ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಭಾವೂಸಾಹೇಬ ಮಹಾರಾಜರವರು ಗುರು-ಲಿಂಗ-ಜಂಗಮ ಎಂಬ ಹೆಸರನ್ನು ಒಳಗೊಂಡಿವೆ ನಿಜ. ಆದರೆ ಅವುಗಳಲ್ಲಿಯ ಕೆಲಭಾಗವು ಬೇರೆ ಕವಿಗಳ ಕೃತಿಯನ್ನು ಹೋಲುವದರಿಂದ ಅವೆಲ್ಲ ಮಹಾರಾಜರವೇ ಎಂದು ನಿಶ್ಚಿತವಾಗಿ ಹೇಳಲು ಬರುವಂತಿಲ್ಲ. ಆದುದರಿಂದ ಅವನ್ನೆಲ್ಲ ಇಲ್ಲಿ ಸೇರಿಸಲಾಗಿಲ್ಲ. ಇಲ್ಲಿ ಸೇರಿಸಲಾದ ಕೆಲ ಪದಗಳು ಅವರ ಜೀವನಕ್ಕೆ ಸಂಬಂಧಿಸಿದವುಗಳು. ಆ ಸಂಬಂಧವನ್ನೂ ಪದಗಳ ರಹಸ್ಯವನ್ನೂ ಮುಂದೆ ಕಾಣಿಸಲಾಗಿದೆ. ಪದ ೧ :-ಸದ್ಗುರುಗಳ ಚರಣಕಮಲದಲ್ಲಿ ಶೃಂಗನಾಗಿರಯ್ಯ ! ನರಜನ್ಮ ಸ್ಥಿರವಿಲ್ಲ. ಅದಕ್ಕಾಗಿ ಸಾಧುಗಳ ಸಂಗದಿಂದ ಪರತತ್ವವನ್ನು ತಿಳಿದುಕೊಳ್ಳು. ಮೌನವನ್ನು ಬಲಿಸಿ ನಾಸಾಗ್ರದಲ್ಲಿ ದೃಷ್ಟಿಯನ್ನು ನಿಲಿಸಿ, ಜ್ಞಾನಜ್ಯೋತಿಯಲ್ಲಿ ನಲಿನಲಿದಾಡಯ್ಯ ಆನಂದದಿಂದ! ಮುಪ್ಪಿನಮುನಿ ಗಳ ವಚನಗಳನ್ನು ಅಂತರಂಗದಲ್ಲಿರಿಸಿ ಶ್ರೀಕಾಡಸಿದ್ಧನೆಡೆಗೆ ಹೋಗಿ ಆತನಿಗೆ ಸಾಷ್ಟಾಂಗ ವಂದನೆಗಳನ್ನು ಸಲ್ಲಿಸಯ್ಯ ! ( ಈ ಪದದಲ್ಲಿಯ ( ಮುಪ್ಪಿನ ಮುನಿ' ಎಂಬುದು ಶ್ರೀಮಹಾರಾಜರನ ಸದ್ಗುರುಗಳ ಹೆಸರಿರುವ ಸಂಭವವಿದೆ. ಬೇರಾವ ಪದದಲ್ಲಿಯೂ ಅವರು ತಮ್ಮ ಸದ್ಗುರುಗಳ ಹೆಸರನ್ನು ಉಲ್ಲೇಖಿಸಿಲ್ಲ. ) - ಪದ ೨ ( ಶ್ರೀ ಮಹಾರಾಜರವರು, ಒಮ್ಮೆ ಬಾವಿಯೊಂದರಲ್ಲಿ ಸ್ನಾನ ಮಾಡಿ, ಮೇಲೆ ಬರುತ್ತಿರಲು, ಮೇಲಿನಿಂದ ಒಂದು ದೊಡ್ಡ ನಾಗರಹಾವು ಮೊತ್ಕರಿ ಸುತ್ತ ಆವರೆಡೆಗೆ ಬರುತ್ತಿರುವದನ್ನು ಅವರು ಕಂಡರು. ಮತ್ತು ಭಗವಂತನ ನಾಮ ವನ್ನು ಸ್ಮರಿಸಿದೊಡನೆ ಅದು ಇಲ್ಲದಂತಾಯಿತು ಎಂಬ ಸಂಗತಿಯನ್ನು ಈ ಮೊದಲು ಅರುಹಲಾಗಿದೆಯಷ್ಟೇ ! ಆ ಪ್ರಸಂಗದಲ್ಲಿ ಮಹಾರಾಜರವರು ಈ ಪದವನ್ನು ರಚಿಸಿರುವರು. ಅದರ ರಹಸ್ಯವು ಕೆಳಗಿನಂತೆ :-) ಸದ್ಗುರುಗಳು ಅನುಗ್ರಹಿಸಿದ ನಾಮವೇ ನಮ್ಮನ್ನು ಕಾಯುವದು. ನಾಮದ ಬಲವೇ ನಿಜವಾದ ಬಲವು ಪ್ರಹ್ಲಾದ, ದೌಪದಿ, ಗಜೇಂದ್ರ, ಧ್ರುವ, ಇತ್ಯಾದಿ ಭಕ್ತರನ್ನು ನಾಮವೇ ಕಾಯ್ದಿರುವದು. ಶ್ರೀಗುರು-ಲಿಂಗ- ಜಂಗಮರು ದಯಪಾಲಿಸಿದ ಈ ಘನಪುಣ್ಯನಾಮವೇ ಭವದ ಬಂಧನವನ್ನು ಬಿಡಿಸುವದು. 7