ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಭಾವೂಸಾಹೇಬ ಮಹಾರಾಜರವರು 95 ಸುಮಾರಾಗಿ ೨೪ ಗಂಟೆ ಅವರು ಸಾಧನದಲ್ಲಿಯೇ ಕಳೆಯುತ್ತಿದ್ದರು. ಅವರ ಬೆನ್ನು ನೆಲವನ್ನು ಮುಟ್ಟುತ್ತಿರಲಿಲ್ಲ. ಇಂಥ ಕಡುತರ ಸಾಧನಬಲದಿಂದಲೂ ಶ್ರೀ ಮಹಾರಾಜರವರ ಅನುಪಮ ಕರುಣದ ಬಲದಿಂದಲೂ ಅಕ್ಕನವರಿಗೆ ಪರಮಾರ್ಥದ ಮೇಲಿನ ಮಟ್ಟವನ್ನು ಮುಟ್ಟುವದು ಸಾಧ್ಯವಾಯಿತು. ಮೇರೆಗೆ ತಮ್ಮ ಜೀವನವನ್ನು ಸಾರ್ಥಕಗೊಳಿಸಿ, ಅವರು ಆಧುನಿಕ ಕಾಲದ ಮಹಿಳೆಯರಿಗೆ ಒಳ್ಳೆಯ ಆದರ್ಶವನ್ನು ಹಿಂದಿರಿಸಲು ಸಮರ್ಥರಾದರು. ಅಕ್ಕನವರಲ್ಲಿ ಕವಿತ್ವಶಕ್ತಿಯೂ ಅಪ್ರತಿಮವಾದುದಿತ್ತು. ಆದುದರಿಂದ ಅವರು ತಮ್ಮ ಉಜ್ವಲ ಭಾವ-ಅನುಭಾವಗಳನ್ನು ಪದಗಳಲ್ಲಿಯೂ ಆರತಿ ಗಳಲ್ಲಿಯೂ ಓಲೆಗಳಲ್ಲಿಯೂ ಅಂದವಾಗಿ ಚಿತ್ರಿಸಿರುವರು. ಅವು ಸಾಧಕ ಬಂಧು-ಭಗಿನಿಯರಿಗೆ ಸ್ಫೂರ್ತಿಯ ಸೆಲೆಗಳಾಗಿವೆ. ಅವುಗಳಲ್ಲಿ ಕೆಲ ಪದಗಳು

  • ನಿತ್ಯ-ನೇಮಾವಲಿ” ಯಲ್ಲಿ ಪ್ರಕಟಿಸಲಾಗಿವೆ. ಆದರೆ ಅಕ್ಕನವರ ಸಾಹಿತ್ಯದ

ಬಹುಭಾಗವು ಇನ್ನೂ ಬೆಳಕನ್ನು ಕಾಣಬೇಕು. ಅವು ಪ್ರಸಿದ್ಧವಾದವೆಂದರೆ ಅವರ ಯೋಗ್ಯತೆಯು ಜನರಿಗೆ ಕೆಲಮಟ್ಟಿಗಾದರೂ ತಿಳಿಯಬಹುದು ಯಾಕಂದರೆ ಅನುಭಾವಿಯ ನಿಜವಾದ ಹಿರಿಮೆಯನ್ನು ಅನುಭಾವಿಯೆ ಬಲ್ಲ. ಸಾಮಾನ್ಯರಿಗೆ ಅದು ತಿಳಯುವದು ಸಾಧ್ಯವಿಲ್ಲ. ಅಕ್ಕನವರು ಒಮ್ಮೊಮ್ಮೆ ತಮ್ಮ ಅಂಗೈಯಲ್ಲಿ ಕರ್ಪುರವನ್ನು ಉರಿದು ಶ್ರೀ ಮಹಾರಾಜರವರ ಪ್ರತಿಮೆಗೆ ಬೆಳಗುವದನ್ನು ಕಂಡವರು ಅನೇಕರು ಇದ್ದಾರೆ. ಅಂಥ ಸಾಮರ್ಥ್ಯವು ಅಕ್ಕನವರದು ೩. ಶ್ರೀ ಗಿರಿಮಲ್ಲಪ್ಪನವರು :- ಶ್ರೀ ಮಹಾರಾಜರವರ ಶಿಷ್ಯ ಪರಂಪರೆ ಯನ್ನು ಎಪುಲವಾಗಿ ಬೆಳೆಸಿದ ಶಿಷ್ಯರಲ್ಲಿ ಶ್ರೀ ಗಿರಿಮಲ್ಲಪ್ಪನವರು ಹಿರಿಯ ರೆನ್ನಲು ಅಡ್ಡಿಯಿಲ್ಲ ಇವರ ಕೀರ್ತನ ನಿರೂಪಣಗಳು ಒಳ್ಳೆಯ ಆಕರ್ಷಕ ವಾದವುಗಳು. ಅದರ ಮೂಲಕ ಅವರು ಅನೇಕರಲ್ಲಿ ಪರಮಾರ್ಥ ಪ್ರೀತಿಯನ್ನು ಬೆಳೆಸಿದರು. ಇವರು ಜಂಬುಕಂಡಿಯವರು. ವರ್ತಕರು. ಜೀವನದಲ್ಲಿಯ ಬಗೆಬಗೆಯ ಅನುಭವಗಳನ್ನು ಕಂಡುಂಡು, ಕಷ್ಟ-ನಷ್ಟಗಳನ್ನೂ-ಏರಿಳಿತ ಗಳನ್ನೂ ಅನುಭವಿಸಿ, ಪ್ರಾಯ ಮೀರಿದ ಮೇಲೆ ಇವರು ಶ್ರೀ ಮಹಾರಾಜರವರ ಅನುಗ್ರಹಕ್ಕೆ ಪಾತ್ರರಾದರು. ಉತ್ಸಾಹದಿಂದ ಅವಿಶ್ರಾಂತವಾಗಿ ಸಾಧನ