ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಭಾವೂಸಾಹೇಬ ಮಹಾರಾಜರವರು ೪೧

  • ತನ್ನನ್ನು ತಾನು ಕಾಣುವದೇ ಜ್ಞಾನ' ಎಂದು ಹೇಳಿರುವರು.

ಶ್ರೀಮದ್ ಭಗವದ್ಗೀತೆಯಲ್ಲಿಯೂ ರಾಜಯೋಗದ ಫಲವು ಆತ್ಮದರ್ಶನವು. ಎಂದು ಹೇಳಲಾಗಿದೆ. ಅದರಲ್ಲಿ ಮತ್ತೂ ಹೇಳಿದ್ದೇನಂದರೆ - " ಯತೋಪರಮತೆ ಚಿತ್ರಂ ನಿರುದ್ಧಂ ಯೋಗಸೇವಯಾ । ಯತ್ರ ಚೈನಾತ್ಮನಾತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ || ೧ || ಸುಖಮಾತ್ಯಂತಿಕಂ ಯತ್ತತ್- ಬುದ್ಧಿ ಗ್ರಾಹ್ಯ ಮತೀಂದ್ರಿಯಮ್ | ವೇತ್ತಿ ಯತ್ರ ನ ಚೈವಾಯಂ ಸ್ಮಿತಶ್ಚಲತಿ ತತ್ವತಃ || ೨ || ಭ. ಗೀ, ಅಧ್ಯಾಯ ೩ ಆತ್ಮದರ್ಶನವಾದ ಮೇಲೆ ಅತೀಂದ್ರಿಯವಾದರೂ, ಬುದ್ಧಿ ಗ್ರಾಹ್ಯವಾದ ಸುಖವು ಉಂಟಾಗುವದು, ಮತ್ತು ಆ ಸುಖವನ್ನು ಅನುಭವಿಸುತ್ತಿರಲು, ಆಸನದಿಂದ ಅಲ್ಲಾಡಬಾರದೆಂದೆನಿಸುವದು. -ಎಂಬುದು ಮೇಲಿನ ಗೀತಾ. ವಚನದ ಸಾರವು. ಉಪನಿಷತ್ತಿನಲ್ಲಿಯೂ ಪರಂಜ್ಯೋತಿರುಪ ಸಂಪದ್ಯ- ಸೈನ ರೂಪೇಣ ಅಭಿನಿಷ್ಪ ದ್ಯತೆ- ಸೋಽಯಮಾತ್ಮಾ || ಎಂಬ ವಚನವುಂಟು. ಪತಂಜಲಿಯು ಯೋಗದ ಫಲವನ್ನು ತದಾ ದೃಷ್ಟು : ಸ್ವರೂಪೇಽವಸ್ಥಾನಮ್ | - ಎಂದೇ ಹೇಳಿರುವನು. ಶ್ರುತಿ-ಸ್ಕೃತಿ- ಪುರಾಣಗಳು ಸಾರುವ ಆತ್ಮ, ಜ್ಞಾನವು ಸದ್ಗುರುಗಳೆಗೆ ಶರಣು ಹೋದರೇನೇ ಅನುಭವಿಸಲು ಬರುವದು.

  • ಸತ್ವದ ಬೆಳದಿಂಗಳು' : ಕಣ್ಣಿನಲ್ಲಿಯ ಕಣ್ಣು ' - ಗ್ರಂಥ ಓದಹೋಗಲು

6