ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಪ್ರಸ್ತಾವನೆ ಮೊದಲನೆಯ ಭಾಗದಲ್ಲಿ, ಮನುಜನ ನಡತೆಯ ಬಲವು ದೇವರ ಬಲಕ್ಕಿಂತ ಮಿಗಿಲಾದುದು ಎಂಬ ಮೂಲ ತತ್ವವನ್ನು ಹೇಳಿ (ಕ್ರ. ೩) ಬೀಜದಂತೆ ಬೆಳೆಯು ಬರುವದರಿಂದ, ತಮ್ಮ ಒಳಿತು ಕೆಡಕು ನಡತೆಯ ಮೇರೆಗೆ ತಮಗೆ ಒಳಿತು ಕೆಡಕು ಫಲವು ದೊರೆಯುವದು ಎಂಬ ಸರಲ ಸಿದ್ಧಾಂತವನ್ನು ಉಸುರಲಾಗಿದೆ. (ಕ್ರ. ೪) ಈ ರೀತಿ ತಮ್ಮ ನಡತೆಯ ತಮ್ಮ ಸುಖದುಃಖಗಳಿಗೆ ಕಾರಣವಿರುವ ಮೂಲಕ, ತಾವು ಹೆಜ್ಜೆ ಹೆಜ್ಜೆಗೆ ತನ್ನ ನಡತೆಯನ್ನು ಪರೀಕ್ಷಿಸುತ್ತಿರಬೇಕೆಂದು ಸೂಚಿಸಲಾಗಿದೆ. (ಕ್ರ. ೫) ಮುಂದೆ ಒಳ್ಳೆಯ ನಡತೆಯನ್ನೂ ಕೆಡಕು ನಡತೆಯನ್ನೂ ಅರಿಯಲು, ಹಿಂದಿನ ಸಂತರ ನುಡಿಯನ್ನು ಪ್ರಮಾಣವೆಂದು ಭಾವಿಸಬೇಕು ಮತ್ತು ಅವರ ನಡತೆ ಯನ್ನು ಅನುಕರಿಸಬೇಕು ಎಂದು ಹೇಳಲಾಗಿದೆ. (ಕ್ರ. ೭). ನಡತೆಯನ್ನು ಚೆನ್ನಾಗಿರಿಸಲು, ಮೊದಲು ದುರ್ಗುಣಗಳನ್ನು ಬಿಡಲು, ಬೇಕು. ಆದುದರಿಂದ ಎರಡನೆಯ ಭಾಗದಲ್ಲಿ, ಸ್ವಾಭಾವಿಕವಾಗಿಯೆ ದುರ್ಗುಣಗಳಾವವು, ಅವನ್ನು ಬಿಡುವದೆಂತು, ದುರಾಚರಣದ ಕೆಟ್ಟ ಪರಿಣಾಮಗಳಾವವು, ಎಂಬುದನ್ನು ವಿವರಿಸಲಾಗಿದೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಷಡ್ರಿಸುಗಳಾದ ಪ್ರಧಾನ ದುರ್ಗುಣ ಗಳನ್ನೂ, ತರುವಾಯ ಕಪಟ, ಅನ್ಯಾಯ, ಅಲಸಿಕೆ, ಇತ್ಯಾದಿಗಳನ್ನೂ ವಿವರಿಸಿ, ಅವೆಲ್ಲವುಗಳನ್ನು ತ್ಯಜಿಸಲು ಉಪದೇಶಿಸಲಾಗಿದೆ. ಕೆಟ್ಟ ರೀತಿ ಯಿಂದ ನಡೆದರೆ, ಪಾಪದ ಪ್ರಮಾಣದಿಂದ ಶಿಕ್ಷೆಯಾಗುವದು ತಪ್ಪದು- ಎಂದು ಎಚ್ಚರಿಸಲಾಗಿ ಮುಂದೆ ಆಧಿಭೌತಿಕ, ಆಧ್ಯಾತ್ಮಿಕ ಹಾಗೂ ಆಧಿದೈವಿಕ ಎಂಬ ಶಿಕ್ಷೆಯ ಮೂರು ಬಗೆಗಳನ್ನೂ ಅರುಹಲಾಗಿದೆ. ಅಲಸಿಕೆಯು ಮುಖ್ಯ ಶತ್ರುವು. ಅವನು ಪ್ರಪಂಚ-ಪರಮಾತ್ಮಗಳೆರಡನ್ನೂ ಹಾಳುಮಾಡುವ ಆತನಿಗೆ ತನ್ನಲ್ಲಿ ಎಡೆಯನ್ನು ಕೊಡಬಾರದು ಎಂದೂ ಸೂಚಿಸಲಾಗಿದೆ. ಕೊನೆಗೆ, 1 ಚಿಂತೆಯು ಬಲು ಕೆಟ್ಟದು. ಅದರ ಬೆಳೆಯು ಬಲು ಹುಲಸಾಗಿ ಬೆಳೆಯುವದು. ಆದುದರಿಂದ, ( ಎಲ್ಲವೂ ಈಶ್ವರಾಧೀನವಿದೆ. ಸುಮ್ಮನೆ ಚಿಂತೆಯನ್ನು ಮಾಡಿ ಫಲವೇನು ? ' ಎಂದು ಮನಸ್ಸಿಗೆ ಬೋಧಿಸಿ, ಕೇವಲ ಪರಮಾತ್ಮನ ಚಿಂತೆಯನ್ನೆಯೆ ಮಾಡಬೇಕು. ಅವನೇ ಎಲ್ಲವನ್ನು ಕೊಡಲು