ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಭಾವೂಸಾಹೇಬ ಮಹಾರಾಜರವರು ರಾಮ-ಕೃಷ್ಣ-ಹರಿ - ಮುಕುಂದ-ಮುರಾರಿ ಎಂಬ ಮಂತ್ರವ ಕಾಲಕಾಲಕೆ ನೆನೆಯಿರಯ್ಯ ತುಕಾ ಅನ್ನುವ :

-

ಭಾವವು ಏಕವಿಧವಾದೊಡನೆ ನಾನು ಇಂಥ ದಿವ್ಯ ದರ್ಶನಗಳನ್ನು ದಯಪಾಲಿ. 1| 2 || ಸುವೆನಯ್ಯ || ೪ || 22 ಶ್ರೀ ಭಾವೂಸಾಹೇಬ ಮಹಾರಾಜರವರ ಈ ಉಪದೇಶವು ಹೃತ್ಪಟದ ಮೇಲೆ ಕೊರದಿಡುವಂತಹದಿಲ್ಲವೇ ? ಶ್ರೀ (a) ಭಾವೂಸಾಹೇಬ ಮಹಾರಾಜರವರ ಶಿಷ್ಯವೃಂದವು ಬಲು ದೊಡ್ಡದು. ಅವರ ಕೆಲ ಪ್ರಮುಖ ಶಿಷ್ಯರ ಹೆಸರುಗಳನ್ನು 'ನಿತ್ಯ ನೇಮಾ ವಲಿ' ಯಲ್ಲಿಯ ಒಂದು ಮರಾಠಿ ಪದದಲ್ಲಿ ಕಾಣಬಹುದು. ಇಲ್ಲಿ ಅವರ ಹಿರಿ ಶಿಷ್ಯತ್ರಯರ ಅಲ್ಪ ಪರಿಚಯವನ್ನಷ್ಟೇ ಮಾಡಿಕೊಡಲಾಗಿದೆ. ೧. ಶ್ರೀ ಅ೦ಬುರಾವ ಬಾಬಾ ಅವರು :- - ಶ್ರೀ ಬಾಬಾ ಅವರು ಶ್ರೀ ಮಹಾರಾಜರವರ ಪಟ್ಟ ಶಿಷ್ಯರು. ಶ್ರೀ ಸಮರ್ಥ ರಾಮದಾಸ ಸ್ವಾಮಿ ಗಳಿಗೆ ( ಕಲ್ಯಾಣ' ರಿದ್ದಂತೆ, ಶ್ರೀ ಮಹಾರಾಜರವರಿಗೆ ( ಬಾಬಾ ” ಅವರು. ಅಷ್ಟು ನಿಷ್ಠೆ, ಅಷ್ಟು ಅನನ್ಯತೆ, ಅಷ್ಟು ಉಜ್ವಲ ಸಾಧನ-ಅನುಭಾವಗಳು, ಶ್ರೀ ಬಾಬಾ ಅವರವು. ಶ್ರೀ ಬಾಬಾ ಅವರು ಜನಿಸಿದುದು, ಜಿಗಿಜಿನ್ನಿಯಲ್ಲಿ, ಬೆಳೆದುದು ನಿಂಬರಗಿಯಲ್ಲಿ, ಬಾಳಿದುದು ಇಂಚಗಿರಿಯಲ್ಲಿ. ಬಾಲ್ಯದಲ್ಲಿ ಅವರಿಗೆ ನಿಂಬರಗಿ ಮಹಾರಾಜರವರ ದರ್ಶನ ಪ್ರಸಾದಗಳು ಲಭಿಸಿದವು. ಯೌವನದಲ್ಲಿ ಪತ್ನಿಯ ವಿಯೋಗವಾದಾಗ ಶ್ರೀ ದತ್ತರ ದೃಷ್ಟಾಂತವಾಗಿ, ಶ್ರೀ ಮಹಾರಾಜರವರ ಅನುಗ್ರಹದ ಭಾಗ್ಯವು ದೊರೆಯಿತು. ಬಡತನವು `ನಿರಂತರವಾಗಿ ಅವರನ್ನು ಬೆಂಬಳಿಸಿದರೂ, ಸದ್ಗುರುಗಳ ಅನುಗ್ರಹವೂ, ಅದರಿಂದ ನಡೆದ ಅವಿರತ ಸಾಧನವೂ, ಪಡೆದ ಅಮೃತ ಅನುಭಾವವೂ, ಅವರನ್ನು ಸದೈವ ಆನಂದದಲ್ಲಿ ಇರಿಸುತ್ತಿದ್ದವು. ಶ್ರೀ ಮಹಾರಾಜರವರು ಬಾಬಾ ಅವರಿಗೆ ಸಾಕ್ಷಾತ್ ದೇವರಾಗಿದ್ದರು. ಅವರ ಆಜ್ಞೆ ಇವರಿಗೆ ವೇದ ;