ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ಇತ್ಯಾದಿ ವೇದವಾಕ್ಯಗಳು ಕೂಡ ಬರಿ ವಿದ್ವತ್ವ ಹಾಗೂ ಆತ್ಮಜ್ಞಾನ ಇವುಗಳಲ್ಲಿಯ ಭೇದವನ್ನು ಕಾಣಿಸುವವು. ಪ್ರತ್ಯಕ್ಷವಾದ ಅನುಭವವನ್ನು ಪಡೆಯದೆ ಬರಿ ವೇದಾಂತ ಗ್ರಂಥಗಳನ್ನೋದಿ ತಾವು ಬ್ರಹ್ಮ ಆದೆವೆಂದು ಭಾವಿಸುವುದು ಆತ್ಮವಂಚನೆಯೆ ಸರಿ ! ಶ್ರೀ ಭಾವೂಸಾಹೇಬ ಮಹಾರಾಜರವರು ಇಂಥ ಘನತೆಯನ್ನು ಪಡೆದುದು ಕೇವಲ ಆತ್ಮಜ್ಞಾನಪಾರಂಗತತೆಯಿಂದಲೇ ! ಎಲ್ಲ ಉಪನಿಷತ್ತು ಗಳ ಸಾರವನ್ನು ಅವರು ಅನುಭವಿಸಿದ್ದರು. ಅವರು ಉಪನಿಷತ್ತುಗಳ ತಂದೆಯನ್ನು ತಮ್ಮ ಕಂಠದಲ್ಲಿ ಧರಿಸಿದ್ದರು. ಶ್ರೀ ತುಕಾರಾಮರವರು ಉಸುರಿದ್ದೇನಂದರೆ- ವೇದ ಆಮ್ಲಾವರೀ ರುಸೋನಿಯಾ ಗೇಲಾ | ಆಮ್ಲ ತ್ಯಾಚ್ಯಾ ಬಾಲಾ ಧರಿಲೆ ಕಂಠಿ || ( ವೇದಗಳು ನಮ್ಮ ಮೇಲೆ ಮುನಿದು ತೆರಳಿದರೆ, ನಾವು ಅವರ ಅಪ್ಪನನ್ನು ಕಂಠದಲ್ಲಿ ಧರಿಸಿರುವೆವು. ) ಆತ್ಮಜ್ಞಾನಕ್ಕೆ ಶಬ್ದಜ್ಞಾನವು ನೆರವಾಗುವದು, ಆದರೆ ಅದು ಅದಕ್ಕೆ ಅಪರಿಹಾರ್ಯವಾದುದಲ್ಲ. ಈ ತತ್ವವನ್ನು ಸದೈವ ಅಪ್ಪಿದವರಲ್ಲಿಯೆ ನಿಃಶಬ್ದ ಜ್ಞಾನದ ಪ್ರೀತಿಯು ಬಲಿತು, ಅವರಿಗೆ ಬುದ್ಧಿಯ ಆಚೆಗಿನ ಪರಮಾತ್ಮನನ್ನು ಪಡೆಯುವ ದಾರಿಯು ದೊರೆಯುವದು. ಪರಮಾತ್ಮನ ನಾಮವನ್ನು ನೆನೆದೊಡನೆ ಆತನ ರೂಪವು ಸಹಜವಾಗಿಯೇ ಪ್ರಕಟವಾಗುವದು. ಹಗ- ಲಿರುಳು ನಾಮವನ್ನು ನೆನೆದರೆ, ಭಗವಂತನು ಭಕ್ತನಿಂದ ಅಗಲಲರಿಯನು. ವನಾಂತರಕ್ಕೆ ತೆರಳಬೇಡಿರಿ. ಕುಳಿತಲ್ಲಿಯೆ ನಿಮಗೆ ಶ್ರಮದ ಫಲವು ಲಭಿಸುವದು :- ನಿಶ್ಚಿಂತರಾಗಿ ಕುಳಿತು ಚಿತ್ರವ ವಿಮಲಗೊಳಿಸಿರಿ ! (ಅ೦ದರೆ) ಅಂತಪಾರವಿಲ್ಲದ ಸುಖವು ದೊರೆಯುವದಯ್ಯ ! || ೧ || ಅಂತರಂಗದಲ್ಲಿ ಗೋಪಾಲನು ನೆಲೆಸುವ ಕುಳಿತಲ್ಲಿಯೇ ಆಯಾಸದ ಫಲವು ಲಭಿಸುವದಯ್ಯ || ೨ ||