ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3:0 ಪ್ರಸ್ತಾವನೆ ಪದ ೩ :- ( ಕನಕನೆಂಬ ಜೇಡರ ಸಾಧುವು ಶ್ರೀಮಹಾರಾಜರವರನ್ನು ಅವಮಾನಗೊಳಿಸಿದ ಸಂಗತಿಯನ್ನು ಈ ಮೊದಲು ಹೇಳಿರುವೆನಷ್ಟೆ. ಆಗ ಈ ಸದದ ಮುಖಾಂತರವಾಗಿ ಮಹಾರಾಜರವರು ಪರಮಾತ್ಮನನ್ನು ಪ್ರಾರ್ಥಿಸಿದರು. ಇದರಲ್ಲಿ ನಿಂಬರಗಿ, ಭೀಮ, ಗುರು, ಲಿಂಗ-ಜಂಗಮ, ಇವು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರ ಸಾರವು ಕೆಳಗಿನಂತೆ :- ಶ್ರೀಬಲಭೀಮನೇ ! ನಾನು ಯಾವ ಬಗೆಯ ಅಪರಾಧವನ್ನು ಮಾಡ ದಿರಲು, ಈತನು ಬಿರುನುಡಿಗಳಿಂದ ನನ್ನನ್ನು ನೋಯಿಸಿದುದೇಕೆ ? ಶಬ್ದ ಶಸ್ತ್ರದಿಂದ ಹೊಡೆದುದೇಕೆ ? ಸ್ವಾಮಿ ! ದಾಸರ ದಾಸ ನಾನು ! ಸೋಸಿ ನ್ಯಾಯವ ಮಾಡು ಕರುಣದಿ ಎನ್ನನು ಕಾಯು. ನಿನ್ನ ಬಿರುದನ್ನು ನಿಜಗೊಳಿಸು. ಕರುಣಾಕರನೇ ! ಕಲ್ಲನ್ನು ಮರೆಗೊಳ್ಳದೆ, ಅದನ್ನೊಡೆದು ನರಸಿಂಹನಂತೆ ಪ್ರಕಟನಾಗು ! ಅಲ್ಲಮ ಪ್ರಭುವೇ ! ನಾನು ನಿನ್ನ ಸನ್ನಿಧಿ ಯಲ್ಲಿರುವೆ. ಶ್ರೀಗುರು-ಲಿಂಗ-ಜಂಗಮರ ಚಿನ್ಮಯ ಸ್ವರೂಪನಾದ ಭೀಮ ಯನೇ ನನ್ನ ತನು-ಮನ-ಧನಗಳನ್ನು ನಿನ್ನ ಚರಣಗಳಿಗೆ ಅರ್ಪಿಸಿರುವೆ ಯ್ಯ ನಾನು ! ಪದ ೪ : ಈ ವರೆಗೆ ನಾಲ್ಕು ವೇದಗಳೂ, ಸಕಲ ಶಾಸ್ತ್ರಗಳೂ, ದೇವದೇವತೆಗಳೂ, ವ್ರತವೈಕಲ್ಯಗಳೂ, ಇತ್ಯಾದಿಗಳು ಬೇರೆ ಬೇರೆ ಎಂದು ಭಾವಿಸುತ್ತಿದ್ದೆ. ಆದರೆ ಸಾರ್ವಭೌಮರಾದ ಸದ್ಗುರುಗಳ ಕೃಪಾಪ್ರಸಾದದಿಂದ ನನಗೆ ಎಲ್ಲೆಡೆಗೆ ಐಕ್ಯವೆ ಕಂಗೊಳಿಸತೊಡಗಿದೆ. ಆದುದರಿಂದ ವ್ರತಗಳೆಲ್ಲ ನಾನೇ ಆಗಿರುವೆ, ಶ್ರೀಗುರು-ಲಿಂಗ-ಜಂಗಮನೂ-ನೀನೂ ನಾನೇ ಆಗಿರುವೆ. ( ಎಲ್ಲ ಧರ್ಮಗಳ ಮೂಲ ತತ್ವವು ಒಂದೇ ಇರುವದೆಂಬದು ಈ ಪದದಲ್ಲಿಯ ಮುಖ್ಯ ಗರ್ಭಿತ ಸಿದ್ಧಾಂತವು. ) ಪದ ೫ : ಎಲೈ ದೇವನೇ ! ಎನ್ನ ಮನಸ್ಸಿನ ಕೊಂಕನ್ನು ಸರಿ ಪಡಿಸಯ್ಯ ! ಬೆಳಿಗ್ಗೆ ಎದ್ದೊಡನೆ ಅದು ಹೆರವರ ಧನವನ್ನು ಅಪಹರಿಸ ಬಯಸುವದು, ಸಜ್ಜನರನ್ನು ನಿಂದಿಸುವದು, ಬಲ್ಲವರನ್ನು ಮೆಚ್ಚಿಸುವದು, ಬಡವರನ್ನು ನೋಯಿಸುವದು. ಯಮನ ಹೆದರಿಕೆಯಿಂದ ಅದು ಒಮ್ಮೊಮ್ಮೆ ವೈರಾಗ್ಯ ತಾಳಿ ಕಾಶಿಯಾತ್ರೆಗೆ ಹೊರಡುವದು. ಆದರೆ ದಾರಿಯಲ್ಲಿಯೇ