ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಭಾವೂಸಾಹೇಬ ಮಹಾರಾಜರನರು ೪೩ ಮೊದಲು ಗುರುಕೃಪೆ, ತರುವಾಯ ಶ್ರವಣ-ಮನನ ಹಾಗು ಅಭ್ಯಾಸ ಈ ಸಾಧನವು ಅತ್ಯವಶ್ಯ. ಅನಂತರ ವಿವೇಕ-ವೈರಾಗ್ಯಗಳು ಜನಿಸಿ, ಸಾಧಕನು ಆತ್ಮದರ್ಶನವನ್ನು ಪಡೆಯಲು ಅರ್ಹನಾಗುವನು. ಆತ್ಮದರ್ಶನವಾದ ಮೇಲೆ ಹೃದಯಗ್ರಂಥಿಯು ಬಿಚ್ಚಿ, ಸಂದೇಹಗಳೆಲ್ಲ ಮಾಯವಾಗಿ, ನೈಷ್ಕರ್ತ್ಯ- ಸಿದ್ದಿಯು ದೊರೆಯುವದು. ಮತ್ತು ದೇವಭಕ್ತರಲ್ಲಿಯ ಭೇದ-ಬುದ್ಧಿಯು ಅಳಿಯುವದು. ಸಾಧಕರು ದೈತದಿಂದ ಅದೈತವನ್ನೂ, ಆಕಾರದಿಂದ ನಿರಾಕಾರವನ್ನೂ, ಸ್ವರೂಪಸ್ಥಿತಿಯಿಂದ ಬ್ರಹ್ಮಸ್ಥಿತಿಯನ್ನೂ ಸಹಜವಾಗಿ ಪಡೆಯುವರು. (9) ಶ್ರೀ ಭಾವೂಸಾಹೇಬ ಮಹಾರಾಜರವರು ತಮ್ಮ ಪಂಥದಲ್ಲಿ ಪ್ರಚುರ ಗೊಳಿಸಿದ ಭಜನ-ಸಂಗ್ರಹದಲ್ಲಿಯೂ ಆತ್ಮಜ್ಞಾನ- ಪಥದ ವಿಚಾರವು ಕೆಲ ಮಟ್ಟಿಗೆ ಒಡಮೂಡಿರುವದು. ಅದರ ಸ್ವರೂಪವನ್ನು ಅರಿಯ ಬಯಸುವವರ ಅವರ - ನಿತ್ಯ-ನೇಮಾವಲಿ' ಎಂಬ ಪ್ರಕಟನೆಯಲ್ಲಿ ಅದನ್ನು ಕಾಣ. ಬಹುದು. ಆದರೂ ಅದರಲ್ಲಿಯ ಮುಖ್ಯ ಸ್ಥಲಗಳನ್ನು ಕಾಣಿಸಿಕೊಟ್ಟರೆ ಓದುಗರಿಗೆ ತುಂಬ ಲಾಭವಾಗಬಹುದೆಂದು ಬಗೆದು ಅವನ್ನು ಕೆಳಗೆ ಸಂಗ್ರಹ ನಾಗಿ ನಿರ್ದೆಶಿಸಿರುವೆವು. • ನೇಮಾವಲಿ ' ಯ ಪುಟಗಳನ್ನು ಕಂಸದಲ್ಲಿ ಕೊಡಲಾಗಿದೆ. C ಸದ್ಗುರುಗಳ ಉಪದೇಶದ ಮೇರೆಗೆ ಅನುಭವವು ಬರತೊಡಗಿತೆಂದರೆ, ಗುರುಚರಣಗಳ ಬಳಿಯಲ್ಲಿ ನಿಲ್ಲುವ ಅಭಿಲಾಷೆಯು ಬೆಳೆಯುವದು (ಪು. ೧೭) ಅಲಕ್ಷದಲ್ಲಿ ಲಕ್ಷವಿಡಲು, ನಿಜವಸ್ತುವು ಪ್ರತ್ಯಕ್ಷವಾಗುವದು. ಸಂತರಿಗೆ ಪ್ರಮಾಣಭೂತವಾದ ಆತ್ಮಜ್ಯೋತಿಯು ಹೊಳೆಯುವದು. ಮಾತ್ರ ಪ್ರತಿ ಕ್ಷಣವನ್ನು ಚೆನ್ನಾಗಿ ವಿನಿಯೋಗಿಸಿ, ಕಾಲವನ್ನು ಸಾರ್ಥಕಗೊಳಿಸಬೇಕು. (೧೭-೧೯) ಅಹಂಕಾರದ ಕುದುರೆಯನ್ನೇರಿ, ಅದನ್ನು ಅಂಕೆಯಲ್ಲಿ ಇರಿಸಿದರೆ, ಅನಾಹತದ ವಿಜಯ ದುಂದುಭಿಗಳು ಮೊಳಗುವವು ಮತ್ತು ಸರ್ವತ್ರ ತದೀಕ್ಷಣ ರೂಪದ ಏಕಾಂತಭಕ್ತಿಯು ಉದ್ಭವಿಸುವದು. (೨೦-೨೧) '