ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wo ಪ್ರಸ್ತಾವನೆ ಮಾಡಿದರು. ಒಳ್ಳೆಯ ಪ್ರತೀತಿಯನ್ನು ಪಡೆದರು. ಶ್ರೀ ಮಹಾರಾಜರವರು ಇವರಿಗೆ ಅನ್ಯರನ್ನು ಅನುಗ್ರಹಿಸಲು ಕನಸಿನಲ್ಲಿ ಆಜ್ಞಾಪಿಸಿದರಂತೆ. ಆಮೇಲೆ ಅವರು ತಮ್ಮ ಶಿಷ್ಯ ಸಮುದಾಯವನ್ನು ತುಂಬ ಬೆಳೆಸಿದರು. ಶ್ರೀ ಗಿರಿಮಲ್ಲಪ್ಪನವರು ಬಲು ಉದಾರರು. ಇಂಚಗಿರಿಯಲ್ಲಿಯ ಶ್ರೀ ಮಹಾರಾಜರೀರ್ವರ ಸುಂದರವಾದ ಸಮಾಧಿಗಳೂ, ಅವುಗಳ ನಡುವಿನ ಭವ್ಯವಾದ ಸಭಾಮಂಟಪವೂ ಇವರ ಔದಾರ್ಯದ ಫಲವೇ ಸರಿ ! ಅದಕ್ಕಾಗಿ ಅವರು ಸುಮಾರು ೨೫ ಸಾವಿರ ರೂಪಾಯಿಗಳನ್ನು ವೆಚ್ಚ ಮಾಡಿದರು. ಅಗ ಅವರ ಸಾಂಪತ್ತಿಕ ಸ್ಥಿತಿಯು ಸರಿಯಾಗಿರದಿದ್ದರೂ ಅವರು ತಮ್ಮ ನಿಶ್ಚಯ ವನ್ನು ಕೊನೆಗಾಣಿಸಿಯೇ ಬಿಟ್ಟರು. ಇಂಥ ನಿಷ್ಠೆ ಔದಾರ್ಯಗಳು ಅವರವು. ವಾದುದು. ಆತ್ಮ-ಜ್ಞಾನ (0) ಕಾಡಸಿದ್ದರಿಂದ ಶ್ರೀ ನಿಂಬರಗಿ ಮಹಾರಾಜರವರೂ, ಮತ್ತು ಅವರಿಂದ ಶ್ರೀ ಭಾವೂಸಾಹೇಬ ಮಹಾರಾಜರವರೂ ಪಡೆದ ಆತ್ಮಜ್ಞಾನವು ಸನಾತನ ಹಿಂದಿನ ಮಹಾಮುನಿಗಳಾದ ಶ್ರೀವ್ಯಾಸ - ಶುಕ-ನಾರದರೂ, ಮೀನ- ಗೋರಕ್ಷಕರೂ, ಇತ್ತೀಚಿನ ಸತ್ಪುರುಷರಾದ ನಿವೃತ್ತಿ-ಜ್ಞಾನದೇವರೂ ನಾಮದೇವ - ತುಕಾರಾಮ - ಕಬೀರ -ರೈದಾಸಾದಿ ಸಂತರೂ, ಪುರಂದರ- ಕನಕಾದಿ ದಾಸರೂ, ಪ್ರಭುದೇವ-ಅಖಂಡೇಶ್ವರಾದಿ ಶರಣರೂ, ಈ ಆತ್ಮ ಜ್ಞಾನವನ್ನೆಯೆ ತಮ್ಮ ಗುರಿಯನ್ನಾಗಿ ಮಾಡಿಕೊಂಡಿದ್ದರು. ಇನ್ನು ಈ ಆತ್ಮಜ್ಞಾನವೆಂದರೇನೆಂಬುದನ್ನು ಅರಿತುಕೊಳ್ಳುವಾ ! ಆತ್ಮಜ್ಞಾನವೆಂದರೆ ತನ್ನನ್ನು ತಾನು ಕಾಣುವದು. ಶ್ರೀಸಮರ್ಥ ರಾಮದಾಸ ಸ್ವಾಮಿಗಳು :- ಪಹಾವೇ ಆಪಣಾಸಿ ಆಪಣ | ಯಾ ನಾವ ಜ್ಞಾನ ||