ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಭಾವೂಸಾಹೇಬ ನುಹಾರಾಜರವರು (೩೩) ಸಾಧನವು ಮುಂದುವರಿದ ಮೇರೆಗೆ ಸದ್ಭಕ್ತಿಯು ಹುಟ್ಟಿ, ಅದರಿಂದ ಸಾಕ್ಷಾತ್ಕಾರವಾಗುವದು. (೩೭) ಅಡಿಗಡಿಗೆ ಶ್ರೀಮುಖವನ್ನು ಕಂಡ ಮೇಲೆ ಮುಂದೆ ದೇವರ ಪಾದಗಳ ಸಾಕ್ಷಾತ್ ದರ್ಶನವಾಗುವದು. (೩೮) ಶ್ರೀವಿಠಲನು ಹೇಳುವದೇನಂದರೆ, "ಎಲೈ ತುಕಾರಾಮನೇ ನಿನ್ನ ಅಭಂಗ ಗಳನ್ನು ಪ್ರೀತಿಯಿಂದ ಪಠಿಸುವವರ ಆಪತ್ತನ್ನು ನಾನು ಸ್ವತಃ ಅಲ್ಲಗಳೆ ಯುವೆ.' (೩೯) ಯಾವ ಗುರುಗಳ ಹತ್ತಿರ ನಿರಂತರವಾಗಿ ದೇವನಿರುವನೋ ಅವರ ಅಡಿಗಳನ್ನು ದೃಢವಾಗಿ ಸಿಡಿದರೆ, ತಮಗೆ ದೇವರು ದೊರೆಯುವನು. (೪೦) ಎಡಕ್ಕೆ ಬಲಕ್ಕೆ, ಕೆಳಗೆ ಮೇಲೆ, ಒಳಗೆ ಹೊರಗೆ, ಸರ್ವತ್ರ ದೇವರ ದರ್ಶನವಾಗುವದು (೪೦) ಅದಾದ ಕೂಡಲೆ, ಆನಂದದಿಂದ ಮೂರೂ ಲೋಕಗಳು ತುಂಬಿ ತುಳಕುವವು. (ಪು. ೧೦) ದೇಹದಲ್ಲಿಯ ದೇವರನ್ನು ಕಂಡು ನಿರ್ಗುಣದ ಜ್ಯೋತಿಯಿಂದ ಆತನನ್ನು ಬೆಳಗಬೇಕು. ಚಂದ್ರ ಸೂರ್ಯರು ಅಲ್ಲಿ ದೀಪದ ಕೆಲಸವನ್ನು ಮಾಡುತ್ತಾರೆ. ಪಾಂಡುರಂಗನ ಆರತಿಯ ಕಾಲಕ್ಕೆ ಮಹಾದ್ವಾರದಲ್ಲಿ ಸಿಂಹಶಂಖನಾದವು ಭೇರಿಯ ಗರ್ಜನೆಯೂ ಆಗತೊಡಗುವದು. ( ಪು. ೩) ಅಂತರಂಗದಲ್ಲಿ ಆರತಿಯು ನಡೆದಿರಲು, ಆ ಬೆಳಕಿನಲ್ಲಿ ರವಿಶಶಿಗಳು ಮಾಯವಾಗುವವು. ಮತ್ತು ಅನಾಹತದ ವಾದ್ಯಗಳು ನಿನದಿಸುವವು. ಆನಂದ ಸಾಗರದಲ್ಲಿ ಮುಳುಗಿದ ಮೇಲೆ ಪ್ರಾಪ್ತವಾದ ಅವಸ್ಥೆಯನ್ನು ಮಾತಿನಿಂದ ಬಣ್ಣಿಸುವದು ಸಾಧ್ಯವಿಲ್ಲ. ಇಲ್ಲವೆ ಮನಸ್ಸಿನಿಂದ ಅರಿಯಲೂ ಬರುವದಿಲ್ಲ. ( ಪು. ೫). - ಬೋಧ- ಸಾರ ಶ್ರೀ ಮಹಾರಾಜರವರ ಬೋಧ-ಸುಧೆ ' ಯು ನೀತಿಶಾಸ್ತ್ರವನ್ನೂ ಅನುಭಾವಶಾಸ್ತ್ರವನ್ನೂ ಕುರಿತು ಬರೆಯಲಾದ ಗ್ರಂಥವು. ಅದು ಗಾತ್ರದಲ್ಲಿ ಚಿಕ್ಕದಾದರೂ, ಗುಣದಲ್ಲಿ ಮೇರಗತಿಯದು. ಅದರಲ್ಲಿ (೧) ನಡತೆಯ ಮೂಲ ತತ್ವಗಳು, (೨) ದುರ್ಗುಣ ತ್ಯಾಗ, (೩) ಸದ್ಗುಣ-ಸಂಪಾದನ ಹಾಗೂ (೪) ಪರಮಾರ್ಥ-ಮಾರ್ಗ ಎಂಬ ನಾಲ್ಕು ವಿಭಾಗಗಳಿರುವವು.