ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
  • ಭಾವೂಸಾಹೇಬ ಮಹಾರಾಜರವರು

ಸಮರ್ಥನು ಎಂದು ಒಳ್ಳೆಯ ಕಳಕಳಿಯ ಬೋಧೆಯನ್ನರುಹಿ, ಓದುಗರನ್ನು ಸದ್ಗುಣ-ಸಂಪಾದನದ ದಾರಿಯ ಮೇಲೆ ತಂದಿರಿಸಲಾಗಿದೆ. ದುರ್ಗುಣ- ತ್ಯಾಗವು ನಡತೆಯ ಅಭಾವಾತ್ಮಕ (Negative) ಮಗ. ಲಾದರೆ, ಸದ್ಗುಣ-ಸಂಪಾದನವು ಅದರ ಭಾವಾತ್ಮಕ ( Positive) ಮಗ್ಗಲು, ಆದುದರಿಂದ, ಮುಂದಿನ ಮೂರನೆಯ ಭಾಗದಲ್ಲಿ ಮುಖ್ಯ ಸದ್ಗುಣಗಳಾ ವವು, ಅವುಗಳ ಮಹತ್ವವೇನು, ಮತ್ತು ಅವನ್ನು ನಡತೆಯಲ್ಲಿ ಇಳಿಸುವ ದೆಂತು ಎಂಬುದನ್ನು ವಿವರಿಸಲಾಗಿದೆ. ವಿವೇಕ, ಸದ್ಭುದ್ಧಿ, ಇಂದ್ರಿಯ ನಿಗ್ರಹ, ಅಪರಿಗ್ರಹ, ಸಹಿಷ್ಣುತೆ, ಅಹಿಂಸೆ, ಸತ್ಯ, ಎಲ್ಲ ಭೂತಗಳಲ್ಲಿ ಆತ್ಮಭಾವ, ಪರೋಪಕಾರ, ದಯೆ, ಸಮಾಧಾನ, ಕರ್ತವ್ಯನಿಷ್ಠೆ, ಇತ್ಯಾದಿ ಎಲ್ಲ ಮಹತ್ವದ ' ಸದ್ಗುಣಗಳನ್ನು ಆಚರಣೆಯಲ್ಲಿ ತರಬೇಕು ಎಂದು ಹೇಳಲಾಗಿದೆ. ಪ್ರಪಂಚದಲ್ಲಿ ಕೂಲಿಯವನಂತೆ ನಡೆಯಬೇಕು. ಆದರೆ ಲಕ್ಷವನ್ನೆಲ್ಲ ಪರಮಾರ್ಥದೆಡೆಗೆ ಹೊರಳಿಸಬೇಕು. ಮಕ್ಕಳು ದೊಡ್ಡವರಾದ ಮೇಲೆ, ಪ್ರಪಂಚವನ್ನು ಅವರಿಗೆ ಒಪ್ಪಿಸಿ ಮರಳಿ ಅದರೆಡೆಗೆ ಕಣ್ಣೆತ್ತಿ ನೋಡಬಾರದು. ತಾವು ಪರಮಾರ್ಥದಲ್ಲಿ ಮುಳುಗಿರಬೇಕು. ಅರಿಷಡ್ವರ್ಗ ದೊಡನೆ ಹೋರಾಡಿ, ಸದ್ಗುಣಗಳನ್ನು ಸಂಗ್ರಹಿಸಿ, ಪರಮಾತ್ಮನ ಪ್ರೀತಿ ಯನ್ನು ಪಡೆದು, “ ಸ್ವರಾಜ್ಯವನ್ನು' ಅಂದರೆ ಆತ್ಮನ ಅಳಿಯದ ಆನಂದವನ್ನು ದೊರಕಿಸಬೇಕು ಎಂಬ ಜೀವನದ ಧೈಯವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಪರಮಾರ್ಥ-ಮಾರ್ಗವೆಂಬ ನಾಲ್ಕನೆಯ ಭಾಗದಲ್ಲಿ, ಪರಮಾರ್ಥವನ್ನು ನಡೆಯಿಸುವ ರೀತಿಯನ್ನು ಅರುಹಲಾಗಿದೆ. 'ಸಂಸಾರವು ಕ್ಷಣಭಂಗುರವೂ ದುಃಖಮಯವೂ ಇದ್ದುದರಿಂದ, ಅದರಿಂದ ಬಿಡುಗಡೆಯಾಗಲು, ದುರ್ಗುಣ- ತ್ಯಾಗವನ್ನೂ ಸದ್ಗುಣ- ಸಂಪಾದನವನ್ನೂ ಮಾಡಿ, ಗುಪ್ತ ರೂಪದಲ್ಲಿ, ಅಂದರೆ ಪರಮಾತ್ಮನಲ್ಲಿ, ಐಕ್ಯ ಹೊಂದಿದ ಸದ್ಗುರುಗಳಿಗೆ ಶರಣು ಹೋಗಬೇಕು. ಮತ್ತು ಅವರಿಂದ ಅನುಗ್ರಹವನ್ನು ಪಡೆದು, ಸದೈವ ಪರಮಾತ್ಮನ ಧ್ಯಾನದಲ್ಲಿ ತೊಡಗಿರಬೇಕು. - ಕರ ಸೇ ಕಾಮ ಕರೋ ಹರಿ ಸ ಧ್ಯಾನ ಧರೋ !' ಕೈಯಿಂದ ಕೆಲಸವನ್ನೂ ಮನಸ್ಸಿನಿಂದ ಧ್ಯಾನವನ್ನೂ ಮಾಡುತ್ತಿರಬೇಕು. ಸಂಸಾರದಲ್ಲಿ ಉದಾಸೀನರಾಗಿಯೂ, ಪರಮಾರ್ಥದಲ್ಲಿ ಉಲ್ಲಸಿತರಾಗಿಯೂ ಇರಬೇಕು. ನಾಮಸ್ಮರಣೆಯನ್ನು ಅಖಂಡವಾಗಿ ನಡೆಯಿಸಿತೆಂದರೆ ಸ್ವರೂಪದಲ್ಲಿ ಸ್ಥಿರತೆ