ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

85 ಪ್ರಸ್ತಾ ನನ ಮಾತೃಕೆಗಳಲ್ಲಿದೆ' : ಕಣ್ಣಿನಿಂದಲಿ ನೋಡಿ ಕೈವಲ್ಯವ : ಸೂರ್ಯನಿಲ್ಲದ ಸುಪ್ರಕಾಶ' ( ಚಂದ್ರನಿಲ್ಲದ ಬೆಳದಿಂಗಳು' ಇತ್ಯಾದಿ ವಾಕ್ಯಗಳ ಬೋಧವು ಗುರುಕೃಪೆಯ ಹೊರತು ಸಾಧ್ಯವಿಲ್ಲ. ಎಲ್ಲ ಸಾಧುಸಂತರು ಆತ್ಮಜ್ಞಾನ ವನ್ನು ಪಡೆಯಲು ರಾಜಯೋಗ-ಭಕ್ತಿಯೋಗಗಳ ಮಧುರ-ಮೀಲನವನ್ನು ಮಾಡಿರುವರು. ಆತ್ಮಜ್ಞಾನವು ಆದಮೇಲೆ ದೇವ-ಭಕ್ತರಲ್ಲಿಯ ಭೇದವು ಅಳಿಯುವದು. ಎಲ್ಲ ಭೂತಮಾತ್ರದಲ್ಲಿ ಭಗವಂತನು ಕಾಣತೊಡಗು ವನು. ಮೊದಲು ಆತ್ಮದರ್ಶನವಾಗಿ ತರುವಾಯ ಅಭೇದ-ಬುದ್ಧಿಯು ಜನಿಸುವ ಬಗೆಯನ್ನು ಶ್ರೀ ಜ್ಞಾನೇಶ್ವರರು ಕೆಳಗಿನ ಓವಿಗಳಲ್ಲಿ ಚೆನ್ನಾಗಿ ನಿರೂಪಿಸಿರುವರು- ನುಸರೇ ಮುಖ ಜೈಸೇ ದರ್ಪಣೀ ದೇಖಿಜಿತಸೇ ದರ್ಶನಮಿಸೇ || ವಾಯಾಚಿ ದೇಖಣೇ ಐಸ್‌-ಗವಲಾಗೇ || ೧ || ಜ್ಞಾನದೇವ ಚಕ್ರಪಾಣೀ ಐಸೇ- ದೋ ಡೊಳಸ್ ಆರನೇ ಪರಸ್ಪರೇ ಪಾಹತಾ ತೈಸೇ ಮುಕಲೇ ಭೇದಾ || ೨ || ( ಚಾಂಗದೇವ ಪಾಸಷ್ಟಿ ) ( ಬರಿ ಮುಖವು ತನ್ನನ್ನು ಕಾಣಲು ಕನ್ನಡಿಯಲ್ಲಿ ನೋಡುತ್ತಿರಲು, ನೋಡುವದೇ ವ್ಯರ್ಥವಾದುದೆಂದು ಎನಿಸತೊಡಗುವದು. ಅದೇಮೇರೆಗೆ ಜ್ಞಾನದೇವ ಚಕ್ರಪಾಣಿಗಳೆಂಬ ಕಣ್ಣುಳ್ಳ ಕನ್ನಡಿಗಳು ಪರಸ್ಪರರ ಬಿಂಬವನ್ನು ಪರಸ್ಪರರಲ್ಲಿ ನೋಡುತ್ತಿರಲು, ಭೇದಭಾವನೆಯನ್ನೆ ಬಿಟ್ಟರು. ಮರೆತು ಮೇಲ್ಕಾಣಿಸಿದ ಅನುಭಾವವನ್ನು ಪಡೆದ ಸಾಧುಗಳು ಅದೆಂಥ ಧನ್ಯರು ! ಮೇಲಿನ ಎರಡು ಓವಿಗಳಲ್ಲಿ ಜ್ಞಾನದೇವರು ಎಲ್ಲ ವೇದ-ಶಾಸ್ತ್ರ- ಪುರಾಣಗಳ ಸಾರವನ್ನು ಸ್ವಲ್ಪದರಲ್ಲಿ ಹೇಳಿರುವರು, ಇದರ ಅನುಭಾವಕ್ಕಾಗಿ