿಲ್ಲ, ಅವರು ಉಪನಿಷತ್ತು ಗಳನ್ನೂ- ಭಾಷ್ಯಗಳನ್ನೂ ಓದಿಕೊಂಡಿಲ್ಲ. ಅಂದಮೇಲೆ ಅವರು ಸಾಧುಗಳಾ ಗುವದೆಂತು ? ಎಂಬುದು ಅನೇಕರ ಆಕ್ಷೇಪ, ಈ ಅಜ್ಞರಿಗೆ ವಿದ್ವತ್ತು ಹಾಗು ಆತ್ಮಜ್ಞಾನ ಇವುಗಳಲ್ಲಿಯ ಭೇದವೇ ತಿಳಿಯುವದಿಲ್ಲ. ವೇದಗಳು ಕಂಠರವರಿಂದ ಉಸುರಿರುವದೇನಂದರೆ :- ದ್ವೇ ವಿದ್ಯೆ ಇಹ ವೇದಿತವೆ | ಯತ್ಪರಾ ಚ ಅಪರಾ ಚೇತಿ । ಅಪರಾ ಚ ಯದ್ ಖಲ್ವಿದೋ ಯಜುರ್ವೇದೊಥರ್ವವೇದ: ಸಾಮವೇದ: 1 ಪರಾ ಯಯಾ ತದಕ್ಷರೆಮಧಿಗಮ್ಯತೆ || ವಿದ್ವತ್ವವೂ, ಆತ್ಮಜ್ಞಾನವೂ, ಪರಾವಿದ್ಯೆಯೂ ಅಪರಾವಿದ್ಯೆಯೂ ಶಬ್ದಜ್ಞಾನವೂ, ನಿಃಶಬ್ದ ಜ್ಞಾನವೂ ಇವುಗಳಲ್ಲಿ ಭೂಮ್ಯಾಕಾಶದಷ್ಟು ಅಂತರ ವಿದೆ. ವೇದಶಾಸ್ತ್ರವನ್ನು ಪಠಿಸುವದರಿಂದ ಆತ್ಮಜ್ಞಾನ ಆಗಿಯೇ ತೀರುವ ದೆಂದಲ್ಲ. ಅದು ಇಲ್ಲದಿದ್ದರೂ ಆತ್ಮಜ್ಞಾನವು ಆಗಬಲ್ಲದು. ಸ್ಥಾಣುರಯಂ ಭಾರಹರೋ- ವೇದಾ ನಧೀತ್ಯ ನ ವಿಜಾನಾತಿ ಯೋರ್ಥ೦ || ಅನುಭೂತಿಂ ವಿನಾ ನ ವೃಥಾ ಬ್ರಹ್ಮಣಿ ಮೋದತೇ ಪ್ರತಿಬಿಂಬಿತ-ಶಾಖಾಗ್ರ- ಫಲಾಸ್ವಾದನಮೋದವತ್ || 1