ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಭಾವೂಸಾಹೇಬ ಮಹಾರಾಜರವರು ವೇಶ್ಯಗೆ ಮೆಚ್ಚಿ, ನಿಮ್ಮನ್ನು ಮರೆಯುವದು. ಈ ಮೇರೆಗೆ ಅದು ಸದ್ಗುರುಗಳ ಚರಣವ ನಂಬದೆ, ಅಡವಿಬಿದ್ದು ಅತ್ತಿತ್ತ ಅಲೆಯುವದು. ಇಂಥ ಮನಸ್ಸಿನ ಮಂಗತನವನ್ನು ಮಾಣಿಸಯ್ಯ ಪ್ರಭುವೆ ! ಪದ ೬ :- ಎಲ್ಲವನ್ನು ನೆರವೇರಿಸುವನು ಶಿವನೇ ಇರುತಿರುವಲ್ಲಿ ಚಿಂತಿಸುವದೇಕಯ್ಯ ? ಉದಕದಲ್ಲಿ ಉತ್ಪತ್ತಿಯನ್ನು ಮಾಡಿದವರಾರು ? ಒಡಲಲ್ಲಿಯ ಶಿಶುವನ್ನು ಸಲಹಿದವರಾರು? ಹಿಂದೆ ನಿನ್ನನ್ನು ಕಾಯ್ದವರಾರು? ಮುಂಗೆ ನಿನ್ನನ್ನು ಕೊಲ್ಲುವವರಾರು ? ಅಂದಿಗೂ, ಇಂದಿಗೂ ಎಂದೆಂದಿಗೂ ಇರುವವ ಶಿವನೇ ಅಲ್ಲವೆ? ಅಂಬರವನ್ನು ಅಂತರದಲ್ಲಿರಿಸಿದವರಾರು ? ರವಿಶಶಿಗಳನ್ನು ತಮ್ಮ ತಮ್ಮ ದಾರಿಯಲ್ಲಿ ನಡೆಯಿಸುವರಾರು ? ಗುರು - ಲಿಂಗ-ಜಂಗಮನಾದ ಸರ್ವೇಶ ಶಿವನೇ ಅಲ್ಲವೆ ? ಇಂಥ ಶಿವನಿರುವಾಗ ಚಿಂತಿಯದೇತಕಯ್ಯ ? ಪದ ೭ : ಅಂತರಂಗವು ಒಂದು ಬಿರುಸಾದ ಕಲ್ಲು. ಅದನ್ನು ಮೃದುಗೊಳಿಸುವ ಕಲೆಯನ್ನು ಬಲ್ಲವರಿಂದ ಅರಿತುಕೊಳ್ಳಯ್ಯ ! ಅಂದರೆ ಅದೇ ಕಲ್ಲುಸಕ್ಕರೆಗಿಂತ ಸವಿಯಾಗಬಹುದು. ಅದು ಮಿದುವಾದೊಡನೆ, ನಿನಗೆ ನಾಮಾಮೃತವು ದೊರೆತು, ಅಂತರಂಗದಲ್ಲಿ ಜ್ಞಾನಜ್ಯೋತಿಯು ತುಂಬಿಕೊಳ್ಳುವದು ಈ ಕಲ್ಲನ್ನೊಡೆಯದೆ, ಇದರಲ್ಲಿಯ ಪರಬ್ರಹ್ಮರೂಪಿ ಯಾದ ಪರುಷ ಕೈವಶವಾಗುವದೆಂತು ? ಇದನ್ನು ಒಡೆದೆಯೆ ಅಲ್ಲಮ ಪ್ರಭುವು ದಿವ್ಯ ಸೆಲೆಯನ್ನು ತೆಗೆದನು. ಮತ್ತು ನೀರು ನೀರನ್ನು ಕೂಡಲು ಆತನಲ್ಲಿಯ ಭೇದಭಾವವು ಅಳಿಯಿತು. ಈ ಕಲ್ಲು ಒಂದು ಕಲ್ಪವೃಕ್ಷವೇ ಸರಿ. ಹೀಗಿರು ಅದು ಬಯಸಿದ ಫಲಗಳನ್ನು ಕೊಟ್ಟರೆ ಆಶ್ಚರ್ಯವೇನು ? ಬೆಲ್ಲದಲ್ಲಿ ಸವಿಯು ಕೂಡಿಕೊಳ್ಳುವಂತೆ, ಗುರು-ಲಿಂಗ-ಜಂಗಮನಲ್ಲಿ ಎಂದಿಗೂ ಅಗಲದಂತೆ ಕೂಡಿಕೊಳ್ಳಯ್ಯ ನೀನು! ಪದ ೮ : ನೀನೆನ್ನ ಸರಿಯವನಿರುವಾಗ, ನಾನು ಬಡವನು ಪರದೇಶಿಯು ಆಗುವದೆಂತು ? ನಿನಗೆ ಕ್ಷಯವಿಲ್ಲ, ಎನಗೆ ಭಯವಿಲ್ಲ. ಎನ್ನೊಡೆಯನೇ ! ನೀನು ಎನ್ನ ನಿಜರೂಪವೇ ಇರುವಿ. ಎನ್ನ ಒಡಲಿಗೆ ಹಾಕುವ ತಾಯಿತಂದೆ, ಬಂಧುಬಳಗ ಎಲ್ಲವೂ ನೀನೇ ಅಯ್ಯ ! ನನಗೆ