ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ಅವರ ಸೇವೆ ಇವರ ಧರ್ಮ-ಕರ್ಮ. ಆದ್ದರಿಂದಲೇ ಶ್ರೀ ಬಾಬಾ ಅವರು ಗುರುವಿನಲ್ಲಿ ಬೆರೆತರು. ಅವರ ಹಿರಿತನದಲ್ಲಿ ಮೆರೆದರು. ” ಅವರ ಅವಿಶ್ರಾಂತ ಸಾಧನದ ಮೂಲಕವೂ ಅಲೌಕಿಕ ಅನುಭಾವದ ಮೂಲಕವೂ, ನಿಃಸೀನ ಭಕ್ತಿ-ಸೇವೆಗಳ ಮೂಲಕವೂ, ಶ್ರೀ ಮಹಾರಾಜರವರು ಅವರಿದ್ದ ಇಂಚಗಿರಿ ಯಲ್ಲಿ ತಮ್ಮ ಮಠವನ್ನು ಸ್ಥಾಪಿಸಿದರು, ಅವರ ಹತ್ತಿರವೆ ನೆಲೆಸಿದರು. ಅವರ ನಿರಲಸವಾದ ಸೇವೆಯಿಂದ ಸಂತುಷ್ಟರಾದ ಮಹಾರಾಜರವರು - * ಧನ್ಯ ಧನ್ಯನಯ್ಯ ಅಂಬುರಾಯಾ ! ನಿನ್ನ ಸೇವೆಯಿಂದ ಧನ್ಯನಾದೆ' ಎಂದು ಅವರಿಗೆ ತಮ್ಮ ಮೆಚ್ಚುಗೆಯನ್ನು ಸಲ್ಲಿಸಿದರು. ಇಂಥ ಶಿಷ್ಯವರರಿಗೆಯೆ ಶ್ರೀ ಮಹಾರಾಜರವರು ಪರಮಾರ್ಥ-ಪ್ರಸಾರವನ್ನು ಮಾಡಲು ಆಜ್ಞಾಪಿಸಿ ದುದು ತೀರ ಸಹಜವಾದುದು. ಮಹಾರಾಜರವರು ಸಮಾಧಿಸ್ಥರಾದ ಮೇಲೆ, ಶ್ರೀ ಬಾಬಾ ಅವರು ಸುಮಾರು ೨೦ ವರುಷ - ನಾರಾಯಣ' ನ ಭಕ್ತಿಯನ್ನು ಬೆಳೆಸಿದರು. ಕೊನೆಗೆ ಆತನನ್ನು ನೆನೆಯುತ್ತಲೆ ದೇಹವನ್ನು ಇಟ್ಟರು. ೨. ಶ್ರೀ ಶಿವಲಿಂಗವ್ವಕ್ಕನವರು :- ಶ್ರೀ ಮಹಾರಾಜರವರ ಶಿಷ್ಯರಲ್ಲಿ ಅವರ ಶಿಷ್ಯರನೇಕರಲ್ಲಿಯೂ ಕೂಡ ಅಕ್ಕನವರು ಅಗ್ರೇಸ ರರು, ಸಾಧನದ ಉತ್ಕಟತೆಯಲ್ಲಾಗಲಿ, ಅನುಭಾವದ ಉಜ್ವಲತೆಯಲ್ಲಾ ಗಲಿ, ಇವರನ್ನು ಸರಿಗಟ್ಟುವವರು ತೀರ ವಿರಲ. ಮೀರುವ ಮಾತಂತೂ ಹಾಗಿರಲಿ, ಶ್ರೀ ಬಸವಣ್ಣನವರಿಗೆ ಮಹಾದೇವಿಯಕ್ಕನವರೂ, ಶ್ರೀ ಸಮರ್ಥ ರಿಗೆ ವೇಣು ಅಕ್ಕನವರು ಇದ್ದಂತೆ, ಶ್ರೀ ಮಹಾರಾಜರವರಿಗೆ ಶಿವಲಿಂಗವ್ವಕ್ಕೆ ನವರು. ಅಕ್ಕನವರ ಯೋಗ್ಯತೆಯು ಮೇಲ್ಕಾಣಿಸಿದ ಮಹಾ ಮಹಿಳೆಯರಿಗಿಂತ ಯಳ್ಳಷ್ಟು ಕಡಿಮೆಯಿರಲಿಲ್ಲ. ಅಕ್ಕನವರು ಜತ್ತಿಯವರು, ಬಾಲ್ಯದಲ್ಲಿಯೇ ವೈಧವ್ಯದ ಪೆಟ್ಟು ತಗಲಿದ ಮೂಲಕ ಅತೀವ ವಿಮಲರಾದಾಗ ಅವರಿಗೆ ಸುದೈವದಿಂದ ಶ್ರೀ ಮಹಾರಾಜರವರ ದರ್ಶನ-ಅನುಗ್ರಹಗಳು ಲಭಿಸಿದವು. ಮುಂದೆ ಅಕ್ಕನವರು ಕಠೋರ ಸಾಧನ ಮಾಡಿ, ಅದ್ಭುತವಾದ ಅನುಭಾವ ವನ್ನು ಪಡೆದರು. ಸಾಧನಕ್ಕಾಗಿ ಒಮ್ಮೆ ದೃಢಾಸನದಲ್ಲಿ ಕುಳಿತರೆಂದರೆ ಅವರು ಆರು ಗಂಟೆಗಳ ವರೆಗೆ ಆಸನದಿಂದ ಕದಲುತ್ತಿರಲಿಲ್ಲ. ಮುಂದೆ ಮುಂದೆ ಅಂತೂ ಅವರ ಸಾಧನವು ಹಗಲು-ಇರಳು ಕೂಡಿಯೆ ನಡೆಯಿತು.