ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ಯುಂಟಾಗಿ, ಸ್ವಸ್ಥತೆಯು ಲಭಿಸುವದು. ಪರಮಾರ್ಥದ ಬೆಳವಣಿಗೆಗಾಗಿ ಸತ್ಸಂಗವು ಅತ್ಯವಶ್ಯವು. ಸತ್ಪುರುಷರ ಸಂಗತಿಯಂತೆ, ನಾಮದ ಹಾಗೂ ಸದ್ವಸ್ತುವಿನ ಸಂಗತಿಯೂ ಸತ್ಸಂಗತಿಯೇ. ಸಂಕಟಗಳು ಬಂದಾಗಲೂ ಪರಮಾತ್ಮನಲ್ಲಿಯ ಶ್ರದ್ಧೆಯನ್ನು ಅಳಿಯಗೊಡದೆ, ಭಕ್ತಿಯನ್ನು ಅಂತಃ ಕರಣಪೂರ್ವಕವಾಗಿ ಮಾಡುತ್ತಿರಬೇಕು. ಸಂಕಟಗಳನ್ನು ಒಡ್ಡಿ ಪರಮಾತ್ಮನು ನಮ್ಮನ್ನು ಪರೀಕ್ಷಿಸುವ, ಆದ್ದರಿಂದ ಅದರಲ್ಲಿ ಕೊನೆಗೆ ನಮ್ಮ ಕಲ್ಯಾಣವಿದೆ, ಎಂಬುದನ್ನು ದೃಢವಾಗಿ ನಂಬಬೇಕು. ಪರಮಾರ್ಥದಲ್ಲಿ ಅಲ್ಪ ಪ್ರಚೀತಿಯು ಬಂದರೂ ಕೂಡ, ಅದರಿಂದ ಜೀವನವು ಸಾರ್ಥಕವಾಗುವದು, ಎಂದು ಆಶ್ವಾಸನ ಕೊಟ್ಟು ಗ್ರಂಥವು ಕೊನೆಗೊಂಡಿದೆ. ಮೇಲ್ಕಾಣಿಸಿದ ವಿವರಣೆಯಿಂದ ಈ ಪುಸ್ತಕವು ಆಧುನಿಕ ನೀತಿ, ಮೀಮಾಂಸೆಯ, ಹಾಗು ಪರಮಾರ್ಥ-ಮೀಮಾಂಸೆಯ ದೃಷ್ಟಿಯಿಂದಲೇ ರಚಿಸಲಾಗಿದೆ ಎಂಬುದು ಸಹಜವಾಗಿ ತಿಳಿಯದಿರದು. ಪ್ರಪಂಚದಲ್ಲಿದ್ದು ಪರಮಾರ್ಥವನ್ನು ಸಾಧಿಸಬೇಕೆಂಬ ಮುಖ್ಯ ಧೈಯವನ್ನರುಹಿ, ಅದನ್ನು ಪಡೆಯಲು ಎಲ್ಲ ಸದ್ಗುಣಗಳು ಹೇಗೆ ಅವಶ್ಯವಾದವುಗಳೆಂಬುದನ್ನು ಅದರಲ್ಲಿ ಕಾಣಿಸಲಾಗಿದೆ. ಜ್ಞಾನ (Wisdom ), ಶ್ರದ್ಧೆ ( Faith ), ಸಮತೆ (Justice) ಇವುಗಳಲ್ಲಿಯ ಸದ್ಗುಣವೊಂದನ್ನು ಮೂಲವಿಟ್ಟು ಕೊಂಡು, ಅದರಿಂದ ಉಳಿದ ಸದ್ಗುಣಗಳನ್ನು ಹೊರಡಿಸುವದು ಕೆಲ ಪಾಶ್ಚಾತ್ಯ ನೀತಿಶಾಸ್ತ್ರಜ್ಞರು ಪ್ರಚುರ ಗೊಳಿಸಿದ ಪದ್ಧತಿಯು, ಇದೇ ಮೇರೆಗೆ ಭಕ್ತಿಯಿಂದ ಎಲ್ಲ ಸದ್ಗುಣಗಳು ದೊರೆಯುವವು ಎಂಬುದು ಈ ಗ್ರಂಥದ ಅಂತರ್ಗತ ಸಿದ್ಧಾಂತ. ಪದಗಳ ರಹಸ್ಯ ಶ್ರೀ ನಿಂಬರಗಿ ಮಹಾರಾಜರವರು ರಚಿಸಿದ ಹತ್ತು ಪದಗಳನ್ನು ಇಲ್ಲಿ ಮುದ್ರಿಸಲಾಗಿದೆ. ಅವನ್ನು ಶ್ರೀ ಮಹಾರಾಜರವರೇ ರಚಿಸಿರುವರು ಎಂಬುದ ರಲ್ಲಿ ಸಂದೇಹವಿಲ್ಲ. ಬೇರೆ ಕೆಲವು ಪದಗಳೂ ಅವರ ಅಂಕಿತವನ್ನು