ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ಗುರುಗಳ ಉಪಕಾರವನ್ನು ಮರಳಿಸುವದು ಅವರ ಋಣವನ್ನು ತೀರಿಸು ವದು- ಎಂದೂ ಶಕ್ಯವಿಲ್ಲ. (೨೨-೨೩ ) ತ್ರಿವೇಣಿಯ ಸಂಗಮದಲ್ಲಿ ಪ್ರತಿನಿತ್ಯ ಸ್ನಾನವನ್ನು ಮಾಡಿ, ಆತ್ಮಾರಾಮನ ದರ್ಶನವನ್ನು ಪಡೆದರೆ

  • ಕರ್ಮಣಿ ಅಕರ್ಮವೂ ' ( ಅಕರ್ಮಣಿ ಕರ್ಮವೂ' ಸಹಜವಾಗಿ ಸಾಧ್ಯ

ವಾಗುವದು. (೨೩-೨೪) ದೇಹವೇ ನಿಜವಾದ ಪಂಢರಿಯು ; ಆತ್ಮನೇ ನಿಜವಾದ ವಿಠಲನು. (೨೫) ನಿಗುಣ್ಯವನ್ನು ಪಡೆಯಲು ಮೊದಲು ಸತ್ವದ ಸಾಮರ್ಥ್ಯವು ಹುಟ್ಟಬೇಕು. ( ಸನಾನ್ಯತಮಂ ಹನ್ಯಾತ್ | ಸತ್ವಂ ಸನ ಚೈವ ಹಿ| (೨೯) ತನ್ನನ್ನು ತಾನು ಯಾರಾದರೂ ಉದ್ಧರಿಸ ಬದುದು. ಆದರೆ ಅನ್ಯರನ್ನು ಉದ್ಧರಿಸಿದವನೇ ನಿಜವಾದ ಸಾಧುವು. ( ೨೯-೩೦ ) ಗಂಗಾಜಲದಂತೆ ತನ್ನ ಮನಸ್ಸು ವಿಮಲವಾಯಿತೆಂದರೆ ಭಗವಂತನು ಬಳಿಯಲ್ಲಿಯೆ ನಿಲ್ಲುವನು. ಇಂಥ ಪುರುಷರಿಗೆ ಶ್ರುತಿಸಮ್ಮತ ವಾದ ಅಂಗುಷ್ಟ ಪ್ರಮಾಣದ ರೂಪವು ಕಾಣುವದು. ಅನುಭಾವಿಗಷ್ಟೇ ಇದರ ಕುರುಹು ತಿಳಿಯುವದು. ಮಿಕ್ಕವರು ಏನನ್ನೂ ಅರಿಯದೆ ಮಂಕು ಬಡಿದವರಂತೆ ಬರಿ ಮಿಕಿ ಮಿಕಿ ನೋಡತೊಡಗುವರು. (೯೧) ಆತ್ಮರೂಪವು ಜ್ಞಾನಚಕ್ಷುವಿಗೆ ಕಾಣುವ ನೋಟವು. ಚರ್ಮ-ಚಕ್ಷುವು ಅದನ್ನು ಕಾಣಲರಿ ಯದು. ಸತ್ಸಂಗದಿಂದ ಪ್ರಾರಬ್ದ ರೇಷೆಯು ಮೂಡುವದು. ಮತ್ತು ಶ್ರೀಹರಿಯ ಗುಣ, ನಾನು ಘೋಷವನ್ನು ಮಾಡುತ್ತಲಿದ್ದರೆ, ಪಾತಕಗಳೆಲ್ಲ ಸುಟ್ಟು ಹೋಗುವವು. (೩೨) ದೇಹಭಾವವು ಮಾಯವಾಗದೆ, ವಸ್ತುವು ದೊರೆಯುವದಿಲ್ಲ. (೩೨) ಸಾಧಕರು ಕಲ್ಪನೆಯ ಅಡವಿಯನ್ನು ಸೇರದೆ - ತಾವು ತಮ್ಮನ್ನೆಯೆ ಕಂಡುಕೊಂಡು ಸ್ವಾನಂದದಲ್ಲಿ ಮುಳುಗಬೇಕು. (೩೨) ಎಲ್ಲ ಪ್ರಾಣಿಗಳ ಮೇಲೆ ದಯೆದೋರುವದೇ ಆತ್ಮಜ್ಞಾನದ ಪ್ರಥಮ ಸಾಧನವು. ( ೩೩ ) ಅಂತರಂಗದಲ್ಲಿ ಸಾಗರದ ಶಾಂತಿಯು ಜನಿಸಿದ್ದ ಸಾಧುಗಳು ಪೃಥಿವಿಯ ಮೇಲೆ ಜಡ-ಮೂಢ ಪಿಶಾಚಿಗಳಂತೆ ಅಲೆದಾಡುವರು. ಅವರು ಜನರಿಗೆ ಮೂರ್ಖರಂತೆ ಕಾಣುವರು. ಆದರೆ ಅವರು ಮುಳುಗಿರುವದು ಬ್ರಹ್ಮಾನಂದದಲ್ಲಿ, ಅವರ ವರ್ಮವು ಯೋಗಿಗಳಲ್ಲದವರಿಗೆ ತಿಳಿಯುವದಿಲ್ಲ. (೩೪-೩೫) ಲವಣವು ಸಾಗರದಲ್ಲಿ ಬೆರೆತು ತದಾಕಾರವಾಗುವಂತೆ, ಸಾಧು ಗಳು ಬ್ರಹ್ಮನಲ್ಲಿ ಬೆರೆತ ಮೂಲಕ ಅವರ ನಾಮ ರೂಪಗಳು ಲಯವಾಗುವವು.